Ravi Shastri: ಭಾರತೀಯ ಕ್ರಿಕೆಟ್ನ ಸ್ಟಾರ್ ಆಟಗಾರ ಚೇತೇಶ್ವರ ಪೂಜಾರ ನಿವೃತ್ತಿಯ ಬಗ್ಗೆ ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಬಗ್ಗೆ ಕೆಲವು ವಿಶೇಷ ಮಾತುಗಳನ್ನು ಆಡಿದ್ದಾರೆ.
ಈ ಪೂಜಾರ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮಾಜಿ ಕೋಚ್, 2020-21ರ ಆಸ್ಟ್ರೇಲಿಯಾ ಪ್ರವಾಸದಲ್ಲಿ, ಪೂಜಾರ ವಿಕೆಟ್ ನೀಡಲು ನಿರಾಕರಿಸಿದ್ದರಿಂದ ಬೌಲರ್ಗಳು ದೇಹದ ಮೇಲೆ ಹೊಡೆತಗಳನ್ನು ನೀಡುತ್ತಲೇ ಇದ್ದರು. ಭಾರತವು ಎಲ್ಲಾ ಕಂಡಿಷನ್ ವಿರುದ್ಧ ಗೆದ್ದ ಗಬ್ಬಾ ಟೆಸ್ಟ್‌ನಲ್ಲಿ, ದೇಹದ ಮೇಲೆ 11 ಹೊಡೆತ ಬಿದ್ದಿತ್ತು ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಶಾಸ್ತ್ರಿ, ಪೂಜಾರ ಒಬ್ಬ ಯೋಧ ಎಂದು ಕರೆದಿದ್ದಾರೆ. ನನ್ನ ಕೋಚಿಂಗ್ ಅವಧಿಯಲ್ಲಿ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಸೋಲಿಸಬೇಕಾದ ತಂಡವಾಯಿತು ಮತ್ತು ಟೆಸ್ಟ್‌ನಲ್ಲಿ ಜಗತ್ತಿನಲ್ಲಿ ನಂ.1 ಸ್ಥಾನಕ್ಕೆ ಏರಿತು. ಪೂಜಾರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಂಸತ್ತು ಚರ್ಚೆಯ ಸ್ಥಳವಾಗಿದೆ, ವಿರೋಧ ಪಕ್ಷಗಳು ಯಾವಾಗಲೂ ಸಂಯಮದಿಂದಿರಬೇಕು: ಕೇಂದ್ರ ಗೃಹ ಸಚಿವ ಅಮಿತ್ ಶಾ| Amit Shah
ಭಾರತ ಸತತ 5 ವರ್ಷಗಳ ಕಾಲ ನಂಬರ್ 1 ಸ್ಥಾನ ಗಳಿಸುವಲ್ಲಿ ಮತ್ತು ಆಸ್ಟ್ರೇಲಿಯಾದಲ್ಲಿ ಸತತ 2 ಸರಣಿ ಗೆಲುವುಗಳಲ್ಲಿ ಪೂಜಾರ ಪ್ರಮುಖ ಪಾತ್ರ ವಹಿಸಿದ್ದರು. ಅಸ್ಟ್ರೇಲಿಯಾದಲ್ಲಿ ಪೂಜಾರ ಆಟ ಅದ್ಭುತವಾಗಿತ್ತು. ಚೆನ್ನಾಗಿ ಮಾಡಿದ್ದೀರಿ ಪೂಜಿ. ದೇವರು ನಿಮಗೆ ಒಳ್ಳೆಯದಾಗಲಿ ಎಂದು ಶಾಸ್ತ್ರಿ ಪೋಸ್ಟ್ನಲ್ಲಿಬರೆದಿದ್ದಾರೆ.
ಪೂಜಾರ 2010 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಮಾದರಿಗೆ ಪಾದಾರ್ಪಣೆ ಮಾಡಿದರು. 2012 ರಲ್ಲಿ ಹೈದರಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಮೊದಲ ಶತಕವನ್ನು ದಾಖಲಿಸಿದರು. ಒಂದೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 500 ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿದ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಭಾರತವನ್ನು 103 ಟೆಸ್ಟ್ ಮತ್ತು 5 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಎರಡೂ ಸ್ವರೂಪಗಳಲ್ಲಿ 7,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.(ಏಜೆನ್ಸೀಸ್)