Rishad Hossain: ಕದನ ವಿರಾಮಕ್ಕೂ ಮೊದಲು ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆ ಪಾಕ್ನಲ್ಲಿ ನಡೆಯುತ್ತಿದ್ದ ಪಿಎಸ್ಎಲ್ ಕ್ರಿಕೆಟ್ ಲೀಗ್ನ ಅಲ್ಲಿನ ಸರ್ಕಾರ ರದ್ದುಗೊಳಿಸಿದೆ. ಒಂದೆಡೆ ಭಾರತ ಐಪಿಎಲ್ ಲೀಗ್ನ ಒಂದು ವಾರಕ್ಕೆ ಮುಂದೂಡಿಕೆ ಮಾಡುತ್ತಿದ್ದಂತೆ ಇದೀಗ ಪಿಎಸ್ಎಲ್ ರದ್ದಾಗಿದೆ. ಎರಡೂ ದೇಶಗಳ ನಡುವೆ ನಡೆಯುತ್ತಿದ್ದ ದಾಳಿಯಲ್ಲಿ ತಾವು ಅನುಭವಿಸಿದ ಪರಿಸ್ಥಿತಿಯನ್ನು ಪಿಎಸ್ಎಲ್ ಆಟಗಾರ ಮನಬಿಚ್ಚಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಭಾರತದೊಂದಿಗೆ ಕದನ ವಿರಾಮ! ಟ್ರಂಪ್ ಮಧ್ಯಸ್ಥಿಕೆಗೆ ಧನ್ಯವಾದ ತಿಳಿಸಿದ ಪಾಕ್ ಪ್ರಧಾನಿ ಷರೀಫ್ | Cease Fire
2025ರ ಪಿಎಸ್ಎಲ್ನಲ್ಲಿ ಲಾಹೋರ್ ಖಲಂದರ್ಸ್ ತಂಡದ ಪರ ಆಡುತ್ತಿದ್ದ ಬಾಂಗ್ಲಾದೇಶಿ ಲೆಗ್ ಸ್ಪಿನ್ನರ್ ರಿಷದ್ ಹೊಸೈನ್ ಮಾತನಾಡಿ, "ಪಾಕ್ ಮತ್ತು ಭಾರತ ನಡುವಿನ ಉದ್ವಿಗ್ನತೆಯಿಂದ ನಾವು ಭಯಾನಕ ಅನುಭವವನ್ನು ಎದುರಿಸಿದೆವು. ವಿದೇಶಿ ಆಟಗಾರರು ಪಾಕಿಸ್ತಾನದಿಂದ ಹೊರಹೋಗಲು ಪ್ರಯತ್ನಿಸಿದಾಗ ಭಯಭೀತರಾಗಿದ್ದರು. ಸ್ಯಾಮ್ ಬಿಲ್ಲಿಂಗ್ಸ್, ಡ್ಯಾರಿಲ್ ಮಿಚೆಲ್, ಕುಶಾಲ್ ಪೆರೆರಾ, ಡೇವಿಡ್ ವೈಸ್, ಟಾಮ್ ಕರನ್ ಮುಂತಾದ ವಿದೇಶಿ ಆಟಗಾರರು ಈ ಬೆಳವಣಿಗೆಯಿಂದ ತುಂಬಾ ಭಯಭೀತರಾಗಿದ್ದರು" ಎಂದರು.
"ನಾವು ದುಬೈಗೆ ಬಂದಿಳಿದ ತಕ್ಷಣ ಡ್ಯಾರಿಯಲ್ ಮಿಚೆಲ್ ಅವರು, ನಾನು ಇನ್ಯಾವತ್ತು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದರು. ಒಟ್ಟಾರೆಯಾಗಿ ವಿದೇಶಿ ಆಟಗಾರರೆಲ್ಲರೂ ಗಾಬರಿಗೊಂಡಿದ್ದರು. ಇಂಗ್ಲೆಂಡ್ ಕ್ರಿಕೆಟರ್ ಟಾಮ್ ಕರನ್ ಪರಿಸ್ಥಿತಿ ನೆನೆದು ಕಣ್ಣೀರಿಡುತ್ತಿದ್ದರು. ಇಂತಹ ಸವಾಲಿನ ಸಮಯದಲ್ಲಿ ಅವರನ್ನು ಸಮಾಧಾನಪಡಿಸಲು ಕೆಲವು ಜನರ ಅಗತ್ಯವಿತ್ತು. ಕರನ್ ಏರ್ಪೋರ್ಟ್ಗೆ ತೆರಳಿದಾಗ ಅದು ಬಂದ್ ಆಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಮುಂದೇನು ಎಂದು ಕುಳಿತಲ್ಲೇ ಅಳಲು ಪ್ರಾರಂಭಿಸಿದರು. ಆಗ ಕರನ್ರನ್ನು ನಾವೆಲ್ಲ ಸಮಾಧಾನ ಮಾಡಿದೆವು" ಎಂದು ರಿಷದ್ ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).