ಕ್ರೀಡೆ

ಪ್ರೊ ಕಬಡ್ಡಿ ಲೀಗ್​ನಲ್ಲಿ ಪಟನಾ ಪೈರೇಟ್ಸ್​​ಗೆ ಸೋಲುಣಿಸಿ ಅಗ್ರಸ್ಥಾನಕ್ಕೇರಿದ ಬೆಂಗಾಲ್ ವಾರಿಯರ್ಸ್​​

ಬೆಂಗಳೂರು: ನಾಯಕ ಮಣಿಂದರ್​ ಸಿಂಗ್​ (15 ಅಂಕ) ಭರ್ಜರಿ ರೈಡಿಂಗ್​ ಬಲದಿಂದ ಬೆಂಗಾಲ್​ ವಾರಿಯರ್ಸ್​ ತಂಡ ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯಲ್ಲಿ ಸತತ 3ನೇ ಪಂದ್ಯದಲ್ಲೂ ಅಜೇಯ ಓಟ ಮುಂದುವರಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮಂಗಳವಾರ ನಡೆದ ಮಾಜಿ ಚಾಂಪಿಯನ್​ಗಳ ಮುಖಾಮುಖಿಯಲ್ಲಿ ಬೆಂಗಾಲ್​ ತಂಡ 60-42 ಅಂಕಗಳಿಂದ ಪಟನಾ ಪೈರೇಟ್ಸ್​ ಎದುರು ಗೆಲುವು ದಾಖಲಿಸಿತು.

ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಬೆಂಗಳೂರು ಚರಣದ ಪಂದ್ಯದಲ್ಲಿ ಬೆಂಗಾಲ್​ ತಂಡ ಮೊದಲಾರ್ಧದಲ್ಲೇ 27-16ರಿಂದ ಮುನ್ನಡೆ ಸಾಧಿಸಿ ಪ್ರಾಬಲ್ಯ ಮೆರೆಯಿತು.

ನಿತಿನ್​ ಕುಮಾರ್​ (14) ಮತ್ತು ಶ್ರೀಕಾಂತ್​ ಜಾಧವ್​ (12) ರೈಡಿಂಗ್​ನಲ್ಲಿ ಮಣಿಂದರ್​ಗೆ ಸಮರ್ಥ ಸಾಥ್​ ನೀಡಿದರು. ಪಟನಾ ಪರ ಸಚಿನ್​ (14) ಮತ್ತು ಎಂ. ಸುಧಾಕರ್​ (14) ದ್ವೀತಿಯಾರ್ಧದಲ್ಲಿ ದಿಟ್ಟ ತಿರುಗೇಟು ನೀಡಲು ಯತ್ನಿಸಿದರೂ, ಗೆಲುವು ಒಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಾಯಕ ನೀರಜ್​ ಕುಮಾರ್​ ಸಾರಥ್ಯದ ಪಟನಾದ ರಕ್ಷಣಾ ವಿಭಾಗ ತೀವ್ರ ನಿರಾಸೆ ಮೂಡಿಸಿತು.