ಕ್ರೀಡೆ

ವಿಶ್ವದ ನಂ.1 ಚೆಸ್‌ ಮಾಸ್ಟರ್‌ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಪ್ರಜ್ಞಾನಂದಗೆ ಮೊದಲ ಗೆಲವು!

ಓಸ್ಲೋ: ಭಾರತದ ಚೆಸ್ ಗ್ರ್ಯಾಂಡ್‌ ಮಾಸ್ಟರ್‌ ಖ್ಯಾತಿಯ ಆರ್‌. ಪ್ರಜ್ಞಾನಂದ ವಿಶ್ವದ ನಂ.1 ಚೆಸ್‌ ಮಾಸ್ಟರ್‌ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ಗೆ ವಿರುದ್ಧ ಗೆಲುವು ಪಡೆದಿದ್ದಾರೆ.

ಬುಧವಾರ ತಡರಾತ್ರಿ ನಡೆದ ನಾರ್ವೆ ಚೆಸ್ ಟೂರ್ನಿಯ 3ನೇ ಸುತ್ತಿನಲ್ಲಿ ಪ್ರಜ್ಞಾನಂದ ಈ ಸಾಧನೆ ಮಾಡಿದ್ದಾರೆ. ಇದು 6 ಬಾರಿ ವಿಶ್ವ ಚೆಸ್‌ ಚಾಂಪಿಯನ್‌ ಕಾರ್ಲ್‌ಸನ್‌ ವಿರುದ್ಧ ಪ್ರಜ್ಞಾನಂದಗೆ ಒಲಿದ ಮೊದಲ ಗೆಲುವು ಆಗಿದೆ. ಮೂರು ಸುತ್ತಿನ ಬಳಿಕ ಅಂಕಪಟ್ಟಿಯಲ್ಲಿ ಪ್ರಜ್ಞಾನಂದ ಅವರು 5.5 ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನ ಪಡೆದರೆ, ಕಾರ್ಲ್‌ಸನ್‌ 3 ಪಾಯಿಂಟ್‌ಗಳೊಂದಿಗೆ 5ನೇ ಸ್ಥಾನ ಪಡೆದುಕೊಂಡಿದ್ದಾರೆ.

ಫೈನಲ್ ಟೈ ಬ್ರೇಕರ್ ಸುತ್ತಿನಲ್ಲಿ ಪ್ರಜ್ಞಾನಂದ ವಿರುದ್ಧವೇ ಗೆಲುವು ಸಾಧಿಸಿ ಮ್ಯಾಗ್ನಸ್ ಕಾರ್ಲ್‌ಸೆನ್ ಗೆಲುವು ಸಾಧಿಸಿ 6ನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿದ್ದರು. ಭಾರತೀಯ ಚೆಸ್‌ಪಟು ಪ್ರಜ್ಞಾನಂದಗೆ ಅಂದು ಸೋಲಾಗಿ ರನ್ನರ್‌ ಅಪ್‌ ಪ್ರಶಸ್ತಿಗೆ ಸಮಾಧಾನ ಮಾಡಿಕೊಂಡಿದ್ದರು.