ಬೆಂಗಳೂರು: ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 15ನೇ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಭಾರೀ ಪೈಪೋಟಿಗೆ ಇಳಿದಿವೆ. ಟಾಸ್ ಗೆದ್ದ ಆರ್ಸಿಬಿ ಮೊದಲು ಬೌಲಿಂಗ್ ಆಯ್ದುಕೊಂಡು, ಬ್ಯಾಟಿಂಗ್ ಮಾಡಲು ಲಕ್ನೋಗೆ ಆಹ್ವಾನಿಸಿತು. ಇದೀಗ 20 ಓವರ್ಗಳಲ್ಲಿ ಎಲ್ಎಸ್ಜಿ 14 ರನ್ಗಳನ್ನು ಗಳಿಸುವಲ್ಲಿ ಶಕ್ತವಾಯಿತು.
ಇದನ್ನೂ ಓದಿ: ಜಲಾಗಾರಕ್ಕೆ ಶಾಸಕ ರುದ್ರಪ್ಪ ಲಮಾಣಿ ಭೇಟಿ; ನೀರಿನ ಶುದ್ಧೀಕರಣ ಘಟಕ ಪರಿಶೀಲನೆ; ಅಧಿಕಾರಿಗಳಿಂದ ಮಾಹಿತಿ ಪಡೆದ ಉಪಸಭಾಧ್ಯಕ್ಷರು
ಮೊದಲು ಬ್ಯಾಟಿಂಗ್ಗೆ ಬಂದ ಕ್ವಿಂಟನ್ ಡಿ ಕಾಕ್ ಮತ್ತು ಕ್ಯಾಪ್ಟನ್ ಕೆ.ಎಲ್. ರಾಹುಲ್ ಉತ್ತಮ ಆರಂಭವನ್ನು ಕೊಟ್ಟರು. 56 ಎಸೆತಗಳಲ್ಲಿ 81 ರನ್ ಸಿಡಿಸಿದ ಕಾಕ್ ರಿಸಿಗೆ ವಿಕೆಟ್ ಒಪ್ಪಿಸಿದರು. ತದನಂತರದಲ್ಲಿ ರಾಹುಲ್ ಕೂಡ ಪೆವಿಲಿಯನ್ ಹಾದಿ ಹಿಡಿದಿದ್ದು, ಕೇವಲ 20 ರನ್ ಕೊಡುಗೆಯಾಗಿ ನೀಡಿದರು. ಉಳಿದಂತೆ ದೇವದತ್ತ ಪಡಿಕ್ಕಲ್ 6, ಮಾರ್ಕಸ್ ಸ್ಟೋಯಿನಿಸ್ 24, ಆಯುಷ್ ಬದೋನಿ ಶೂನ್ಯಕ್ಕೆ ಔಟ್ ಆದರು.
ಎಂದಿನಂತೆ ಸ್ಪೋಟಕ ಬ್ಯಾಟಿಂಗ್ ಮಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದು, ನಿಕೋಲಸ್ ಪೂರನ್. 18ನೇ ಓವರ್ನಲ್ಲಿ ಟೋಫ್ಲಿ ಬೌಲಿಂಗ್ಗೆ ಮೂರು ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿ ಸ್ಕೋರ್ನ ಲೆಕ್ಕಾಚಾರಗಳನ್ನು ಬದಲಾಯಿಸಿದರು. 21 ಎಸೆತಗಳಲ್ಲಿ 40 ರನ್ ಗಳಿಸುವ ಮೂಲಕ ತಂಡದ ಸ್ಕೋರ್ ಅನ್ನು 181ಕ್ಕೆ ತಲುಪಿಸಿದರು. ಇದೀಗ ಆರ್ಸಿಬಿ ತಂಡಕ್ಕೆ 182 ರನ್ ಗುರಿ ತಲುಪುವುದು ಎಷ್ಟು ದೊಡ್ಡ ಸವಾಲಾಗಲಿದೆ ಎಂಬುದನ್ನು ಕಾದು ನೋಡಬೇಕು.