ಕ್ರೀಡೆ

ಮುಂಬೈ ತಂಡದ ಪೊಲಾರ್ಡ್, ಡೇವಿಡ್​ಗೆ ಬಿಸಿಸಿಐ ದಂಡ..ಕಾರಣ ಕೇಳಿದ್ರೆ ಹೌಹಾರ್ತೀರಾ!

ಮುಂಬೈ: ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ತಂಡದ ಬ್ಯಾಟಿಂಗ್ ಕೋಚ್ ಕೀರಾನ್ ಪೊಲಾರ್ಡ್‌ ಹಾಗೂ ತಂಡದ ಬ್ಯಾಟಿಂಗ್ ಆಲ್​ರೌಂಡರ್ ಟಿಮ್ ಡೇವಿಡ್ ಅವರು ಐಪಿಎಲ್ ನಿಯ ಉಲ್ಲಂಘಿಸಿದ್ದಕ್ಕೆ ಬಿಸಿಸಿಐ ದಂಡ ವಿಧಿಸಿದೆ.

ಏಪ್ರಿಲ್ 18ರಂದು ನಡೆದ ಮುಂಬೈ ಮತ್ತು ಪಂಜಾಬ್ ನಡುವಿನ ಪಂದ್ಯದಲ್ಲಿ ಈ ಇಬ್ಬರು ಕ್ರಿಕೆಟಿಗರು ಐಪಿಎಲ್ ನಿಯಮಗಳನ್ನು ಮುರಿದು ಸ್ಟ್ರೈಕ್​ನಲ್ಲಿದ್ದ ಸೂರ್ಯಕುಮಾರ್ ಗೆ ಡಿಆರ್ ಎಸ್ ತೆಗೆದುಕೊಳ್ಳುವಂತೆ ಸನ್ನೆ ಮಾಡಿದ್ದರು. ಈ ಇಬ್ಬರ ಮೋಸದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇನ್ನು ಈ ಇಬ್ಬರು ಸನ್ನೆ ಮಾಡುತ್ತಿರುವುದನ್ನು ಗಮನಿಸಿದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಸ್ಯಾಮ್ ಕರನ್ ಈ ವಿಚಾರವನ್ನು ಫೀಲ್ಡ್ ಅಂಪೈರ್ ಗೆ ತಿಳಿಸಿದ್ದರು. ಆದರೆ ಆ ವೇಳೆ ಫೀಲ್ಡ್ ಅಂಪೈರ್ ಕರನ್ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ಈ ಇಬ್ಬರ ನಿಯಮ ಉಲ್ಲಂಘನೆಗೆ ಬಿಸಿಸಿಐ ದಂಡ ವಿಧಿಸಿದೆ.