ಹೈದರಾಬಾದ್: ಯುವ ರೈಡರ್ ಅಕ್ಷಿತ್ (9) ದ್ವೀತಿಯಾರ್ಧದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದು ತೋರಿದ ಅದ್ಭುತ ನಿರ್ವಹಣೆಯ ಬಲದಿಂದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ತೆಲುಗು ಟೈಟಾನ್ಸ್ ಎದುರು 42-26ರಿಂದ ಗೆಲುವು ದಾಖಲಿಸಿದೆ.
ಶುಕ್ರವಾರ ಆರಂಭಗೊಂಡ ಹೈದರಾಬಾದ್ ಚರಣದ ಮೊದಲ ಪಂದ್ಯದಲ್ಲಿ ಬುಲ್ಸ್ ಮೊದಲಾರ್ಧದಲ್ಲಿ 9-12ರಿಂದ ಹಿನ್ನಡೆಯಲ್ಲಿತ್ತು. ಬಳಿಕ ದ್ವೀತಿಯಾರ್ಧದಲ್ಲಿ ತೆಲುಗು ತಂಡವನ್ನು 3 ಬಾರಿ ಆಲೌಟ್ ಬಲೆಗೆ ಬೀಳಿಸುವ ಮೂಲಕ ಭರ್ಜರಿ ತಿರುಗೇಟು ನೀಡಿತು. ಬುಲ್ಸ್ಗೆ ಇದು ಆಡಿದ 13 ಪಂದ್ಯಗಳಲ್ಲಿ 5ನೇ ಗೆಲುವಾಗಿದೆ.
ದಿನದ 2ನೇ ಪಂದ್ಯದಲ್ಲಿ ಪಟನಾ ಪೈರೇಟ್ಸ್ 34-31ರಿಂದ ಯುಪಿ ಯೋಧಾಸ್ ಎದುರು ಗೆದ್ದಿತು.