ಕ್ರೀಡೆ

ಮಹಿಳೆಯರ ಕ್ರಿಕೆಟ್​ನಲ್ಲಿ ವಿಶೇಷ ಸಾಧನೆ ಮಾಡಿದ ಆಸೀಸ್​ ಆಲ್ರೌಂಡರ್​ ಎಲ್ಲಿಸ್ ಪೆರ್ರಿ!

ಮುಂಬೈ: ಆಲ್ರೌಂಡರ್​ ಎಲ್ಲಿಸ್​ ಪೆರ್ರಿ ಭಾರತ ವಿರುದ್ಧ 2ನೇ ಟಿ20ಯಲ್ಲಿ ಕಣಕ್ಕಿಳಿಯುವ ಮೂಲಕ 300 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ವಿಶ್ವದ 4ನೇ ಹಾಗೂ ಆಸ್ಟ್ರೆಲಿಯಾದ ಮೊದಲ ಮಹಿಳಾ ಕ್ರಿಕೆಟರ್​ ಎನಿಸಿದ್ದಾರೆ.

ಭಾರತದ ಮಿಥಾಲಿ ರಾಜ್​ 333 ಪಂದ್ಯ ಆಡಿರುವುದು ಗರಿಷ್ಠವೆನಿಸಿದ್ದರೆ, ಇಂಗ್ಲೆಂಡ್​ನ ಚಾಲೋರ್ಟ್​ ಎಡ್ವರ್ಡ್ಸ್​ (309) ಮತ್ತು ನ್ಯೂಜಿಲೆಂಡ್​ನ ಸೂಜಿ ಬೇಟ್ಸ್​ (309) ನಂತರದ ಇಬ್ಬರು ಸಾಧಕಿಯರಾಗಿದ್ದಾರೆ.

33 ವರ್ಷದ ಎಲ್ಲಿಸ್​ ಪೆರ್ರಿ 12 ಟೆಸ್ಟ್​, 141 ಏಕದಿನ ಮತ್ತು 147 ಟಿ20 ಪಂದ್ಯಗಳನ್ನು ಆಡುವ ಮೂಲಕ 300ರ ಮೈಲಿಗಲ್ಲು ನೆಟ್ಟಿದ್ದು, 400 ಪಂದ್ಯಗಳನ್ನು ಆಡುವುದು ತನ್ನ ಕನಸು ಎಂದು ಹೇಳಿಕೊಂಡಿದ್ದಾರೆ. ಎಲ್ಲಿಸ್​ ಪೆರ್ರಿ ಆಸ್ಟ್ರೆಲಿಯಾ ಪರ ಫುಟ್​ಬಾಲ್​ನಲ್ಲೂ ಆಡಿದ್ದು, 3 ಗೋಲು ಸಿಡಿಸಿದ ದಾಖಲೆ ಹೊಂದಿದ್ದಾರೆ.