ಕ್ರೀಡೆ

ಜನರ ಮಧ್ಯೆ ಕಾಣಿಸಿಕೊಂಡ ಕೊಹ್ಲಿ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್

ಮುಂಬೈ: ಅಯೋಧ್ಯೆಯಲ್ಲಿ ಶ್ರೀರಾಮ ಮತ್ತೆ ಪಟ್ಟಕ್ಕೇರಿದ್ದಾನೆ. ಆರಾಧ್ಯ ದೈವ ರಾಮ ಧರ್ಮಭೂಮಿಯಲ್ಲಿ ಪ್ರತಿಷ್ಠಾಪನೆಗೊಂಡ ಸಂದರ್ಭವನ್ನು ಕಣ್ತುಂಬಿಕೊಂಡು ಭಕ್ತರು ಧನ್ಯತಾಭಾವ ಮೆರೆದಿದ್ದಾರೆ. ‘ಹೇ ರಾಮ’ ನಮ್ಮ ಜನ್ಮ ಸಾರ್ಥಕವಾಯಿತು ಎಂದು ಜನ ಭಕ್ತಿಯ ಪರಾಕಾಷ್ಠೆ ಮೆರೆದರು.

ಟೀಂ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ, ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಅವರನ್ನು ಅಯೋಧ್ಯೆ ರಾಮ ಮಂದಿರದ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ವಿರಾಟ್​ ಕೊಹ್ಲಿ ದಂಪತಿಗಳು ಭಾಗವಹಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಆದರೆ ಟೀಮ್ ಇಂಡಿಯಾದ ಜೆರ್ಸಿಯನ್ನು ಧರಿಸಿದ್ದ ವಿರಾಟ್ ಕೊಹ್ಲಿ ಅಯೋಧ್ಯೆಗೆ ಬಂದಿದ್ದಾರೆ. ಅವರ ಅಭಿಮಾನಿಗಳು ಸೆಲ್ಫಿಗಾಗಿ ಸುತ್ತುವರೆದಿದ್ದನ್ನು ಇದನ್ನು ಕಂಡ ಪೊಲೀಸರು ಗುಂಪು ಚದುರಿಸಿದ್ದರು. ವಿರಾಟ್ ಕೊಹ್ಲಿಯನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ ಮತ್ತು ಅವರನ್ನು ಭೇಟಿ ಮಾಡಲು ಮತ್ತು ಸೆಲ್ಫಿ ತೆಗೆದುಕೊಳ್ಳಲು ಬಯಸಿದ ವ್ಯಕ್ತಿಯ ಸುತ್ತಲೂ ಅಪಾರ ಜನಸ್ತೋಮ ನೆರೆದಿತ್ತು ಈ ವಿಡಿಯೋ ಸಖತ್​ ವೈರಲ್​ ಆಗಿದೆ.

ಜನಸಂದಣಿಯಿಂದ ತಪ್ಪಿಸಿಕೊಳ್ಳುವ ಅವರ ಪ್ರಯತ್ನವು ವಿಫಲವಾಯಿತು. ಇದಲ್ಲದೆ, ಅಯೋಧ್ಯೆಯಲ್ಲಿ ಸಚಿನ್ ತೆಂಡೂಲ್ಕರ್ ಅವರಂತೆಯೇ ಕಾಣಿಸಿಕೊಂಡರು. ಸೋಮವಾರ ನಡೆದ ರಾಮಮಂದಿರ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾವಿರಾರು ಭಕ್ತರು ನಗರಕ್ಕೆ ಆಗಮಿಸಿದ್ದರು. ಉದ್ಯಮಿಯಿಂದ ವಿವಿಧ ಕ್ರೀಡಾಪಟುಗಳು, ಅನೇಕ ಸೆಲೆಬ್ರಿಟಿಗಳು ಸಮಾರಂಭದ ಭಾಗವಾಗಿದ್ದರು.

ಹರಿಯಾಣದ ಕಾರ್ತಿಕ್ ಶರ್ಮಾ ಎಂಬ ವ್ಯಕ್ತಿ, ನೋಡೋಕೆ ಥೇಟ್‌ ವಿರಾಟ್‌ ಕೊಹ್ಲಿ ಥರಾನೆ ಇದ್ದಾರೆ. ಜನರು ಕೂಡಾ ಅವರನ್ನು ವಿರಾಟ್‌ಗೆ ಹೋಲಿಸುವ ಕಾರಣದಿಂದಾಗಿ ಅವರು ಈಗಾಗಲೇ ವ್ಯಾಪಕವಾಗಿ ಗಮನ ಸೆಳೆದಿದ್ದಾರೆ. ಅಯೋಧ್ಯೆಯಲ್ಲಿ ಕಾಣಿಸಿಕೊಂಡ ವ್ಯಕ್ತಿಯೋ ಇವರೇ ಇರಬಹುದು ಎನ್ನಲಾಗಿದೆ.