ಅಹಮದಾಬಾದ್: ಸಚಿನ್ (14 ಅಂಕ) ನಡೆಸಿದ 12 ಯಶಸ್ವಿ ರೈಡಿಂಗ್ಗಳ ಬಲದಿಂದ ಮೂರು ಬಾರಿಯ ಚಾಂಪಿಯನ್ ಪಟನಾ ಪೈರೇಟ್ಸ್ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಗೆ ಭರ್ಜರಿ ಗೆಲುವಿನ ಎಂಟ್ರಿ ನೀಡಿದೆ. ಪಟನಾ ತಂಡ ತನ್ನ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಎದುರು 50-28 ಅಂಕಗಳಿಂದ ಸುಲಭ ಜಯ ಸಾಧಿಸಿತು.
ಟ್ರಾನ್ಸ್ಸ್ಟಡಿಯಾದಲ್ಲಿ ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಮೊದಲಾರ್ಧದಲ್ಲೇ ತೆಲುಗು ತಂಡವನ್ನು 2 ಬಾರಿ ಆಲೌಟ್ ಬಲೆಗೆ ಬೀಳಿಸಿ 28&16ರಿಂದ ಭಾರಿ ಮುನ್ನಡೆ ಸಾಧಿಸಿದ ಪಟನಾ, ದ್ವಿತೀಯಾರ್ಧದಲ್ಲೂ ಮೇಲುಗೈ ಉಳಿಸಿಕೊಂಡಿತು. ತೆಲುಗು ಟೈಟಾನ್ಸ್ ಪರ ಟೂರ್ನಿಯ ದುಬಾರಿ ಆಟಗಾರ ಪವನ್ ಶೆರಾವತ್ (11) ತೋರಿದ ಏಕಾಂಗಿ ಹೋರಾಟ ವ್ಯರ್ಥವಾಯಿತು. ಪಟನಾ ಪರ ಸಚಿನ್ಗೆ ಮಂಜೀತ್ (8), ಸಂದೀಪ್ ಕುಮಾರ್ (4), ಅಂಕಿತ್ (5) ಉತ್ತಮ ಬೆಂಬಲ ಒದಗಿಸಿದರು.
ಯೋಧಾಸ್ಗೆ ಜಯ: ಸುರೇಂದರ್ ಗಿಲ್ (13) ಮತ್ತು ನಾಯಕ ಪ್ರದಿಪ್ ನರ್ವಾಲ್ (12) ಭರ್ಜರಿ ರೈಡಿಂಗ್ ಬಲದಿಂದ ಯುಪಿ ಯೋಧಾಸ್ ತಂಡ ದಿನದ 2ನೇ ಪಂದ್ಯದಲ್ಲಿ 57&27 ಅಂತರದಿಂದ ಹರಿಯಾಣ ಸ್ಟೀಲರ್ಸ್ ಎದುರು ಗೆಲುವು ದಾಖಲಿಸಿತು.