ಪ್ಯಾರಿಸ್: ಭಾರತದ ಸ್ವರ್ಣ ಪದಕ ಗೆಲುವಿನ ಫೇವರಿಟ್ ಎನಿಸಿದ್ದ ಎರಡೂ ಕೈಗಳಿಲ್ಲದ ಬಿಲ್ಗಾರ್ತಿ ಶೀತಲ್ ದೇವಿ ಪ್ಯಾರಾಲಿಂಪಿಕ್ಸ್ ಆರ್ಚರಿ ಸ್ಪರ್ಧೆಯ ಮಹಿಳೆಯರ ಕಂಪೌಂಡ್ ವಿಭಾಗದ ಪ್ರಿ ಕ್ವಾರ್ಟರ್ಫೈನಲ್ನಲ್ಲಿ ಕೇವಲ ಒಂದು ಅಂಕದ ಅಂತರದಿಂದ ಸೋಲು ಅನುಭವಿಸಿದರು. ಇದರಿಂದಾಗಿ ಅವರ ಪದಕ ಗೆಲುವಿನ ಆಸೆ ಭಗ್ನಗೊಂಡಿತು. ಆದರೆ ಅವರ ಜೀವನಸ್ಫೂರ್ತಿ ಯಾವುದೇ ಪದಕ ಗೆಲುವಿಗಿಂತ ಮಿಗಿಲಾದುದಾಗಿದೆ.
ಕಳೆದ ಆವೃತ್ತಿಯ ರಜತ ವಿಜೇತೆ ಚಿಲಿಯ ಮರಿಯಾನಾ ಜುನಿಗಾ ವಿರುದ್ಧ 17 ವರ್ಷದ ಶೀತಲ್ ದೇವಿ 137-138 ಅಂಕಗಳಿಂದ ಪರಾಭವಗೊಂಡರು. ಕಾಲಿನಿಂದಲೇ ಬಿಲ್ಲು&ಬಾಣ ಹಿಡಿದು ಗುರಿಯಿಡುವ ಜಮ್ಮು-ಕಾಶ್ಮೀರದ ಶೀತಲ್ ದೇವಿ ಅರ್ಹತಾ ಸುತ್ತಿನಲ್ಲಿ 2ನೇ ಸ್ಥಾನ ಗಳಿಸಿ ನೇರವಾಗಿ 16ರ ಘಟ್ಟಕ್ಕೇರಿದ್ದರು. ಶೀತಲ್ ಇನ್ನು ಮಿಶ್ರ ವಿಭಾಗದಲ್ಲಿ ರಾಕೇಶ್ ಕುಮಾರ್ ಜತೆಗೂಡಿ ಸ್ಪರ್ಧಿಸಲಿದ್ದಾರೆ.
ಕ್ವಾರ್ಟರ್ಫೈನಲ್ನಲ್ಲಿ ಸೋತ ಸರಿತಾ
ಭಾರತದ ಸರಿತಾ ಕುಮಾರಿ ಆರ್ಚರಿ ಸ್ಪರ್ಧೆಯ ಮಹಿಳೆಯರ ಕಂಪೌಂಡ್ ವಿಭಾಗದ ಕ್ವಾರ್ಟರ್ಫೈನಲ್ನಲ್ಲಿ ಟರ್ಕಿಯ ಕ್ಯುರ್ ರ್ಗಿಡಿ ಒಜ್ನೂರ್ ವಿರುದ್ಧ 140-145 ಅಂಕಗಳಿಂದ ಪರಾಭವಗೊಂಡರು. ಅವರು ಪ್ರಿ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಇಟಲಿಯ ಇಲೆವೊನೊರಾ ಸರ್ಟಿ ವಿರುದ್ಧ 141-135 ಅಂಕಗಳಿಂದ ಗೆಲುವು ದಾಖಲಿಸಿದ್ದರು.