ಪ್ಯಾರೀಸ್: ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪ್ಯಾರಾ ಜೂಡೋ ಸ್ಪರ್ಧಿ ಕಪಿಲ್ ಪರ್ಮಾರ್ ಇತಿಹಾಸ ಕಂಚಿನ ಪದಕ ಗೆದ್ದಿದ್ದಾರೆ.
ಇದನ್ನೂ ಓದಿ: ಕೋಟಾ: ನೀಟ್-ಯುಜಿಗೆ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆ; ಈ ವರ್ಷದಲ್ಲಿ 14ನೇ ಪ್ರಕರಣ
ಪುರಷರ 60 ಕೆ.ಜಿ. ಜೆ1 ಜೂಡೋ ಸ್ಪರ್ಧೆಯಲ್ಲಿ ಕಪಿಲ್ ಪರ್ಮಾರ್, ಬ್ರೆಜಿಲ್ ಆಟಗಾರ ಎಲಿಯೆಲ್ಟನ್ ಒಲಿವೇರಾ ಅವರನ್ನು ಕೇವಲ 33 ಸೆಕೆಂಡುಗಳಲ್ಲಿ ಸೋಲಿಸಿ ಐಸಿಹಾಸಿಕ ಸಾಧನೆ ಮಾಡಿದ್ದಾರೆ.
ಇದರೊಂದಿಗೆ ಪ್ಯಾರಾಲಿಂಪಿಕ್ ಇತಿಹಾಸದಲ್ಲಿ ಜೂಡೋ ಕ್ರೀಡೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಕಪಿಲ್ ಪಾತ್ರರಾಗಿದ್ದಾರೆ. ಇದು ಭಾರತಕ್ಕೆ ಸಿಕ್ಕ 11ನೇ ಕಂಚಿನ ಪದಕವಾದರೆ, ಒಟ್ಟಾರೆ ಭಾರತದ ಪದಕಗಳ ಸಂಖ್ಯೆ 25ಕ್ಕೇರಿದೆ.
ಕಂಚಿನ ಪದಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಅಮೋಘ ಪ್ರದರ್ಶನ ನೀಡಿದ ಕಪಿಲ್ 10-0 ಅಂತರದಲ್ಲಿ ಪಂದ್ಯ ವಶಪಡಿಸಿಕೊಂಡರು. 2022ರ ಏಪ್ಯನ್ ಗೇಮ್ಸ್ನಲ್ಲೂ ಇದೇ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.