Ihsanullah: ಇತ್ತೀಚಿಗೆ ಪಾಕಿಸ್ತಾನದ ವಿರುದ್ಧ ಫೈನಲ್ ಪಂದ್ಯ ಗೆಲ್ಲುವ ಮೂಲಕ ಭಾರತ 2025ರ ಏಷ್ಯಾಕಪ್ ಚಾಂಪಿಯನ್ಶಿಪ್ ಆಗಿ ಹೊರಹೊಮ್ಮಿತು. ಏಷ್ಯಾಕಪ್‌ನಲ್ಲಿ ಅಭಿಷೇಕ್ ಶರ್ಮ ಭಾರತದ ಪರ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿದ್ದರು, 7 ಪಂದ್ಯಗಳಲ್ಲಿ ಮೂರು ಬಾರಿ 50+ ರನ್ ಗಳಿಸಿ 200 ಸ್ಟ್ರೈಕ್ ರೇಟ್‌ನೊಂದಿಗೆ 314 ರನ್ ಗಳಿಸಿದರು.
ಅಲ್ಲದೆ, ಐಸಿಸಿ ಶ್ರೇಯಾಂಕದಲ್ಲಿ ಪ್ರಸ್ತುತ ವಿಶ್ವದ ನಂ. 1 ಬ್ಯಾಟ್ಸ್‌ಮನ್ ಆಗಿರುವ ಪಂಜಾಬ್‌ನ ಈ 25 ವರ್ಷದ ಈ ಆಟಗಾರ ಸೂರ್ಯಕುಮಾರ್ ಯಾದವ್ ತಂಡ ಕಪ್ ಗೆಲ್ಲುವಲ್ಲಿ ಪ್ರಮುಖ ಕಾರಣಗಳಲ್ಲಿ ಒಬ್ಬರಾಗಿದ್ದಾರೆ.ಇದೀಗ ಅಭಿಷೇಕ್ ಶರ್ಮ ಅವರಿಗೆ ಪಾಕ್ನ ವೇಗಿ ಇಹ್ಸಾನುಲ್ಲಾ ಸವಾಲು ಹಾಕಿದ್ದಾರೆ.
ಹೌದು, 2023ರ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ 152.65 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದ ಇಹ್ಸಾನುಲ್ಲಾ, ಈ ಬೌಲಿಂಗ್ ಪ್ರದರ್ಶನವು ಅವರನ್ನು ಶ್ರೇಯಾಂಕಗಳಲ್ಲಿ ಮೇಲೇರುವಂತೆ ಮಾಡಿತು. ಗಾಯದಿಂದ ಹೊರಗುಳಿಯುವ ಮೊದಲು ಅವರು ಟಿ-20ಐ ಮತ್ತು ಒಂದು ಏಕದಿನ ಪಂದ್ಯವನ್ನು ಸಹ ಆಡಿದ್ದರು.
"ನಾನು ಭಾರತದ ವಿರುದ್ಧ ಆಡಲು ಅವಕಾಶ ಪಡೆದರೆ, ಅಭಿಷೇಕ್ ಶರ್ಮಾ ಅವರನ್ನು 3-6 ಎಸೆತಗಳಲ್ಲಿ ಔಟ್ ಮಾಡುತ್ತೇನೆ" ಎಂದು ಇಹ್ಸಾನುಲ್ಲಾ ವೀಡಿಯೊದಲ್ಲಿ ಹೇಳಿದ್ದಾರೆ.
ಇದೀಗ ಇಹ್ಸಾನುಲ್ಲಾ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಅಲ್ಲದೇ ಟ್ರೋಲ್ಗೆ ಗುರಿಯಾಗಿದ್ದಾರೆ. ನೆಟ್ಟಿಗರು ತರಹೇವಾರಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.(ಏಜೆನ್ಸೀಸ್)