ಕ್ರೀಡೆ

ಭಾರತದಲ್ಲಿ ಕೆಲವರಿಗೆ ಕೊಹ್ಲಿ ಏಳಿಗೆ ಕಂಡ್ರೆ ಆಗಲ್ಲ! ಅದಕ್ಕೆ ಅನುಷ್ಕಾರನ್ನು ಟಾರ್ಗೆಟ್​ ಮಾಡ್ತಾರೆ: ಪಾಕ್​ ಕ್ರಿಕೆಟಿಗ | Virat Kohli

Virat Kohli: ಟೀಮ್ ಇಂಡಿಯಾದ ದಿಗ್ಗಜ ಆಟಗಾರ, ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾರನ್ನು ಗುರಿಯಾಗಿಸಿಕೊಂಡು ಜಾಲತಾಣಗಳಲ್ಲಿ ಮಾಡುವ ನೆಗೆಟಿವ್​ ಟ್ರೋಲ್​ಗಳ ವಿರುದ್ಧ​ ಪಾಕಿಸ್ತಾನದ ಕ್ರಿಕೆಟಿಗ ಅಹ್ಮದ್ ಶೆಹಜಾದ್ ಕಿಡಿಕಾರಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಅಹ್ಮದ್​, ಟೀಕಿಸುವಂತ ಸೋಷಿಯಲ್ ಮೀಡಿಯಾ ಟ್ರೋಲಿಂಗ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡರು.

ನಾದಿರ್ ಅಲಿ ಪಾಡ್‌ಕ್ಯಾಸ್ಟ್‌ನ ನಿರೂಪಕನ ಪ್ರಶ್ನೆಗಳಿಗೆ ಉತ್ತರಿಸುವಾಗ ಟ್ರೋಲ್​ ಬಗ್ಗೆ ಪ್ರತಿಕ್ರಿಯಿಸಿದರು. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ವಿರುದ್ಧದ ಟ್ರೋಲ್​ಗಳ ಬಗ್ಗೆಯೂ ಒಂದಷ್ಟು ಅಸಮಾಧಾನ ವ್ಯಕ್ತಪಡಿಸಿದರು. “ಅನುಷ್ಕಾ ಶರ್ಮಾ ಅವರಿಗೆ ಚಿತ್ರರಂಗದಲ್ಲಿ ಒಳ್ಳೆಯ ಗೌರವವಿದೆ ಮತ್ತು ಖ್ಯಾತಿ ಹೊಂದಿರುವವರು. ಆಕೆಯ ಬಗ್ಗೆ ಏಕೆ ನೆಗೆಟಿವ್ ಆಗಿ ಹೇಳ್ತಾರೋ, ಟೀಕಿಸುತ್ತಾರೆ ನನಗೆ ಅರ್ಥವಾಗಲ್ಲ. ಭಾರತದಲ್ಲಿ ಕೆಲವರು ವಿರಾಟ್ ಕೊಹ್ಲಿಯ ಬೆಳವಣಿಗೆಯನ್ನು ಸಹಿಸಲ್ಲ. ಹೀಗಾಗಿ ಅವರ ವಿರುದ್ಧ ನೆಗೆಟಿವ್​ ಪ್ರಚಾರವನ್ನು ನಡೆಸುತ್ತಾರೆ. ಇಂತಹ ವಿಚಾರಗಳಲ್ಲಿ ಅವರ ಕುಟುಂಬವನ್ನು ಎಳೆದು ತರುತ್ತಾರೆ" ಎಂದರು.

"ಇಂತಹ ಟೀಕಾಕಾರರಿಗೆ ಎಂದಿಗೂ ಪ್ರಾಮುಖ್ಯತೆ ನೀಡಬಾರದು. ಕ್ರಿಕೆಟಿಗರನ್ನು ಪ್ರಶ್ನಿಸುವ, ಟೀಕಿಸುವ ಹಕ್ಕು ಅವರ ಅಭಿಮಾನಿಗಳಿಗೆ ಮಾತ್ರ ಇರುವುದು. ಆದರೆ, ಕುಟುಂಬದ ಸದಸ್ಯರನ್ನು ಅವಮಾನಿಸುವ ಅಧಿಕಾರ ಯಾರಿಗೂ ಇಲ್ಲ" ಎಂದು ಹೇಳಿದ್ದಾರೆ. ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮ ವಿರುದ್ಧ ನೆಗೆಟಿವ್​ ಟ್ರೋಲ್​ಗಳನ್ನು ಹರಿಬಿಡುವ ಕೆಲವರ ವಿರುದ್ಧ ಅಹ್ಮದ್​ ಗುಡುಗಿದ್ದಾರೆ,(ಏಜೆನ್ಸೀಸ್).