Pakistan Cricket: ಈ ಹಿಂದೆಯೇ ಹೇಳಿದಂತೆ ಪಾಕಿಸ್ತಾನ ಕ್ರಿಕೆಟ್ನಲ್ಲಿ ಯಾವುದೂ ಸರಿಯಿಲ್ಲ. ಆಟಗಾರರಲ್ಲಿ ಹೊಂದಾಣಿಕೆ ಇಲ್ಲ, ಉತ್ತಮ ಇನ್ನಿಂಗ್ಸ್ ಕೊಡುವ ಕ್ರಿಕೆಟಿಗರಿಲ್ಲ. ಬದಲಿಗೆ ಕೇವಲ ಸೊಕ್ಕಿನ ಮಾತುಗಳನ್ನಾಡುವ ಮಾಜಿ ಕ್ರಿಕೆಟಿಗರೇ ಪಾಕಿಸ್ತಾನವನ್ನು ಪ್ರತಿನಿಧಿಸುತ್ತಿದ್ದಾರೆ. ಗೆಲುವಿನ ಮೂಲಕ ತಮ್ಮ ಸಾಮರ್ಥ್ಯ ತೋರುವಲ್ಲಿ ಸದಾ ಹಿಂದುಳಿದಿದೆ ಪಾಕ್ ಕ್ರಿಕೆಟ್. ಸದ್ಯ ಈ ಸಂಗತಿ ಹಲವರ ನಗುವಿಗೂ ಕಾರಣವಾಗಿದೆ. ಇದೆಲ್ಲದರ ಮಧ್ಯೆ ಮತ್ತೊಂದು ವಿಚಾರ ಹೊರಬಿದ್ದಿದ್ದು, ಪಾಕ್ನ ಟೆಸ್ಟ್ ಕ್ಯಾಪ್ಟನ್ ಮತ್ತು ಏಕದಿನ ಕ್ಯಾಪ್ಟನ್ರನ್ನು ತಂಡದಿಂದ ಹೊರಗಟ್ಟಲು ಪಿಸಿಬಿ ಸಂಚು ಹೂಡಿದೆ.
ಇದನ್ನೂ ಓದಿ: ಸರ್ಕಾರದ ಇಲಾಖೆಗಳಲ್ಲಿ ಕೆಟಿಟಿಪಿ ಕಾಯ್ದೆ ಉಲ್ಲಂಘನೆ: ರಾಜ್ಯ ಹಿಂದುಳಿದ ವರ್ಗಗಳ ಗುತ್ತಿಗೆದಾರರ ಸಂಘ ಹೇಳಿಕೆ
ಪಾಕಿಸ್ತಾನ ರಾಷ್ಟ್ರೀಯ ತಂಡದಲ್ಲಿ ಹಲವು ಬದಲಾವಣೆ ತರುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲು ಪಾಕ್ ಮುಂದಾಗಿದೆ. ಪ್ರಸ್ತುತ ಟೆಸ್ಟ್ ತಂಡದ ಕ್ಯಾಪ್ಟನ್ ಆಗಿರುವ ಶಾನ್ ಮಸೂದ್ ಜಾಗಕ್ಕೆ ಸಲ್ಮಾನ್ ಅಲಿ ಅಘಾರನ್ನು ಆಡಿಸಲು ನಿರ್ಧರಿಸಲಾಗಿದೆ. ಮೂರು ಫಾರ್ಮೆಟ್ಗೂ ಒಬ್ಬನನ್ನೇ ಕ್ಯಾಪ್ಟನ್ ಆಗಿ ಮುಂದುವರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಇನ್ನೂ ಏಕದಿನ ಫಾರ್ಮೆಟ್ಗೆ ನಾಯಕನಾಗಿರುವ ಮೊಹಮ್ಮದ್ ರಿಜ್ವಾನ್ರನ್ನು ಕ್ಯಾಪ್ಟನ್ ಹುದ್ದೆಯಿಂದ ಕಿತ್ತುಬಿಸಾಡಲು ಮಾತುಕತೆ ನಡೆಸಲಾಗಿದೆ.
ಈ ಮಧ್ಯೆ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಮತ್ತು ಮಾಜಿ ವೇಗಿ ಸಿಕಂದರ್ ಭಕ್ತ್ ಇತ್ತೀಚೆಗೆ ಲಾಹೋರ್ನಲ್ಲಿ ಆಯೋಜಿಸಲಾಗಿದ್ದ ಪಿಸಿಬಿ ಚರ್ಚೆಯಲ್ಲಿ ಭಾಗಿಯಾಗಿದ್ದರು. ಇಬ್ಬರು ದಿಗ್ಗಜರಿಗೂ ಮುಂದಿನ ಕ್ರಿಕೆಟ್ ಬೆಳವಣಿಗೆಯನ್ನು ಗಮನಿಸುವಂತೆ ಪಿಸಿಬಿ ಆದೇಶಿಸಿದೆ. ಯಾರಲ್ಲಿ ಯಾವ ಸಾಮರ್ಥ್ಯವಿದೆ. ಯಾವ ವಯಸ್ಸಿನವರು ಹೇಗೆ ಆಡ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಅರಿಯುವಂತೆ ತಿಳಿಸಲಾಗಿದೆ ಎಂದು ಕ್ರಿಕೆಟ್ ವರದಿ ತಿಳಿಸಿದೆ,(ಏಜೆನ್ಸೀಸ್).