ಕ್ರೀಡೆ

ಪಾಕ್ ಕ್ರಿಕೆಟ್ ಬೋರ್ಡ್ ದಿವಾಳಿ ಆಗಿಹೋಯಿತಾ?

ಕರಾಚಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ ದಿವಾಳಿ ಆಗಿದೆ ಎನ್ನುವ ಸುದ್ದಿ ಈಗ ಸದ್ದುಮಾಡುತ್ತಿದೆ. ಪಾಕ್​ ಮಾಧ್ಯಮಗಳ ವರದಿ ಪ್ರಕಾರ, ನ್ಯಾಷನಲ್ ಟಿ20 ಲೀಗ್​ನಲ್ಲಿ ಭಾಗವಹಿಸಲಿರುವ 240 ಕ್ರಿಕೆಟಿಗರ ಕೋವಿಡ್​-19 ಟೆಸ್ಟ್ ಮಾಡಿಸೋದಕ್ಕೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ದುಡ್ಡಿಲ್ಲ!

ಹೀಗಾಗಿ ಕರೊನಾ ಟೆಸ್ಟ್ ನೀವೇ ಮಾಡಿಸಿ ಎಂದು ಮಂಡಳಿ ಆಟಗಾರರ ಎದುರು ಕೈಚೆಲ್ಲಿ ಬಿಟ್ಟಿದೆ. ನ್ಯಾಷನಲ್ ಟಿ20 ಲೀಗ್ ಸೆಪ್ಟೆಂಬರ್ 30ರಂದು ಆರಂಭವಾಗಲಿದೆ. ಪಾಕ್ ಕ್ರಿಕೆಟ್ ಮಂಡಳಿ ಸಿದ್ಧಪಡಿಸಿರುವ ಸ್ಟಾಂಡರ್ಡ್ ಆಪರೇಷನ್ ಪ್ರೊಸೀಜರ್ ಪ್ರಕಾರ, ಎಲ್ಲ ಆಟಗಾರರು, ಅಧಿಕಾರಿಗಳು ಕಡ್ಡಾಯವಾಗಿ ಎರಡು ಸಲ ಕೋವಿಡ್ 19 ಟೆಸ್ಟ್​ಗೆ ಒಳಗಾಗಬೇಕು. ಆದರೆ, ಈ ಟೆಸ್ಟ್ ನ ಖರ್ಚನ್ನು ನೀವೇ ಭರಿಸಿಕೊಳ್ಳಿ ಎಂದು ಅದು ಹೇಳಿದೆ. ಹೀಗಾಗಿ, ಪಾಕ್ ಕ್ರಿಕೆಟ್ ಮಂಡಳಿ ದಿವಾಳಿ ಎದ್ದು ಹೋಗಿದೆ ಎಂಬ ವದಂತಿ ತೀವ್ರವಾಗಿ ಹರಡಿದೆ.

ಕರೊನಾ ವೈರಸ್​ ಪರಿಸ್ಥಿತಿಯಿಂದಾಗ ಪಿಸಿಬಿ ತೀವ್ರತರವಾದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ಈ ನಡುವೆ, ​ ದ ಪಾಕಿಸ್ಥಾನ್ ಸೂಪರ್ ಲೀಗ್ ಟಿ20 ಏಪ್ರಿಲ್​ ನಡೆಯಬೇಕಾಗಿತ್ತು. ಆದರೆ, ಕರೊನಾ ಕಾರಣಕ್ಕೆ ಮುಂದೂದಲ್ಪಟ್ಟಿದೆ. ಇದು ನವೆಂಬರ್ 14ರಿಂದ 17ರ ತನಕ ಲಾಹೋರಿನ ಗಡ್ಡಾಫಿ ಸ್ಟೇಡಿಯಂ ನಡೆಯಲಿದೆ. (ಏಜೆನ್ಸೀಸ್)