ಸಾಂದರ್ಭಿಕ ಚಿತ್ರ 
ಕ್ರೀಡೆ

ಏಕದಿನ ವಿಶ್ವಕಪ್​ 2023; ಭಾರತಕ್ಕೆ ತೆರಳಲು ಪಾಕ್​ ತಂಡಕ್ಕೆ ಅನುಮತಿ ನೀಡಿದ ಸರ್ಕಾರ

ಮುಂಬೈ: ಅಕ್ಟೋಬರ್​-ನವೆಂಬರ್​ ತಿಂಗಳಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಗೆ ಪ್ರಯಾಣಿಸಲೂ ಪಾಕಿಸ್ತಾನ ತಂಡಕ್ಕೆ ಅಲ್ಲಿನ ಸರ್ಕಾರ ಅನುಮತಿ ನೀಡಿದೆ. ಈ ಬಾರಿಯ ಟೂರ್ನಿ ಭಾರತದ ಆತಿಥ್ಯದಲ್ಲಿ ನಡೆಯಲಿದ್ದು, ಪಾಕ್​ ತಂಡದ ಭಾಗವಹಿಸುವಿಕೆ ಬಗ್ಗೆ ಹಲವು ತಿಂಗಳುಗಳಿಂದ ಅನಿಶ್ಚಿತತ್ತೆ ತಲೆದೂರಿತ್ತು.

ಈ ಕುರಿತು ಟ್ವೀಟ್​ ಮಾಡಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ರಾಜಕೀಯದೊಂದಿಗೆ ಕ್ರೀಡೆಯನ್ನೂ ಬೆರೆಸಬಾರದೆಂದೂ ನಾವೂ ನಿರಂತರವಾಗಿ ಹೇಳಿಕೊಂಡು ಬಂದಿದ್ದೇವೆ. ಆದ್ದರಿಂದ ಮುಂಬರುವ ವಿಶ್ವಕಪ್​ನಲ್ಲಿ ಪಾಲ್ಗೊಳ್ಳಲೂ ನಮ್ಮ ತಂಡವನ್ನೂ ಭಾರತ್ಕಕೆ ಕಳುಹಿಸಲೂ ನಿರ್ಧರಿಸಿದ್ದೇವೆ.

ಅಂತರಾಷ್ಟ್ರೀಯ ಕ್ರೀಡೆಗೆ ಸಂಬಂಧಿಸಿದ ವಿಚಾರವೂ ಭಾರತದೊಂದಿಗಿನ ದ್ವಿಪಕ್ಷೀಯ ಸ್ಥಿತಿಯೂ ಅಡ್ಡಿಯಾಗಬಾರದೂ. ಭಾರತ ಪ್ರವಾಸದ ವೇಳೆ ಪಾಕ್​ ಆಟಗಾರರ ಭದ್ರತೆಯ ಬಗ್ಗೆ ಕಳವಳವನ್ನೂ ಹೊಂದಿದ್ದೇವೆ. ಈ ಬಗ್ಗೆ ಐಸಿಸಿ ಹಾಗೂ ಭಾರತ ಸರ್ಕಾರಕ್ಕೆ ತಿಳಿಸಲಾಗುವುದೂ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಟ್ವೀಟ್​ ಮಾಡಿದೆ.