ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮ ಸೋಮವಾರ ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ಪ್ರಧಾನ ಮಂತ್ರಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ಘೊಷಿಸಿದರು.
ಸಾಮಾಜಿಕ ಜಾಲತಾಣಗಳ ಮೂಲಕ, ಕರೊನಾ ವೈರಸ್ನಿಂದ ದೂರ ಉಳಿಯುವಂತೆ ನಾಗರಿಕರಿಗೆ ಮನವಿ ಮಾಡಿಕೊಳ್ಳುತ್ತಿದ್ದ ಈ ದಂಪತಿ, ಬೃಹತ್ ಮೊತ್ತದ ದೇಣಿಗೆ ನೀಡಿದೆ ಎಂದು ಹೇಳಲಾಗಿದೆ. ಆದರೆ ದೇಣಿಗೆ ಮೊತ್ತದ ಬಗ್ಗೆ ಮಾಹಿತಿ ಬಹಿರಂಗ ಪಡಿಸಿಲ್ಲ. ದೇಣಿಗೆ ನೀಡಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿರುವ ತಾರಾ ದಂಪತಿ, ಎಷ್ಟು ಮೊತ್ತ ನೀಡಲಾಗಿದೆ ಎಂದು ಹೇಳಿಕೊಂಡಿಲ್ಲ.
-ಠಿ;1 ಲಕ್ಷ ಘೊಷಿಸಿದ ಮನು
ಯುವ ಶೂಟರ್ ಮನು ಭಾಕರ್ ಹರಿಯಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಕಾಮನ್ವೆಲ್ತ್ ಗೇಮ್್ಸ, ಯೂತ್ ಒಲಿಂಪಿಕ್ಸ್ ಚಾಂಪಿಯನ್ ಆಗಿರುವ 18 ವರ್ಷದ ಶೂಟರ್ ಮನು ಭಾಕರ್, ಹರಿಯಾಣದ ಜಾಜ್ಜರ್ ಜಿಲ್ಲೆಯವರು. ಇಡೀ ದೇಶವೇ ಕರೊನಾ ವೈರಸ್ ಭೀತಿಯಿಂದ ತತ್ತರಿಸಿದೆ. ನನ್ನ ದೇಶದ ಜನರ ಸುರಕ್ಷತೆಯೇ ಮುಖ್ಯ ಎಂದು ಭಾಕರ್ ಟ್ವೀಟ್ ಮಾಡಿದ್ದಾರೆ. ಟೇಬಲ್ ಟೆನಿಸ್ ಆಟಗಾರ ಜಿ.ಸತ್ಯನ್ 1.25 ಲಕ್ಷ ರೂಪಾಯಿ ದೇಣಿಗೆ ಘೊಷಿಸಿದರು. ಸತ್ಯನ್ ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಲಕ್ಷ ಹಾಗೂ ಪ್ರಧಾನ ಮಂತ್ರಿ-ಕೇರ್ಸ್ಗೆ ಉಳಿದ 25 ಸಾವಿರ ರೂ. ನೀಡುತ್ತಿರುವುದಾಗಿ ಹೇಳಿದ್ದಾರೆ.
-ಠಿ;10 ಲಕ್ಷ ನೀಡಿದ ಮಿಥಾಲಿ
ಭಾರತ ಮಹಿಳಾ ಕ್ರಿಕೆಟ್ ತಂಡದ ಸದಸ್ಯರಾದ ಮಿಥಾಲಿ ರಾಜ್ ಹಾಗೂ ಪೂನಂ ಯಾದವ್ ಕ್ರಮವಾಗಿ 10 ಹಾಗೂ 2 ಲಕ್ಷ ರೂಪಾಯಿ, 6 ಬಾರಿ ವಿಶ್ವ ಚಾಂಪಿಯನ್ ಬಾಕ್ಸರ್ ಎಂಸಿ ಮೇರಿ ಕೋಮ್ ರಾಜ್ಯಸಭಾ ಸದಸ್ಯರ ಒಂದು ತಿಂಗಳ ವೇತನ ಒಂದು ಲಕ್ಷ ರೂಪಾಯಿ ಮೊತ್ತವನ್ನು ಪ್ರಧಾನ ಮಂತ್ರಿ ನಾಗರಿಕರ ಸಹಾಯ ಮತ್ತು ಪರಿಹಾರ ತುರ್ತು ಸ್ಥಿತಿ ನಿಧಿಗೆ ನೀಡುವುದಾಗಿ ಹೇಳಿದ್ದಾರೆ. ಭಾರತೀಯ ಕ್ರೀಡಾ ಪ್ರಾಧಿಕಾರದ ನೌಕರರು ತಮ್ಮ 3 ದಿನದ ವೇತನ 76 ಲಕ್ಷ ರೂಪಾಯಿ ದೇಣಿಗೆ ನೀಡಿದರೆ, ಭಾರತೀಯ ಕುಸ್ತಿ ಫೆಡರೇಷನ್ ಸಂಸ್ಥೆ ಅಧ್ಯಕ್ಷ ಜ್ರಿಜ್ ಭೂಷಣ್ ಸಿಂಗ್, ಸಂಸ್ಥೆ ವತಿಯಿಂದ 11 ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.