ವಿಶ್ವದಾದ್ಯಂತ ಕರೊನಾ ವೈರಸ್ ಭೀತಿ ವ್ಯಾಪಕವಾಗಿರುವ ನಡುವೆ ಗುರುವಾರ ಗ್ರೀಸ್ನ ಒಲಿಂಪಿಯಾದಲ್ಲಿ 2020ರ ಟೋಕಿಯೋ ಒಲಿಂಪಿಕ್ಸ್ನ ಕ್ರೀಡಾಜ್ಯೋತಿಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಸೂರ್ಯಕಿರಣಗಳಿಂದ ಬೆಳಗಿಸಲಾಗಿದೆ.
ಐಒಸಿಯಿಂದ ಮಾನ್ಯತೆ ಪಡೆದ 100 ಪತ್ರಕರ್ತರು ಮಾತ್ರವೇ ಸಮಾರಂಭದಲ್ಲಿ ಹಾಜರಿದ್ದರು. ಗ್ರೀಸ್ನ ಒಲಿಂಪಿಕ್ ಶೂಟಿಂಗ್ ಚಾಂಪಿಯನ್ ಅನ್ನಾ ಕೊರಾಕಾಕಿ 2020 ಒಲಿಂಪಿಕ್ ಕ್ರೀಡಾಜ್ಯೋತಿ ಹಿಡಿದ ಮೊದಲಿಗರೆನಿಸಿದರು. 7 ದಿನಗಳ ಕಾಲ ಕ್ರೀಡಾಜ್ಯೋತಿ ಗ್ರೀಸ್ನಲ್ಲಿ ಸಂಚರಿಸಲಿದ್ದು, ಬಳಿಕ ಆತಿಥೇಯ ಜಪಾನ್ಗೆ ಹಸ್ತಾಂತರಗೊಳ್ಳಲಿದೆ.