ಕ್ರೀಡೆ

ಆರ್​ಸಿಬಿ ಮಾಜಿ ಆಟಗಾರನ ಹಿಂದೆ ಬಿದ್ದ ಕೆಕೆಆರ್; ದ್ರಾವಿಡ್​ ಬದಲಾಗಿ ನೇಮಕಗೊಳ್ಳಲಿರುವುದು ಇವರೇ ನೋಡಿ

ನವದೆಹಲಿ: ಟೀಮ್​ ಇಂಡಿಯಾ ಮುಖ್ಯ ಕೋಚ್​ ಸ್ಥಾನದಿಂದ ಕನ್ನಡಿಗ ರಾಹುಲ್​ ದ್ರಾವಿಡ್​ ಕೆಳಗಿಳಿದಿದ್ದು, ನೂತನ್​ ಕೋಚ್​ ಸ್ಥಾನವನ್ನು ಗೌತಮ್​ ಗಂಭೀರ್ ಅಲಂಕರಿಸಿದ್ದಾರೆ. ಇತ್ತ ಕೋಚ್​ ಹುದ್ದೆಯಿಂದ ದ್ರಾವಿಡ್​ ನಿರ್ಗಮಿಸುತ್ತಿದ್ದಂತೆ ಹೊಸ ವಿಚಾರಗಳು ಕೇಳಿ ಬರುತ್ತಿದ್ದು, ಇದೀಗ ರಾಹುಲ್​ ದ್ರಾವಿಡ್​ ಅವರು ಐಪಿಎಲ್​ನಲ್ಲಿ ಕಲ್ಕತ್ತಾ ನೈಟ್​ರೈಡರ್ಸ್​ ತಂಡದ ಮೆಂಟರ್​ ಆಗಿ ನೇಮಕಗೊಳ್ಳಲಿದ್ದಾರೆ ಎಂಬ ಸುದ್ದಿ ಹೇಳಿ ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಚಾರ ಈಗ ಮುನ್ನೆಲೆಗೆ ಬಂದಿದೆ.

ಭಾರತ ತಂಡದ ನೂತನ ಮುಖ್ಯ ಕೋಚ್ ಆಗಿ ದ್ರಾವಿಡ್ ಬದಲಿಗೆ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರನ್ನು ಬಿಸಿಸಿಐ ನೇಮಕ ಮಾಡಿದೆ. ಹೀಗಾಗಿ ಕಲ್ಕತ್ತಾ ನೈಟ್​ ರೈಡರ್ಸ್ ಫ್ರಾಂಚೈಸಿ ಐಪಿಎಲ್‌ನಲ್ಲಿ ತನ್ನ ಮೆಂಟರ್​ ಆಗಿದ್ದ ಗಂಭೀರ್ ಸೇವೆ ಕಳೆದುಕೊಳ್ಳುತ್ತಿದೆ. 17ನೇ ಆವೃತ್ತಿಯ ಚಾಂಪಿಯನ್ ತಂಡ ಗಂಭೀರ್ ಸ್ಥಾನಕ್ಕೆ ಟೀಮ್ ಇಂಡಿಯಾ ಮಾಜಿ ಕೋಚ್ ದ್ರಾವಿಡ್ ಅವರನ್ನು ತಮ್ಮ ಹೊಸ ಮೆಂಟರ್ ಆಗಿ ನೇಮಿಸಿಕೊಳ್ಳುವ ಸಾಧ್ಯತೆಯಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಇದೀಗ ಅನಿರೀಕ್ಷಿತವಾಗಿ ಮತ್ತೊಂದು ಹೆಸರು ಮುನ್ನೆಲೆಗೆ ಬಂದಿದ್ದು, ಹೊಸ ಚರ್ಚೆಗೆ ನಾಂದಿ ಹಾಡಿದೆ.

ಸುದ್ದಿ ಮೂಲಗಳ ಪ್ರಕಾರ ದಕ್ಷಿಣ ಆಫ್ರಿಕಾ ಕ್ರಿಕೆಟ್​ ತಂಡದ ಲೆಜಂಡರಿ ಆಟಗಾರ ಜಾಕ್​ ಕಾಲಿಸ್​ ಅವರನ್ನು ಕಲ್ಕತ್ತಾ ಫ್ರಾಂಚೈಸಿ ಸಂಪರ್ಕಿಸಿದ್ದು, ಒಂದು ಸುತ್ತಿನ ಮಾತುಕತೆ ನಡೆದಿದೆ ಎಂದು ವರದಿಯಾಗಿದೆ. ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಪರ ಆಡಿರುವ ಕಾಲಿಸ್​  ಕೆಕೆಆರ್ ತಂಡವನ್ನು ಪ್ರತಿನಿಧಿಸಿದ್ದರು. ಗಂಭೀರ್ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದ 2012 ಮತ್ತು 2014 ಸೀಸನ್‌ಗಳಲ್ಲಿ ಕೋಲ್ಕತ್ತಾ ಪರ ಆಡಿದ್ದರು. ಅವರು 2015 ರಲ್ಲಿ KKR ನ ಬ್ಯಾಟಿಂಗ್ ಸಲಹೆಗಾರರಾಗಿದ್ದರು.

2016ರಿಂದ 2019 ರವರೆಗೆ, ಅವರು ನಾಲ್ಕು ಸೀಸನ್‌ಗಳಿಗೆ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದರು. ಆ ಬಳಿಕ ಈ ಜವಾಬ್ದಾರಿಯಿಂದ ಕೆಳಗಿಳಿದು ದಕ್ಷಿಣ ಆಫ್ರಿಕಾ ತಂಡಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿ ನೇಮಕಗೊಂಡಿದ್ದರು. ಒಂದು ವೇಳೆ ಜಾಕ್​ ಕಾಲಿಸ್​ ಆ ಆಫರ್​​ಅನ್ನು ಒಪ್ಪಿಕೊಂಡರೆ ಕೆಕೆಆರ್​ ತಂಡವನ್ನು ಮತ್ತೊಮ್ಮೆ ಮುನ್ನಡೆಸುವ ಅವಕಾಶವನ್ನು ಪಡೆಯಲಿದ್ದಾರೆ.

2024ರ ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನವೇ ಗಂಭೀರ್ ಅವರನ್ನು ಕೆಕೆಆರ್ ನ ಮೆಂಟರ್ ಆಗಿ ನೇಮಕ ಮಾಡಿಕೊಂಡಿತ್ತು. ಫ್ರಾಂಚೈಸಿಯ ಸಹ-ಮಾಲೀಕ ಶಾರುಖ್ ಖಾನ್ ಅವರಿಗೆ 10 ವರ್ಷಗಳ ಒಪ್ಪಂದಕ್ಕಾಗಿ ಬ್ಲಾಂಕ್​ ಚೆಕ್​ ನೀಡಿದ್ದರು ಎನ್ನಲಾಗಿದೆ. ಅದರಂತೆಯೇ ಗಂಭೀರ್ ಮಾರ್ಗದರ್ಶನದಲ್ಲಿ ಕೆಕೆಆರ್​ 17ನೇ ಆವೃತ್ತಿಯಲ್ಲಿ ಕಪ್​ ಗೆದ್ದಿತ್ತು.