ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್ (IPL) ಆರಂಭವಾಗುವುದಕ್ಕೆ ದಿನಗಳೇ ಬಾಕಿ ಉಳಿದಿದ್ದು, ಈಗಾಗಲೇ ಅದಕ್ಕೆ ಸಂಬಂಧಿಸಿದ ಸುದ್ದಿ ಕ್ರೀಡಾ ವಲಯದಲ್ಲಿ ಸಖತ್ ಸೌಂಡ್ ಮಾಡುತ್ತಿವೆ. ಪ್ರತಿಬಾರಿ ಐಪಿಎಲ್ 9IPL) ನಡೆದಾದಗಲೂ ಸಖತ್ ಸೌಂಡ್ ಮಾಡುವ ತಂಡ ಎಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಎಂದರೆ ತಪ್ಪಾಗಲಾರದು. ಕಳೆದ 17 ಆವೃತ್ತಿಗಳಲ್ಲೂ ತಂಡ ಒಮ್ಮೆಯೂ ಕಪ್ ಗೆದ್ದಿಲ್ಲವಾದರೂ ನಿರಾಸೆಗೊಳ್ಳದ ಅಭಿಮಾನಿಗಳು ಈ ಸಲ ಕಪ್ ನಮ್ದೆ (EE Sala Cup Namdhey) ಎಂದು ಹೇಳುವ ಮೂಲಕ ನೆಚ್ಚಿನ ತಂಡವನ್ನು ಹುರಿದುಂಬಿಸುತ್ತ ಬಂದಿದ್ದಾರೆ.
ತಂಡ ಸೋತರೂ, ಗೆದ್ದರೂ ಆರ್ಸಿಬಿಗೆ (RCB) ಬೆಂಬಲವಾಗಿ ನಿಂತಿರುವ ಅಭಿಮಾನಿಗಳು (Fans) ಯಾವ ಹಂತದಲ್ಲಿಯೂ ತಂಡವನ್ನು ಬಿಟ್ಟುಕೊಟ್ಟಿಲ್ಲ. ಇದೀಗ ಈ ಬಗ್ಗೆ ಟೀಮ್ ಇಂಡಿಯಾ (Team India) ಆಟಗಾರ ಆರ್. ಅಶ್ವಿನ್ (R Ashwin) ಮಾತನಾಡಿದ್ದು, ಈ ರೀತಿಯ ಅಭಿಮಾನಿಗಳನ್ನು ಆರ್ಸಿಬಿ (RCB) ಫ್ರಾಂಚೈಸಿಯೂ ದೇವರಿಂದ ಪಡೆದಿರುವ ಉಡುಗೊರೆ ಎಂದು ಬಣ್ಣಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಈ ಕುರಿತಾದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಅಶ್ವಿನ್, ನಾನು ನೋಡಿರುವಂತೆ ಆರ್ಸಿಬಿ ಫ್ಯಾನ್ಸ್ (RCB Fans) ವಿರಾಟ್ (Virat Kohli) ಹಾಗೂ ತಂಡವನ್ನು ತುಂಬಾ ಪ್ರೀತಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ (Social Media) ಮಾಡಲಾಗುವ ಟ್ರೋಲ್ನಿಂದ ಅನೇಕರು ಖಿನ್ನತೆಗೆ (Depression) ಒಳಗಾಗಿರುವ ಬಗ್ಗೆ ನಾನು ಕೇಳಿದ್ದೇನೆ. ಇಷ್ಟಾದರೂ ತಂಡದ ಮೇಲೆ ಅವರಿಗೆ ಕೊಂಚವು ಪ್ರೀತಿ ಕಡಿಮೆಯಾಗಿಲ್ಲ.
ನನ್ನ ಪ್ರಕಾರ, ಆರ್ಸಿಬಿ ಫ್ರಾಂಚೈಸಿ (RCB Franchise) ದೇವರಿಂದ ಪಡೆದ ಉಡುಗೊರೆ (God's Gift) ಎಂದರೆ ಅದು ಅತ್ಯಂತ ನಿಷ್ಠಾವಂತ ಅಭಿಮಾನಿಗಳು. ಅವರ ಅಭಿಮಾನಿಗಳು (Fans) ಯಾವಾಗಲೂ ಅವರ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿಯೇ ಐಪಿಎಲ್ನಲ್ಲಿ (IPL) ಆರ್ಸಿಬಿ (RCB) ಅತ್ಯಂತ ಸ್ಥಿರವಾಗಿ ನಿಂತಿರುವ ತಂಡವಾಗಿದೆ ಎಂದು ಅಭಿಮಾನಿಗಳನ್ನು ಕೊಂಡಾಡಿದ್ದಾರೆ. ಇತ್ತ ಅಶ್ವಿನ್ (Ashwin) ಅವರ ಮಾತುಗಳನ್ನು ಕೇಳಿ ಆರ್ಸಿಬಿ ಅಭಿಮಾನಿಗಳು (RCB Fans) ಫುಲ್ ಖುಷ್ ಆಗಿದ್ದು, ಅಶ್ವಿನ್ ಅವರ ಪೋಸ್ಟ್ಗೆ ಕಮೆಂಟ್ ಹಾಕುತ್ತಿದ್ದಾರೆ.