ಕ್ರೀಡೆ

KKR ತಂಡದಿಂದ ಅಚ್ಚರಿ ಆಯ್ಕೆ; ನಾಯಕತ್ವ ವಹಿಸಿಕೊಂಡ ಎಡಗೈ ಬ್ಯಾಟರ್​

ನವದೆಹಲಿ: IPL 16ನೇ ಆವೃತ್ತಿ ಶುರುವಿಗೆ ಇನ್ನೇನು ದಿನಗಳು ಹತ್ತಿರವಾಗುತ್ತಿದ್ದಂತೆ ಕೊಲ್ಕತಾ ನೈಟ್​ ರೈಡರ್ಸ್​​(KKR) ತಂಡವು ಅಚ್ಚರಿಯ ನಿರ್ಧಾರವನ್ನ ಪ್ರಕಟಿಸಿದೆ.

ತಂಡದ ಮ್ಯಾನೇಜ್​ಮೆಂಟ್​ ಎಡಗೈ ಬ್ಯಾಟ್ಸ್​​ಮ್ಯಾನ್​ ನಿತೀಶ್​ ರಾಣಾರನ್ನ ತಂಡದ ನೂತನ ನಾಯಕನನ್ನಾಗಿ ಘೋಷಿಸಿದೆ. ಹಾಲಿ ನಾಯಕ ಶ್ರೇಯಸ್​ ಅಯ್ಯರ್​ ಅನುಪಸ್ಥಿತಿಯಲ್ಲಿ ನಿತೀಶ್​ ತಂಡವನ್ನ ಮುನ್ನಡೆಸಲಿದ್ದಾರೆ.

ಇತ್ತೀಚಿಗೆ ಭಾರತ-ಆಸ್ಟ್ರೇಲಿಯಾ ನಡುವೆ ನಡೆದ ಬಾರ್ಡರ್​-ಗವಾಸ್ಕರ್​​ ಟೆಸ್ಟ್​​ ಸರಣಿ ವೇಳೆ ಶ್ರೇಯಸ್​ ಅಯ್ಯರ್​ ಬೆನ್ನು ನೋವಿನ ಸಮಸ್ಯೆಯಿಂದಾಗಿ ಟೆಸ್ಟ್​​ ಹಾಗೂ ಏಕದಿನ ಸರಣಿಯಿಂದ ಹೊರಗುಳಿದಿದ್ದರು.

ನಿತೀಶ್​ ರಾಣಾಗೂ ಮೊದಲು ಕೆಕೆಆರ್​ ತಂಡದ ನಾಯಕತ್ವವನ್ನ ವೆಸ್ಟ್​​ ಇಂಡೀಸ್​ನ ಮಾಜಿ ಆಲ್ರೌಂಡರ್​ ಸುನೀಲ್​ ನರೇನ್, ಸ್ಪೋಟಕ ಬ್ಯಾಟ್ಸ್​​ಮ್ಯಾನ್​ ಆಂಡ್ರೆ ರಸೆಲ್​​ ಹೆಸರು ಕೂಡ ಪ್ರಮುಖವಾಗಿ ಕೇಳಿ ಬಂದಿತ್ತು.