ಮುಂಬೈ: ಭಾರತ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಇದೀಗ ಮುಂಬರುವ ಐಪಿಎಲ್ ಆವೃತ್ತಿಗೆ ಸಜ್ಜಾಗುತ್ತಿದ್ದು, ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಆಡುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ ಅದ್ದೂರಿ ಪ್ರದರ್ಶನ ನೀಡಲು ಸಕಲ ತಯಾರಿಗಳನ್ನು ನಡೆಸುತ್ತಿದ್ದಾರೆ. ಆದರೆ ಈ ಮಧ್ಯೆ ಅವರ ಪತ್ನಿ ಧನಶ್ರೀ ವರ್ಮಾರನ್ನು ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ. ಅದಕ್ಕೆ ಕಾರಣವೂ ಇದೆ.
ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವ ಚಹಲ್ ಪತ್ನಿ, ಆಗಾಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತಾವು ಮಾಡಿದ ಡ್ಯಾನ್ಸ್ ವಿಡಿಯೋಗಳು ಅಥವಾ ರೀಲ್ಸ್ಗಳನ್ನು ಪೋಸ್ಟ್ ಮಾಡುವ ಮೂಲಕ ನೆಟ್ಟಿಗರ ಗಮನಸೆಳೆಯುತ್ತಾರೆ. ಆದರೆ ಇತ್ತೀಚಿಗೆ ನೃತ್ಯ ನಿರ್ದೇಶಕ ಪ್ರತೀಕ್ ಉಟೇಕರ್ ಅವರೊಂದಿಗೆ ತೆಗೆಸಿಕೊಂಡ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು, "ಕೊನೆಗೆ ನಾವು ನೆರೆಹೊರೆಯವರೆಂದು ಅರಿತುಕೊಂಡೆವು ಹ್ಹಹ್ಹ...." ಎಂಬ ಟೈಟಲ್ ಕೊಟ್ಟು ಧನಶ್ರೀ ಅವರನ್ನು ಟ್ಯಾಗ್ ಮಾಡಿದ ಪ್ರತೀಕ್ ವಿರುದ್ಧ ಇದೀಗ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
ಪ್ರತೀಕ್ ಮತ್ತು ಧನಶ್ರೀ ಅವರ ಫೋಟೋ ವೈರಲ್ ಆಗುತ್ತಿದ್ದಂತೆ ಕಮೆಂಟ್ ಮುಖೇನ ಟೀಕಿಸಿದ ನೆಟ್ಟಿಗರು, 'ಯುಜ್ವೇಂದ್ರ ಚಹಲ್ ನೆನಪಿಸಿಕೊಂಡರೆ ಪಾಪ ಅನಿಸುತ್ತೆ', 'ಫ್ರೆಂಡ್ ಆಗಿರಲಿ, ಯಾರೇ ಆಗಿರಲಿ ಮತ್ತೊಬ್ಬರ ಪತ್ನಿಯಾದ ಮೇಲೆ ನಿಮ್ಮ ಜವಾಬ್ದಾರಿಗಳು ನಿಮಗೆ ನೆನಪಿರಬೇಕು' ಎಂದೆಲ್ಲಾ ಅಭಿಪ್ರಾಯಿಸಿದ್ದಾರೆ. ಕಮೆಂಟ್ಗಳ ಸುರಿಮಳೆಯ ಬೆನ್ನಲ್ಲೇ ಪ್ರತೀಕ್ ತಮ್ಮ ಪೋಸ್ಟ್‌ನಲ್ಲಿನ ಕಾಮೆಂಟ್ ಆಯ್ಕೆಯನ್ನು ಮುಚ್ಚಿದ್ದಾರೆ.
ಡ್ಯಾನ್ಸ್ ರಿಯಾಲಿಟಿ ಶೋ ಜಲಕ್ ದಿಖ್ಲಾ ಜಾ ಸೀಸನ್ 11ರ ನಂತರ ಫರಾ ಖಾನ್ ಆಯೋಜಿಸಿದ್ದ ಪಾರ್ಟಿಯಲ್ಲಿ ತೆಗೆಸಿಕೊಂಡ ಫೋಟೋ ಇದು ಎಂದು ವರದಿ ಉಲ್ಲೇಖಿಸಿದೆ. ಸದ್ಯ ಧನಶ್ರೀ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಟ್ರೋಲ್ಗಳಲ್ಲಿ ಕೆಲವನ್ನು ಇಲ್ಲಿ ಅಟ್ಯಾಚ್ ಮಾಡಲಾಗಿದೆ ಗಮನಿಸಿ,(ಏಜೆನ್ಸೀಸ್).