ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ಅವಳಿ ಕಂಚಿನ ತಾರೆ ಮನು ಭಾಕರ್, ಅತಿ ಕಿರಿಯ ಚೆಸ್ ವಿಶ್ವ ಚಾಂಪಿಯನ್ ಡಿ. ಗುಕೇಶ್, ಭಾರತ ಹಾಕಿ ತಂಡದ ನಾಯಕ ಹರ್ಮಾನ್ಪ್ರೀತ್ ಸಿಂಗ್ ಮತ್ತು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಸ್ವರ್ಣ ಪದಕ ವಿಜೇತ ಹೈಜಂಪ್ಪಟು ಪ್ರವೀಣ್ ಕುಮಾರ್ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ "ಮೇಜರ್ ಧ್ಯಾನ್ಚಂದ್ ಖೇಲ್ರತ್ನ' ಗೌರವವನ್ನು ರಾಷ್ಟ್ರಪತಿ ದ್ರೌಪದಿ ಮುಮುರ್ ಅವರಿಂದ ಶುಕ್ರವಾರ ಸ್ವೀಕರಿಸಿದರು. ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಜಯಿಸಿದ 17 ಪ್ಯಾರಾ ಅಥ್ಲೀಟ್ಗಳ ಸಹಿತ 32 ಕ್ರೀಡಾ ಸಾಧಕರಿಗೆ ಅರ್ಜುನ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಯಿತು. ಈ ಬಾರಿ ಕರ್ನಾಟಕದ ಯಾವ ಕ್ರೀಡಾಪಟು ಕೂಡ ಪ್ರಶಸ್ತಿಗೆ ಭಾಜನರಾಗಿಲ್ಲ.
ರಾಷ್ಟ್ರಪತಿ ಭವನದಲ್ಲಿ ನಡೆದ 2024ರ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದ್ರೋಣಾಚಾರ್ಯ, ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ ಮತ್ತು ಮೌಲಾನಾ ಅಬ್ದುಲ್ ಕಲಾಂ ಆಜಾದ್ ಟ್ರೋಫಿಯನ್ನೂ ವಿತರಿಸಲಾಯಿತು. ಸಾಮಾನ್ಯವಾಗಿ ಆಗಸ್ಟ್ 29ರ ರಾಷ್ಟ್ರೀಯ ಕ್ರೀಡಾ ದಿನದಂದು ನಡೆಯುವ ಸಮಾರಂಭ ಈ ಬಾರಿ, ಪ್ಯಾರಿಸ್ ಒಲಿಂಪಿಕ್ಸ್&ಪ್ಯಾರಾಲಿಂಪಿಕ್ಸ್ ಸಾಧಕರನ್ನೂ ಪ್ರಶಸ್ತಿ ಪರಿಗಣಿಸುವ ಕಾರಣಕ್ಕಾಗಿ ಮುಂದೂಡಲ್ಪಟ್ಟಿತ್ತು.
ಪ್ಯಾರಿಸ್ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಜಯಿಸಿದ ಎಲ್ಲ ಕ್ರೀಡಾ ಸಾಧಕರಿಗೆ (ಈ ಹಿಂದೆ ಪ್ರಶಸ್ತಿ ಪಡೆಯದವರು) ಈ ಬಾರಿ ಅರ್ಜುನ ಪ್ರಶಸ್ತಿ ನೀಡಲಾಗಿದೆ. ಒಲಿಂಪಿಕ್ಸ್ನಲ್ಲಿ ಕಂಚು ಜಯಿಸಿದ ಕುಸ್ತಿಪಟು ಅಮನ್ ಸೆಹ್ರಾವತ್, ಶೂಟರ್ಗಳಾದ ಸ್ವಪ್ನಿಲ್ ಕುಸಾಲೆ, ಸರಬ್ಜೋತ್ ಸಿಂಗ್ ಮತ್ತು ಹಾಕಿ ತಂಡದ ಸದಸ್ಯರಾದ ಜರ್ಮನ್ಪ್ರೀತ್ ಸಿಂಗ್, ಸುಖ್ಜೀತ್ ಸಿಂಗ್, ಸಂಜಯ್ ಮತ್ತು ಅಭಿಷೇಕ್ ಅರ್ಜುನ ಪ್ರಶಸ್ತಿ ಪುರಸತರಾಗಿದ್ದಾರೆ. ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಜಯಿಸಿದ ಬ್ಯಾಡ್ಮಿಂಟನ್ ಆಟಗಾರ ನಿತೇಶ್ಕುಮಾರ್, ಕ್ಲಬ್ ಥ್ರೋಪಟು ಧರಂವೀರ್, ಜಾವೆಲಿನ್ ಥ್ರೋಪಟು ನವದೀಪ್ ಸಿಂಗ್ ಜತೆಗೆ ಬೆಳ್ಳಿ, ಕಂಚು ಗೆದ್ದ ಪ್ಯಾರಾ ಕ್ರೀಡಾಪಟುಗಳಿಗೂ ಅರ್ಜುನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗಾಲಿಕುರ್ಚಿಯ ಕ್ರೀಡಾ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲು ರಾಷ್ಟ್ರಪತಿ ವೇದಿಕೆ ಮೇಲಿನಿಂದ ಕೆಳಗಿಳಿದು ಬಂದರು.
ಕ್ರೀಡಾ ಸಚಿವ ಮಾನ್ಸುಖ್ ಮಾಂಡವೀಯ, ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಸಹಿತ ಅನೇಕ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು. ಖೇಲ್ರತ್ನ 25 ಲಕ್ಷ ರೂ. ಮತ್ತು ಅರ್ಜುನ, ದ್ರೋಣಾಚಾರ್ಯ ಪ್ರಶಸ್ತಿ 15 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ.
ಹೃದಯ ಗೆದ್ದ ಮಾಜಿ ಸೈನಿಕ ಪೆಟ್ಕರ್
1965ರ ಭಾರತ&ಪಾಕಿಸ್ತಾನ ಯುದ್ಧದಲ್ಲಿ ಗುಂಡೇಟು ತಿಂದು ಅಂಗವಿಕಲರಾದ ಬಳಿಕ ಪ್ಯಾರಾ ಈಜುಪಟುವಾಗಿ ಬದಲಾಗಿದ್ದಲ್ಲದೆ, 1972ರಲ್ಲೇ ಪ್ಯಾರಾಲಿಂಪಿಕ್ಸ್ನಲ್ಲಿ ಸ್ವರ್ಣ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎನಿಸಿದ್ದ ಮುರಳಿಕಾಂತ್ ಪೆಟ್ಕರ್, ಅರ್ಜುನ ಪ್ರಶಸ್ತಿ ಸ್ವೀಕಾರದ ವೇಳೆ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ನಲ್ಲಿ ಅತ್ಯಧಿಕ ಕರತಾಡನ ಕೇಳಿಸಿತು. 80 ವರ್ಷದ ಪೆಟ್ಕರ್ಗೆ ಕ್ರೀಡಾ ಸಾಧನೆಯ 53 ವರ್ಷಗಳ ಬಳಿಕ ಜೀವಮಾನ ಸಾಧನೆ ವಿಭಾಗದಲ್ಲಿ ಅರ್ಜುನ ಗೌರವ ಒಲಿದಿದೆ. ಅವರ ಬಯೋಪಿಕ್ "ಚಂದು ಚಾಂಪಿಯನ್' ಹೆಸರಿನಲ್ಲಿ ಇತ್ತೀಚೆಗೆ ತೆರೆಕಂಡಿತ್ತು. ಅದರಲ್ಲಿ ನಾಯಕರಾಗಿ ನಟಿಸಿದ್ದ ಕಾರ್ತಿಕ್ ಆರ್ಯನ್ ಕೂಡ ಸಮಾರಂಭದಲ್ಲಿ ಹಾಜರಿದ್ದರು.
2024ರ ಕ್ರೀಡಾ ಪ್ರಶಸ್ತಿ ಪುರಸ್ಕೃತರು:
ಮೇಜರ್ ಧ್ಯಾನ್ಚಂದ್ ಖೇಲ್ರತ್ನ: ಡಿ. ಗುಕೇಶ್ (ಚೆಸ್), ಮನು ಭಾಕರ್ (ಶೂಟಿಂಗ್), ಹರ್ಮಾನ್ಪ್ರೀತ್ ಸಿಂಗ್ (ಹಾಕಿ), ಪ್ರವಿಣ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್).
ಅರ್ಜುನ: ಜ್ಯೋತಿ ಯರಾಜಿ, ಅನ್ನು ರಾಣಿ (ಅಥ್ಲೆಟಿಕ್ಸ್), ಸವೀಟಿ, ನೀತು (ಬಾಕ್ಸಿಂಗ್), ಸ್ವಪ್ನಿಲ್ ಕುಸಾಲೆ, ಸರಬ್ಜೋತ್ ಸಿಂಗ್ (ಶೂಟಿಂಗ್), ಅಭಯ್ ಸಿಂಗ್ (ಸ್ಕಾ$್ವಷ್), ಸಾಜನ್ ಪ್ರಕಾಶ್ (ಈಜು), ಅಮನ್ ಸೆಹ್ರಾವತ್ (ಕುಸ್ತಿ), ವಂತಿಕಾ ಅಗರ್ವಾಲ್ (ಚೆಸ್), ಸಲಿಮಾ ಟೆಟೆ, ಅಭಿಷೇಕ್, ಸಂಜಯ್, ಜರ್ಮನ್ಪ್ರೀತ್ ಸಿಂಗ್, ಸುಖ್ಜೀತ್ ಸಿಂಗ್ (ಹಾಕಿ), ರಾಕೇಶ್ ಕುಮಾರ್ (ಪ್ಯಾರಾ ಆರ್ಚರಿ), ಪ್ರೀತಿ ಪಾಲ್, ಜೀವಾಂಜಿ ದೀಪ್ತಿ, ಅಜೀತ್ ಸಿಂಗ್, ಸಚಿನ್ ಖಿಲಾರಿ, ಧರಂವೀರ್, ಪ್ರಣವ್ ಸೂರ್ಮ, ಎಚ್. ಹೊಕಾಟೊ ಸೆಮಾ, ಸಿಮ್ರನ್, ನವದೀಪ್ (ಪ್ಯಾರಾ ಅಥ್ಲೆಟಿಕ್ಸ್), ನಿತೀಶ್ ಕುಮಾರ್, ತುಳಸಿಮತಿ ಮುರುಗೇಶನ್, ನಿತ್ಯಾಶ್ರೀ ಸುಮತಿ ಶಿವನ್, ಮನೀಷಾ ರಾಮದಾಸ್ (ಪ್ಯಾರಾ ಬ್ಯಾಡ್ಮಿಂಟನ್), ಕಪಿಲ್ ಪಾರ್ಮರ್ (ಪ್ಯಾರಾ ಜುಡೋ), ಮೋನಾ ಅಗರ್ವಾಲ್, ರುಬಿನಾ ್ರಾನ್ಸಿಸ್ (ಪ್ಯಾರಾ ಶೂಟಿಂಗ್).
ಅರ್ಜುನ (ಜೀವಮಾನ ಸಾಧನೆ): ಸುಚಾ ಸಿಂಗ್ (ಅಥ್ಲೆಟಿಕ್ಸ್), ಮುರಳಿಕಾಂತ್ ರಾಜಾರಾಮ್ ಪೆಟ್ಕರ್ (ಪ್ಯಾರಾ ಈಜು).
ದ್ರೋಣಾಚಾರ್ಯ: ಸುಭಾಷ್ ರಾಣಾ (ಪ್ಯಾರಾ ಶೂಟಿಂಗ್), ದೀಪಾಲಿ ದೇಶಪಾಂಡೆ (ಶೂಟಿಂಗ್), ಸಂದೀಪ್ ಸಂಗ್ವಾನ್ (ಹಾಕಿ).
ದ್ರೋಣಾಚಾರ್ಯ (ಜೀವಮಾನ ಸಾಧನೆ): ಎಸ್. ಮುರಳೀಧರನ್ (ಬ್ಯಾಡ್ಮಿಂಟನ್), ಅರ್ಮಾಂಡೊ ಆಗ್ನೆಲೊ ಕೊಲಾಕೊ (ುಟ್ಬಾಲ್).
ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ: ಭಾರತೀಯ ದೈಹಿಕ ಶಿಕ್ಷಣ ೌಂಡೇಷನ್.
ಮೌಲಾನಾ ಅಬ್ದುಲ್ ಕಲಾಂ ಆಜಾದ್ ಟ್ರೋಫಿ: ಚಂಡೀಗಢ ವಿವಿ, ಲವ್ಲಿ ಪ್ರೊೆಷನಲ್ ವಿವಿ, ಗುರುನಾನಕ್ ದೇವ್ ವಿವಿ.