ಮುಂಬೈ: ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸೀರ್ ಹುಸೇನ್ಗೆ ಭಾರತ ತಂಡದ ಮಾಜಿ ಸೌರವ್ ಗಂಗೂಲಿ ಕಂಡರೆ ಆಗಲ್ವಂತೆ. ನಾನು ಕ್ರಿಕೆಟ್ನಲ್ಲಿ ದ್ವೇಷಿಸುವ ಆಟಗಾರ ಗಂಗೂಲಿ ಎನ್ನುತ್ತಾರೆ ನಾಸೀರ್. ಗಂಗೂಲಿ ಭಾರತದ ನಾಯಕರಾಗಿದ್ದ ವೇಳೆ ನಾಸೀರ್ ಇಂಗ್ಲೆಂಡ್ ತಂಡದ ನಾಯಕರಾಗಿದ್ದರು. ಭಾರತ-ಇಂಗ್ಲೆಂಡ್ ಪಂದ್ಯದ ವೇಳೆ ಗಂಗೂಲಿ ಟಾಸ್ಗಾಗಿ ತಡವಾಗಿ ಬರುತ್ತಿದ್ದಕ್ಕೆ ನಾಸೀರ್ ಹುಸೇನ್ಗೆ ಇನ್ನು ಸಿಟ್ಟಿದೆಯಂತೆ. ಇದೀಗ ವೀಕ್ಷಕ ವಿವರಣೆ ಮೂಲಕ ಉತ್ತಮ ಕಾಮೆಂಟರಿ ಬಾಕ್ಸ್ನಲ್ಲಿ ಉತ್ತಮ ಸ್ನೇಹಿತರಾಗಿದ್ದೇವೆ ಎನ್ನುತ್ತಾರೆ.
ಏಕಕಾಲದಲ್ಲೇ ಇಬ್ಬರು ನಾಯಕರಾಗಿದ್ದರು. ಹುಸೇನ್ 1999 ರಿಂದ 2003ರವರೆಗೆ 45 ಟೆಸ್ಟ್ ಪಂದ್ಯಗಳಿಗೆ ಇಂಗ್ಲೆಂಡ್ ಮುನ್ನಡೆಸಿದ್ದರೆ, 1997 ರಿಂದ 2003ರವರೆಗೆ 56 ಏಕದಿನ ಪಂದ್ಯ ಮುನ್ನಡೆಸಿದ್ದಾರೆ. ಮತ್ತೊಂದೆಡೆ, ಸೌರವ್ ಗಂಗೂಲಿ, 2000 ರಿಂದ 2005ರವರೆಗೆ 49 ಟೆಸ್ಟ್, 1999 ರಿಂದ 2005 ರವರೆಗೆ 146 ಏಕದಿನ ಪಂದ್ಯಗಳಿಗೆ ಭಾರತ ತಂಡ ಮುನ್ನಡೆಸಿದ್ದರು. 2002ರಲ್ಲಿ ಲಾರ್ಡ್ಸ್ನಲ್ಲಿ ನಡೆದ ನ್ಯಾಟ್ವೆಸ್ಟ್ ಸಿರೀಸ್ನಲ್ಲಿ ಭಾರತ ಇಂಗ್ಲೆಂಡ್ ನೀಡಿದ್ದ 326 ರನ್ ಮೊತ್ತ ಬೆನ್ನಟ್ಟಿತ್ತು. ಬಳಿಕ 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲೂ ಭಾರತ 82 ರನ್ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿತ್ತು.
https://www.vijayavani.net/ms-dhonis-10th-wedding-anniversary-how-did-mahi-and-sakshi-really-meet-for-the-first-time/