ಕ್ರೀಡೆ

ಭಾರತ-ಆಸೀಸ್​ ಟಿ20 ಪಂದ್ಯ; ನಮ್ಮ ಮೆಟ್ರೋ ರೈಲುಗಳ ಸೇವೆ ವಿಸ್ತರಣೆ

ಬೆಂಗಳೂರು: ಭಾನುವಾರ (ಡಿಸೆಂಬರ್ 03) ದಂದು ಬೆಂಗಳೂರಿನ ಚಿನ್ನಸ್ಚಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯ ನಡುವೆ ನಡೆಯಲಿರುವ ಅಂತಿಮ ಟಿ-20 ಕದನಕ್ಕೆ ಸಂಬಂಧಿಸಿದಂತೆ ನಮ್ಮ ಮೆಟ್ರೋ ರೈಲುಗಳ ಸೇವೆಯನ್ನು ವಿಸ್ತರಿಸಿದೆ.

ನಗರದ ವಿವಿದೆಢೆಯಿಂದ ಪಂದ್ಯವನ್ನು ವೀಕ್ಷಿಸಲು ಸಾರ್ವಜನಿಕರು ಆಗಮಿಸಲಿದ್ದು, ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬೈಯ್ಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ಸಿಲ್ಕ್ ಇನ್ಸ್ಟಿಟ್ಯೂಟ್ ಮೆಟ್ರೋ ಸಂಚಾರ ಸೇವೆಯಲ್ಲಿ ವಿಸ್ತರಣೆ ಮಾಡಲಾಗಿದೆ. ರಾತ್ರಿ ಪಂದ್ಯವನ್ನು ಮುಗಿಸಿಕೊಂಡು ಯಾವುದೇ ಭೀತಿಯಿಲ್ಲದೆ ಆರಾಮಾಗಿ ಕ್ರೀಡಾಭಿಮಾನಿಗಳು ಪ್ರಯಾಣಿಸಬಹುದಾಗಿದೆ.

ನೇರಳೆ ಮತ್ತು8 ಹಸಿರು ಮಾರ್ಗದಲ್ಲಿರುವ ರೈಲುಗಳ ಸೇವೆಯನ್ನು ರಾತ್ರಿ 11;45ರ ವರೆಗೆ ವಿಸ್ತರಿಸಲಾಗಿದ್ದು, ಡಿಸೆಂಬರ್​ 3ರಂದು ಪೇಪರ್​ ಟಿಕೆಟ್​ಗಳನ್ನು ಹಂಚಲಾಗುವುದು ಎಂದು ತಿಳಿಸಿದೆ.  ಬರುವ ಮತ್ತು ಹೋಗುವ ಪ್ರಯಾಣಕ್ಕೆ 50 ರೂಪಾಯಿ ಟಿಕೆಟ್ ನಿಗದಿಪಡಿಸಿ ಬಿಎಂಆರ್​ಸಿಎಲ್ ಪ್ರಕಟಣೆ ಹೊರಡಿಸಿದೆ.

ಬೆಂಗಳೂರಿನ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲೂ ಪೇಪರ್ ಟಿಕೆಟ್​ ಲಭ್ಯವಾಗಲಿದೆ. ಪೇಪರ್ ಕಾರ್ಡ್​ಗಳ ಜೊತೆಗೆ ಸ್ಮಾರ್ಟ್ ಕಾರ್ಡ್ ಹಾಗೂ ಎನ್​ಸಿಎಂಸಿ ವ್ಯವಸ್ಥೆಯನ್ನು ಕೂಡ ಪ್ರಯಾಣಿಕರು ಉಪಯೋಗಿಸಬಹುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.