More

  ನಾನು ಇರ್ಫಾನ್​ ಪಠಾಣ್​ ಪ್ರೀತಿಸುತ್ತಿದ್ದೆವು; ಗೌತಮ್​ ಗಂಭೀರ್​ ಮಿಸ್ಟ್​ ಕಾಲ್​ ಕೊಡುತ್ತಿದ್ದರು ಎಂದ ಬಾಲಿವುಡ್​ ನಟಿ

  ಮುಂಬೈ: ಟೀಂ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್​​ ಶಮಿ ಅವರನ್ನು ಮದುವೆಯಾಗಲು ನಾನು ತಯಾರಿದ್ದೇನೆ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದ ಬಾಲಿವುಡ್​ ನಟಿ ಪಾಯಲ್​ ಘೋಷ್​ ಈಗ ಮಾಜಿ ಕ್ರಿಕೆಟಿಗರಾದ ಗೌತಮ್​ ಗಂಭೀರ್​ ಹಾಗೂ ಇರ್ಫಾನ್​ ಪಠಾಣ್​ ಬಗ್ಗೆ ಮಾತನಾಡುವ ಮೂಲಕ ಮತ್ತೊಮ್ಮೆ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ.

  ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರದುಕೊಂಡಿರುವ ನಟಿ ನಾನು ಹಾಗೂ ಇರ್ಫಾನ್ ಪಠಾಣ್ ಐದು ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದೆವು ಎಂದು ಹೇಳುವ ಮೂಲಕ ಹೊಸ ಬಾಂಬ್​ ಒಂದನ್ನು ಸಿಡಿಸಿದ್ದಾರೆ.

  2011 ರಿಂದ ಐದು ವರ್ಷಗಳ ಕಾಲ ನಾನೂ ಹಾಗೂ ಇರ್ಫಾನ್ ಪಠಾಣ್ ಪರಸ್ಪರ ಪ್ರೀತಿಸುತ್ತಿದ್ದೆವು. ಆ ಸಮಯದಲ್ಲಿ ಗೌತಮ್ ಗಂಭೀರ್ ಹಾಗೂ ಅಕ್ಷಯ್ ಕುಮಾರ್ ಸಹ ನನ್ನ ಬೆನ್ನ ಹಿಂದೆ ಬಿದ್ದಿದ್ದರು. ಆದರೆ ನಾನು ಇರ್ಫಾನ್ ಪಠಾಣ್ ಮೇಲೆ ಬಹಳ ಪ್ರೀತಿಯಿತ್ತು, ಅವರನ್ನು ಬಿಟ್ಟು ಬೇರೆ ಯಾರನ್ನೂ ನಾನು ನೋಡಲಿಲ್ಲ.  ಗೌತಮ್ ಗಂಭೀರ್ ಪ್ರತಿಬಾರಿ ನನಗೆ ಫೋನ್ ಮಾಡಿದಾಗಲೂ ಆ ಮಿಸ್​ಕಾಲ್​ಗಳನ್ನೆಲ್ಲ ನಾನು ಇರ್ಫಾನ್ ಪಠಾಣ್​ಗೆ ತೋರಿಸುತ್ತಿದ್ದೆ. ಇರ್ಫಾನ್​ಗೂ ಇದು ಬೇಸರ ತಂದಿತ್ತು. ಈ ಬಗ್ಗೆ ಅವರ ಸಹೋದರ ಯೂಸಫ್ ಪಠಾಣ್ ಬಳಿಯೂ ಅವರು ಮಾತನಾಡಿದ್ದರು.

  ಈ ವಿಷಯ ಹಾರ್ದಿಕ್ ಪಾಂಡ್ಯಾ ಹಾಗೂ ಕೃನಾಲ್ ಪಾಂಡ್ಯಾ ಅವರುಗಳಿಗೆ ಸಹ ಗೊತ್ತು. ಅವರು ಪುಣೆಯಲ್ಲಿ ರಣಜಿ ಪಂದ್ಯ ಆಡುವಾಗ ನಾನು ಅಲ್ಲಿಗೆ ಹೋಗಿದ್ದೆ. ಆಗ ನನ್ನ ಎದುರೇ ಇರ್ಫಾನ್ ಪಠಾಣ್ ಈ ವಿಷಯವನ್ನು ಪಾಂಡ್ಯಾ ಸಹೋದರರಿಗೆ ಹೇಳಿದ್ದರು. ಆದರೆ ನಾನೂ ಹಾಗೂ ಇರ್ಫಾನ್ ಪಠಾಣ್ 2016ರ ವಿಶ್ವಕಪ್ ಸಮಯದಲ್ಲಿ ಬ್ರೇಕ್ ಅಪ್ ಮಾಡಿಕೊಂಡೆವು.

  ಇದನ್ನೂ ಓದಿ: ಐಪಿಎಲ್​ಗೆ ಶುರುವಾಯಿತು ಸಂಕಷ್ಟ; ಈ ಬಾರಿ ಭಾರತದಲ್ಲಿ ನಡೆಯುವುದು ಡೌಟ್​!

  ಬ್ರೇಕ್​ಅಪ್ ಇಂದಾಗಿ ನನ್ನ ಆರೋಗ್ಯವೇ ಹದಗೆಟ್ಟಿತು. ನಾನು ಖಿನ್ನತೆಗೆ ಗುರಿಯಾದೆ, ಕೆಲವು ವರ್ಷಗಳ ಕಾಲ ನನಗೆ ಕೆಲಸ ಮಾಡಲು ಸಹ ಆಗಲಿಲ್ಲ. ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಸಹ ನನ್ನ ಹಿಂದೆ ಬಿದ್ದಿದ್ದರು. ಆದರೆ ಎಂದೂ ಸಹ ಅವರು ನನ್ನೊಟ್ಟಿಗೆ ಕೆಟ್ಟದಾಗಿ ನಡೆದುಕೊಳ್ಳಲಿಲ್ಲ. ಅವರೊಬ್ಬ ಜಂಟಲ್​ಮ್ಯಾನ್, ನಾನು ಅವರನ್ನು ಬಹಳ ಗೌರವಿಸುತ್ತೀನಿ ಎಂದು ನಟಿ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

  ನಟಿ ಪಾಯಲ್​ ಘೋಷ್​ ಆಗಿಂದಾಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಾರೆ. ಕೆಲ ವರ್ಷಗಳ ಹಿಂದೆ ನಿರ್ದೇಶಕ ಅನುರಾಗ್​ ಕಶ್ಯಪ್​ ಹಾಗೂ ನಟಿ ರಿಚಾ ಚಡ್ಡಾ ವಿರುದ್ಧ ಆರೋಪ ಮಾಡಿದ್ದರು, ಮಾನನಷ್ಟ ಮೊಕದ್ದಮೆ ಹೂಡಿದ ಬಳಿಕ ಪಾಯಲ್​ ಘೋಷ್​ ಬೇಷರತ್​ ಕ್ಷಮೆಯಾಚಿಸಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts