ಬೆಂಗಳೂರು: ಮಯಾಂಕ್ ಅಗರ್ವಾಲ್ ಸಾರಥ್ಯದ ಬೆಂಗಳೂರು ಬ್ಲಾಸ್ಟರ್ಸ್ ತಂಡ 2ನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಟೂರ್ನಿಯಲ್ಲಿ ಸತತ 5ನೇ ಪಂದ್ಯದಲ್ಲೂ ಗೆಲುವಿನ ಖಾತೆ ತೆರೆಯಲು ವಿಲವಾಗಿದೆ. ಮಳೆ ಅಡಚಣೆ ಎದುರಿಸಿದ ಶನಿವಾರದ ಮೊದಲ ಪಂದ್ಯದಲ್ಲಿ ಹಾಲಿ ರನ್ನರ್ಅಪ್ ಬೆಂಗಳೂರು ತಂಡ ಮೈಸೂರು ವಾರಿಯರ್ಸ್ ಎದುರು ವಿಜೆಡಿ ನಿಯಮದನ್ವಯ 33 ರನ್ಗಳಿಂದ ಪರಾಭವಗೊಂಡಿತು. ಹ್ಯಾಟ್ರಿಕ್ ಗೆಲುವು ಕಂಡ ಕರುಣ್ ನಾಯರ್ ನೇತೃತ್ವದ ಮೈಸೂರು ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಮೈಸೂರು, 7 ವಿಕೆಟ್ಗೆ 185 ರನ್ ಪೇರಿಸಿತು. ಪ್ರತಿಯಾಗಿ ಬೆಂಗಳೂರು 11.1 ಓವರ್ಗಳಲ್ಲಿ 5 ವಿಕೆಟ್ಗೆ 81 ರನ್ ಗಳಿಸಿ ಸಂಕಷ್ಟದಲ್ಲಿದ್ದಾಗ ಮಳೆ ಅಡಚಣೆ ತಂದಿತು. ನಂತರ ಲಿತಾಂಶ ನಿರ್ಧಾರಕ್ಕೆ ವಿಜೆಡಿ ನಿಯಮದ ಮೊರೆ ಹೋದಾಗ, ಈ ಹಂತದಲ್ಲಿ 115 ರನ್ ಗಳಿಸಬೇಕಾಗಿದ್ದ ಬೆಂಗಳೂರು ಸೋಲುಂಡಿತು.
ಮೈಸೂರು ವಾರಿಯರ್ಸ್: 20 ಓವರ್ಗಳಲ್ಲಿ 7 ವಿಕೆಟ್ಗೆ 185 (ಸಮರ್ಥ್ 1, ಸಿಎ ಕಾರ್ತಿಕ್ 62, ಕರುಣ್ 2, ಮನೋಜ್ ಭಾಂಡಗೆ 28, ಜೆ. ಸುಚಿತ್ 31*, ಶುಭಾಂಗ್ ಹೆಗ್ಡೆ 23ಕ್ಕೆ 4, ರಿಷಿ ಬೋಪಣ್ಣ 19ಕ್ಕೆ 2), ಬೆಂಗಳೂರು ಬ್ಲಾಸ್ಟರ್ಸ್: 11.1 ಓವರ್ಗಳಲ್ಲಿ 5 ವಿಕೆಟ್ಗೆ 81 (ನಿಶ್ಚಲ್ 6, ಮಯಾಂಕ್ 2, ಜೆಸ್ವಂತ್ 19, ಸೂರಜ್ 31, ಸಿಎ ಕಾರ್ತಿಕ್ 16ಕ್ಕೆ 2, ಜೆ. ಸುಚಿತ್ 8ಕ್ಕೆ 2). ಪಂದ್ಯಶ್ರೇಷ್ಠ: ಸಿಎ ಕಾರ್ತಿಕ್.