ನವದೆಹಲಿ: ಎಂಎಸ್ ಧೋನಿ ಭಾರತೀಯ ಕ್ರಿಕೆಟ್ ತಂಡ ಶ್ರೇಷ್ಠ ಹಾಗೂ ಅದೃಷ್ಟ ನಾಯಕ. ಕ್ಯಾಪ್ಟನ್ ಕೂಲ್ ಎಂದು ಕರೆಸಿಕೊಳ್ಳುತ್ತಿದ್ದ ಧೋನಿ ಒಂದು ವರ್ಷದಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ಲಾಕ್ಡೌನ್ನಿಂದಾಗಿ ಜಾರ್ಖಂಡ್ ರಾಜಧಾನಿ ರಾಂಚಿಯ ಹೊರವಲಯದಲ್ಲಿರುವ ತಮ್ಮ ಫಾಮ್ರ್ಹೌಸ್ನಲ್ಲಿ ಕುಟುಂಬ ಸದಸ್ಯರೊಂದಿಗಿದ್ದಾರೆ. ಕ್ರಿಕೆಟ್ನಿಂದ ದೂರ ಉಳಿದರೂ ಧೋನಿ ಹೆಸರು ಮಾತ್ರ ಎಂದಿಂಗೂ ಚಾಲ್ತಿಯಲ್ಲಿರುತ್ತದೆ. ಧೋನಿ ಹಾಗೂ ಸಾಕ್ಷಿ ಸಿಂಗ್ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಇಂದಿಗೆ (ಜುಲೈ 4) 10 ವರ್ಷ ಪೂರೈಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಧೋನಿ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ವಾರ್ಷಿಕೋತ್ಸವದ
2008ರ ಮಾರ್ಚ್ನಿಂದ ಡೇಟಿಂಗ್ ಶುರುಮಾಡಿದ ಈ ಜೋಡಿ 2010ರಲ್ಲಿ ಡೆಹ್ರಾಡೂನ್ನ ರೆಸಾರ್ಟ್ವೊಂದರಲ್ಲಿ ಮದುವೆಯಾಗುತ್ತದೆ. ನಂತರ ನಾಲ್ಕೂ ದಿನಗಳ ಕಳೆದ ಬಳಿಕ ಮುಂಬೈನಲ್ಲಿ ನಡೆಯುವ ಧೋನಿ ರ್ಬತ್ಡೇ ಪಾಟಿರ್ಯಲ್ಲಿ ಸಾಕ್ಷಿ ಹಾಜರಾಗುತ್ತಾರೆ. ಈ ಜೋಡಿಗೆ ಜೀವಾ ಹೆಸರಿನ 5 ವರ್ಷದ ಮಗಳಿದ್ದಾಳೆ.