ನವದೆಹಲಿ: ಎಂಎಸ್ ಧೋನಿ.. ಈ ಹೆಸರು ಹೇಳಿದಾಗ ಎಲ್ಲರಿಗೂ ಅವರ ನಾಯಕತ್ವ ನೆನಪಾಗುತ್ತದೆ. ಮಹಿ ಬ್ಯಾಟ್ಸ್‌ಮನ್ ಆಗಿಯೂ ಹಲವು ಅತ್ಯುತ್ತಮ ದಾಖಲೆಗಳನ್ನು ಬರೆದಿದ್ದಾರೆ. ಭಾರತ ತಂಡಕ್ಕೆ 2 ವಿಶ್ವಕಪ್‌ಗಳನ್ನು ನೀಡಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಅವರ ಹೆಸರು ಕ್ರಿಕೆಟ್ ಜಗತ್ತಿನಲ್ಲಿ ಪ್ರಸಿದ್ಧವಾಯಿತು. ಐಪಿಎಲ್‌ನಲ್ಲಿ ಸಿಎಸ್‌ಕೆಯನ್ನು ಐದು ಬಾರಿ ಚಾಂಪಿಯನ್ ಮಾಡುವ ಮೂಲಕ ಮಹಿ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಒಬ್ಬರಾದರು. ಯಾವುದಕ್ಕೂ ಹೆದರದೇ ನಾಯಕನಾಗಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದರಿಂದಲೇ ಇಷ್ಟೆಲ್ಲ ಸಾಧಿಸಿದ್ದಾರೆ ಎನ್ನುತ್ತಾರೆ ಎಲ್ಲರೂ, ಆದರೆ ನನಗೆ ಭಯವಿದೆ ಎಂದು ವೇದಿಕೆಯೊಂದರಲ್ಲಿ ಧೋನಿಯೇ ಸ್ವತಃ ಹೇಳಿದ್ದಾರೆ ಎನ್ನಾಗಿದೆ.
ಸಿಎಸ್‌ಕೆ ಫ್ರಾಂಚೈಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಎಂಎಸ್ ಧೋನಿ ಯಾರಾದರೂ ಭಯಪಡುವುದು ಬಹಳ ಮುಖ್ಯ. ಭಯವಿಲ್ಲದಿದ್ದರೆ ನನ್ನ ಬುದ್ಧಿಯು ಹೊರಬರುವುದಿಲ್ಲ. ಭಯವು ನನ್ನನ್ನು ಬುದ್ಧಿವಂತ ಮತ್ತು ಧೈರ್ಯಶಾಲಿಯನ್ನಾಗಿ ಮಾಡುತ್ತದೆ ಎಂದಿದ್ದಾರೆ.
ನಾನು ಭಯ ಮತ್ತು ಒತ್ತಡವನ್ನು ಆನಂದಿಸುತ್ತೇನೆ. ಎರಡನ್ನೂ ಹೊಂದುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇವು ನನಗೆ ಸಹಾಯ ಮಾಡುತ್ತವೆ ಎಂದಿದ್ದಾರೆ.
ನನಗೆ ಭಯವಿಲ್ಲ ಎಂದು ಹಲವರು ಹೇಳುತ್ತಾರೆ. ನಾನು ನಿರ್ಭೀತ ಎಂದು ಅವರು ಭಾವಿಸುತ್ತಾರೆ. ಆದರೆ ನನಗೆ ಭಯವಾಗುತ್ತಿದೆ. ಇಲ್ಲದಿದ್ದರೆ ನಾವು ನಿರ್ಲಕ್ಷ್ಯ ಮಾಡುತ್ತೇವೆ. ಭಯವಿಲ್ಲದೆ ನಾವು ಯಾವುದನ್ನೂ ಗೌರವಿಸುವುದಿಲ್ಲ. ಇವೆಲ್ಲವೂ ವೈಯಕ್ತಿಕ ಸುಧಾರಣೆಗೆ ತುಂಬಾ ಉಪಯುಕ್ತವಾಗಿವೆ' ಎಂದು ಧೋನಿ ಹೇಳಿದ್ದಾರೆ. .