ಕ್ರೀಡೆ

IPL 2025 ಕ್ಕೂ ಮುನ್ನ ನಿವೃತ್ತಿಯ ಬಗ್ಗೆ ಮೌನ ಮುರಿದ ಎಂ.ಎಸ್​. ಧೋನಿ; ಅಭಿಮಾನಿಗಳಿಗೆ ಹೇಳಿದ್ದೇನು?

IPL 2025: ಟೀಮ್​​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಇದೀಗ ಅಂತರಾಷ್ಟ್ರೀಯ ಕ್ರಿಕೆಟ್​​ನಿಂದ ದೂರು ಸರಿದು(ನಿವೃತ್ತಿ) ಆರು ವರ್ಷಗಳಾಗಿವೆ. ಸದ್ಯ ಚೈನ್ನೈ ಸೂಪರ್​ ಕಿಂಗ್ಸ್​ ಪ್ರಾಂಚೈಸಿ ಪರವಾಗಿ ಆಡುತ್ತಿರುವ ಧೋನಿ, 2025ರ IPL ಶುರುವಾಗುವುದಕ್ಕೂ ಮುನ್ನ ತಮ್ಮ ನಿವೃತ್ತಿಯ ಬಗ್ಗೆ ಕ್ಲ್ಯಾರಿಟಿ ಕೊಟ್ಟಿದ್ದಾರೆ.

ಹೌದು, 'ಮಗುವಿನಿಂತೆ' ಕ್ರಿಕೆಟ್​ ಆಡಲು ಬಯಸುವೆ ಎಂದಿರುವ ಧೋನಿ ಪರೋಕ್ಷವಾಗಿ ಐಪಿಎಲ್​ನಿಂದ ದೂರ ಸರಿಯುವುದು ಸದ್ಯಕ್ಕೆ ಇಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಸಿಂಗಲ್​.ಐಡಿ(Single.ID) ನಡೆಸಲ್ಪಡುವ ಕಾರ್ಯಕ್ರಮದಲ್ಲಿ ಬುಧವಾರ ಧೋನಿ ಮಾತನಾಡಿದ್ದಾರೆ.''ನಾನು 2019ರಲ್ಲಿ ನಿವೃತ್ತಿ ಹೊಂದಿದ್ದೇನೆ.ಅಲ್ಲದೆ, ಅಂದಿನಿಂದ ಸಾಕಷ್ಟು ಸಮಯ ಕಳೆದು ಹೋಗಿದೆ. ಅಲ್ಲಿಂದ ನಾನು ನನ್ನ ಕ್ರೆಕೆಟ್​ ಅನ್ನು ಆನಂದಿಸಲು ಆಡುತ್ತಿದ್ದೇನೆ''. ಇದನ್ನು ಮುಂದುವರೆಸುವುದಾಗಿ ಧೋನಿ ಹೇಳಿದ್ದಾರೆ.

ನಾನು ಕೆಲ ವರ್ಷಗಳಿಂದೆ ಅಂದರೆ ಬಾಲ್ಯದಲ್ಲಿ ದಿನಾಲೂ ಸಂಜೆ ನಾಲ್ಕು ಗಂಟೆಗೆ ಮೈದಾನಕ್ಕೋಗಿ ಅದು ನನ್ನ ಕ್ರಿಕೆಟ್​ ಆನಂದಕ್ಕೊಸ್ಕರ. ಹೀಗಾಗಿ, ನಾನು ಈಗಾಗಲೂ ಬಾಲ್ಯದಲ್ಲಿ ಆನಂದಿಸಿದಂತೆಯೇ ಆನಂದಿಸಬೇಕು ಎಂದಿದ್ದಾರೆ.

ಮೊದಲು ದೇಶ

ಒಬ್ಬ ಭಾರತೀಯ ಆಟಗಾರನಾಗಿ ದೇಶಕ್ಕಾಗಿ ತನ್ನ ಅತ್ಯುತ್ತಮ ಪ್ರದರ್ಶನ ನೀಡುವುದು ನನ್ನ ಗಮನವಾಗಿತ್ತು ಮತ್ತು ಉಳಿದೆಲ್ಲವೂ ನಂತರದ ಸ್ಥಾನದಲ್ಲಿತ್ತು ಎಂದು ಧೋನಿ ಹೇಳಿದರು.

ಒಬ್ಬ ಕ್ರಿಕೆಟಿಗನಾಗಿ, ನಾನು ಯಾವಾಗಲೂ ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಪ್ರದರ್ಶನ ನೀಡಲು ಬಯಸುತ್ತೇನೆ. ಎಲ್ಲರಿಗೂ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಗುವುದಿಲ್ಲ ಎಂದು ಈ ಮಾತನ್ನು ಈ ಹಿಂದೆಯೂ ಸಹ ನಾನು ಹೇಳಿದ್ದೇನೆ ಎಂದರು.

ನಾನು ಕ್ರಿಕೆಟಿಗರಾಗಿ ಹೇಳಬಯಸುವುದಾದರೆ, ನಾವು ದೊಡ್ಡ ವೇದಿಕೆಗೆ ಹೋದಾಗಲೆಲ್ಲಾ ಅಥವಾ ಪ್ರವಾಸ ಮಾಡುವಾಗಲೆಲ್ಲಾ, ದೇಶಕ್ಕಾಗಿ ಪ್ರಶಸ್ತಿಗಳನ್ನು ಗೆಲ್ಲುವ ಅವಕಾಶವಿತ್ತು ಮತ್ತು ಆದ್ದರಿಂದ ನನಗೆ ಯಾವಾಗಲೂ ಮೊದಲು ಬರುವುದು ದೇಶ. ಇದನ್ನೇ ನೀವು ಆಳವಡಿಕೊಳ್ಳಬೇಕು ಎಂದು ಧೋನಿ ಯುವ ಆಟಗಾರರಿಗೆ ಸಲಹೆ ನೀಡಿದರು.

2011 (ಏಕದಿನ) ಮತ್ತು 2007 (ಟಿ 20) ರಲ್ಲಿ ಭಾರತವನ್ನು ವಿಶ್ವಕಪ್ ಗೆಲುವಿನತ್ತ ಮುನ್ನಡೆಸಿದ 43 ವರ್ಷದ ಧೋನಿ, 2013 ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲುವಿನೊಂದಿಗೆ, ಕೊನೆಯ ಬಾರಿಗೆ ದೇಶಕ್ಕಾಗಿ ಅಂತರರಾಷ್ಟ್ರೀಯ ಪಂದ್ಯವಾಡಿದ್ದು 2019ರ ಜೂನ್‌ನಲ್ಲಿ. ಧೋನಿ ಆಗಸ್ಟ್ 2019ರಲ್ಲಿ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನಕ್ಕೆ ವಿರಾಮ ಹಾಕಿದರೂ, ಕಳೆದ ವರ್ಷ ಮೆಗಾ ಹರಾಜಿನ ಮೊದಲು ಅವರನ್ನು ಉಳಿಸಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.(ಏಜೆನ್ಸೀಸ್​)