ಕ್ರೀಡೆ

ಪ್ರೊ ಕಬಡ್ಡಿ ಲೀಗ್​ನಲ್ಲಿ ಪುಣೇರಿ ಪಲ್ಟಾನ್​ಗೆ ಸತತ 4ನೇ ಜಯ; ಅಗ್ರಸ್ಥಾನ ಭದ್ರ

ಚೆನ್ನೈ: ಪಂಕಜ್​ ಮೋಹಿತೆ (11) ಮತ್ತು ಮೋಹಿತ್​ ಗೋಯತ್​ (9) ಭರ್ಜರಿ ರೈಡಿಂಗ್​ ಬಲದಿಂದ ಪುಣೇರಿ ಪಲ್ಟಾನ್​ ತಂಡ ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯಲ್ಲಿ ಸತತ 4ನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಚೆನ್ನೈ ಚರಣದಲ್ಲಿ ಮಂಗಳವಾರ ನಡೆದ ಏಕೈಕ ಪಂದ್ಯದಲ್ಲಿ ಪುಣೇರಿ ಪಲ್ಟಾನ್​ ತಂಡ ಪಟನಾ ಪೈರೇಟ್ಸ್​ ಎದುರು 46-28 ಅಂತರದಿಂದ ಗೆಲುವು ಸಾಧಿಸಿತು.

ಮೊದಲಾರ್ಧದಲ್ಲಿ ಪಟನಾವನ್ನು ಒಮ್ಮೆ ಆಲೌಟ್​ ಮಾಡಿ 22-15ರಿಂದ ಮುನ್ನಡೆ ಸಾಧಿಸಿದ ಪುಣೇರಿ ತಂಡ ದ್ವೀತಿಯಾರ್ಧದಲ್ಲಿ 2 ಬಾರಿ ಆಲೌಟ್​ ಮಾಡಿ ಇನ್ನಷ್ಟು ಪ್ರಾಬಲ್ಯ ಸಾಧಿಸಿತು. ಪಟನಾ ಪರ ಸಚಿನ್​ (8) ಹೋರಾಟ ವ್ಯರ್ಥಗೊಂಡಿತು.