ಬೆಂಗಳೂರು: ಮೊಬಿಲ್1 ಮತ್ತು ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್ (ಆರ್‌ಪಿಪಿಎಲ್) ಸಹಭಾಗಿತ್ವದಲ್ಲಿ ಮುಂಬರುವ ರೇಸಿಂಗ್ ಚಾಂಪಿಯನ್‌ಷಿಪ್‌ಗೆ ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿ ಎಫ್4 ಮತ್ತು ಇಂಡಿಯನ್ ರೇಸಿಂಗ್ ಲೀಗ್ (ಐಆರ್‌ಎಲ್) ಕಾರುಗಳ ರೋಡ್‌ಶೋ ನಡೆದಿದ್ದು, ಈ ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಬೆಂಗಳೂರಿನ ರಸ್ತೆಗಳಲ್ಲಿ ಅತ್ಯಾಕರ್ಷಕ ಪ್ರದರ್ಶನ ಮತ್ತು ಸೊಗಸಾದ ಚಾಲನಾ ಪ್ರದರ್ಶನಗಳನ್ನು ಪ್ರಸ್ತುತ ಪಡಿಸಿದ ಈ ಕಾರ್ಯಕ್ರಮವು ಆರ್‌ಪಿಪಿಎಲ್ ಮತ್ತು ಮೊಬಿಲ್1 ಸಹಭಾಗಿತ್ವದಲ್ಲಿ ನಡೆದಿದ್ದು, ಭಾರತದಲ್ಲಿ ಮೋಟಾರ್ ಸ್ಪೋರ್ಟ್ಸ್ ಸಂಸ್ಕೃತಿಯನ್ನು ಪೋಷಿಸುವ ಮತ್ತು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಮುಂಬರುವ ರೇಸಿಂಗ್ ಚಾಂಪಿಯನ್‌ಷಿಪ್ ಋತುವಿನ ಪ್ರದರ್ಶನಗಳ ಪೂರ್ವವೀಕ್ಷಣೆಯನ್ನು ಬೆಂಗಳೂರಿನ ಆಸಕ್ತರ ಮುಂದೆ ಪ್ರದರ್ಶಿಸಲಾಯಿತು. ಐಆರ್‌ಎಲ್ ಮತ್ತು ಫಾರ್ಮುಲಾ4 ಕಾರುಗಳನ್ನು ಚಾಲನೆ ಮಾಡುವ ಐಆರ್‌ಎಲ್-2023ರ ಇಬ್ಬರು ಚಾಂಪಿಯನ್‌ಗಳಲ್ಲಿ ಒಬ್ಬರಾದ ಸೋಹಿಲ್ ಷಾ ಮತ್ತು ಫಾರ್ಮುಲಾ4ರ ವೈಸ್ ಚಾಂಪಿಯನ್ ರಿಶನ್ ರಾಜೀವ್ ಎಂಬಿಬ್ಬರು ಪ್ರತಿಭಾನ್ವಿತ ಉದಯೋನ್ಮುಖ ಮೋಟಾರ್ ಸ್ಪೋರ್ಟ್ಸ್ ಪ್ರತಿಭೆಗಳು ಅದ್ಭುತವಾದ ಪ್ರದರ್ಶನ ನೀಡಿದರು. ಅವರ ಕಾರುಗಳು ಕೆಟಿಪಿಓ ಕನ್ವೆನ್ಷನ್ ಸೆಂಟರ್ ನಲ್ಲಿ ಜೋರು ಸದ್ದು ಮಾಡುತ್ತಿದ್ದಂತೆ ವಿವಿಧ ಹಿನ್ನೆಲೆಗಳ ಭಾರಿ ಸಂಖ್ಯೆಯ ಪ್ರೇಕ್ಷಕರು ಒಟ್ಟು ಸೇರಿದರು ಮತ್ತು ಶಕ್ತಿಯುತ ಎಂಜಿನ್ ಹಾಗೂ ರೋಮಾಂಚಕ ರೇಸಿಂಗ್ ಪ್ರದರ್ಶನವನ್ನು ವೀಕ್ಷಿಸಿದರು.
ಈ ರೋಡ್‌ಶೋ ಕಾರ್ಯಕ್ರಮವು ವೃತ್ತಿಪರ ಮೋಟಾರ್ ಸ್ಪೋರ್ಟ್ಸ್ ಅಭಿರುಚಿಯನ್ನು ಉಂಟು ಮಾಡಿ ಸ್ಥಳೀಯರನ್ನು ಸಂತೋಷಪಡಿಸುವುದರ ಜೊತೆಗೆ ಮೊಬಿಲ್1ನ 50 ವರ್ಷಗಳ ನಾವೀನ್ಯತೆ ಮತ್ತು ಸಿಂಥೆಟಿಕ್ ಮೋಟಾರ್ ಆಯಿಲ್ ಕ್ಷೇತ್ರದಲ್ಲಿನ ಸಂಸ್ಥೆಯ ನಾಯಕತ್ವದ ಗೆಲುವನ್ನು ಸಂಭ್ರಮಿಸಿತು. ಭಾರತದ ಅಟೋಮೋಟಿವ್ ಮತ್ತು ಕೈಗಾರಿಕಾ ಕ್ಷೇತ್ರದ ಪ್ರಗತಿಗೆ ಕಂಪನಿಯ ನಿರಂತರ ಕೊಡುಗೆಗಳನ್ನು ಹೈಲೈಟ್ ಮಾಡಲಾಯಿತು. ಬೆಂಗಳೂರಿನಲ್ಲಿ ನಡೆದ ರೋಡ್‌ಶೋದಲ್ಲಿ ಮೊಬಿಲ್1 ಲಾಂಛನಕ್ಕೆ ಅಥವಾ ಕಂಪನಿಗೆ 50 ವರ್ಷ ಸಂದ ಹಿನ್ನೆಲೆಯಲ್ಲಿ ಗೋಲ್ಡನ್ ಜ್ಯುಬಿಲಿಯನ್ನು ಕೂಡ ಆಚರಿಸಲಾಯಿತು. ಬ್ರ್ಯಾಂಡ್ ತನ್ನ ಪರಂಪರೆಯನ್ನು ಸಂಭ್ರಮಿಸುವ ಸಲುವಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಲೈವರಿಗಳು ಮತ್ತು ಮೊಬಿಲ್1ನ ವ್ಯಾಪಕವಾದ ರೇಸಿಂಗ್ ಇತಿಹಾಸದ ಮುಖ್ಯಾಂಶಗಳನ್ನು ಪ್ರದರ್ಶಿಸಲು ಯೋಜನೆ ಹಾಕಿಕೊಂಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಎಕ್ಸಾನ್ ಮೊಬಿಲ್ ಲೂಬ್ರಿಕೆಂಟ್ಸ್ ಪ್ರೈವೆಟ್ ಲಿಮಿಟೆಡ್ನ ಸಿಇಓ ವಿಪಿನ್ ರಾಣಾ, ಕಳೆದ 50 ವರ್ಷಗಳ ಮೊಬಿಲ್1 ಬ್ರ್ಯಾಂಡ್‌ನ ಪ್ರಯಾಣವು ಪ್ರಪಂಚದಾದ್ಯಂತ ಇರುವ ಪ್ರಮುಖ ವಾಹನ ತಯಾರಕರು, ವೃತ್ತಿಪರ ರೇಸರ್‌ಗಳು ಮತ್ತು ಲಕ್ಷಾಂತರ ಚಾಲಕರ ವಿಶ್ವಾಸಾರ್ಹ ಆಯ್ಕೆಯಾಗಲು ಮತ್ತು ಗಡಿಯನ್ನು ವಿಸ್ತರಿಸಿ ಮೀರಿ ಬೆಳೆಯುವ ಎಕ್ಸಾನ್ ಮೊಬಿಲ್1ನ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಮೊಬಿಲ್1-ಆರ್‌ಪಿಪಿಎಲ್ ರೋಡ್ ಶೋ ಕೇವಲ ಒಂದು ಕಾರ್ಯಕ್ರಮವಲ್ಲ, ಅದು ಮೋಟಾರ್ ಸ್ಪೋರ್ಟ್ಸ್ ಹುಮ್ಮಸ್ಸಿನ ಆಚರಣೆಯಾಗಿದೆ. ನಗರದ ಬೀದಿಗಳಲ್ಲಿ ಈ ಪ್ರದರ್ಶನವನ್ನು ಆಯೋಜಿಸುವುದರ ಮೂಲಕ, ರೇಸಿಂಗ್ ಪ್ರಪಂಚದ ಅನುಭವವನ್ನು ನಾವು ಅಭಿಮಾನಿಗಳಿಗೆ ಒದಗಿಸುವ ಗುರಿಯನ್ನು ಹೊಂದಿದ್ದೆವು. ಆರ್‌ಪಿಪಿಎಲ್ ಜೊತೆಗಿನ ನಮ್ಮ ಪಾಲುದಾರಿಕೆಯು ಭಾರತದಲ್ಲಿ ಮೋಟಾರ್ ಸ್ಪೋರ್ಟ್ಸ್ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಮತ್ತು ಮೋಟಾರ್ ಸ್ಪೋರ್ಟ್ಸ್ ಕುರಿತಾಗಿ ರಾಷ್ಟ್ರವ್ಯಾಪಿಯಾಗಿ ಬೆಳೆಯುತ್ತಿರುವ ಆಸಕ್ತಿ ಮತ್ತು ಬೆಂಬಲಕ್ಕೆ ಉತ್ತಮ ಕೊಡುಗೆ ನೀಡಲಿದೆ ಎಂದು ಹೇಳಿದರು.
ಬೆಂಗಳೂರು ಪ್ರದರ್ಶನದ ಯಶಸ್ಸಿನಿಂದ ನಾವು ಸಂತೋಷ ಹೊಂದಿದ್ದೇವೆ. ಇದು ನಮ್ಮ ರಾಷ್ಟ್ರವ್ಯಾಪಿ ಪ್ರದರ್ಶನ ಸರಣಿಗೆ ಅದ್ಭುತವಾದ ಆರಂಭ ಒದಗಿಸಿದೆ. ಈ ಕಾರ್ಯಕ್ರಮವು ಮೋಟಾರ್ ಸ್ಪೋರ್ಟ್ಸ್ ನ ಹುಮ್ಮಸ್ಸು ಮತ್ತು ಉತ್ಸಾಹವನ್ನು ಪ್ರೇಕ್ಷಕರಿಗೆ ದಾಟಿಸಿತು ಮತ್ತು ಚಾಂಪಿಯನ್‌ಶಿಪ್ ಸೀಸನ್ ಕಡೆಗೆ ನಿರೀಕ್ಷೆ ಹುಟ್ಟುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಭಾರತದ ಮೋಟಾರ್ ಸ್ಪೋರ್ಟ್ಸ್ ಉತ್ಸಾಹವನ್ನು ಹೆಚ್ಚಿಸಲು ನಾವು ಜೊತೆಯಾಗಿ ಕೆಲಸ ಮಾಡಲಿದ್ದೇವೆ ಮತ್ತು ಇದನ್ನು ಸಾಧ್ಯವಾಗಿಸುವಲ್ಲಿ ಮೊಬಿಲ್1 ಪ್ರಮುಖ ಪಾತ್ರ ವಹಿಸಿದೆ. ನಾವು ಮುಂಬರುವ ರೋಡ್‌ಶೋಗಳಿಗೆ ಸಜ್ಜಾಗುತ್ತಿರುವುದರ ಜೊತೆಗೆ ನಾವು ಈ ಪ್ರಯಾಣವನ್ನು ಮುಂದುವರಿಸಲು ಉತ್ಸುಕರಾಗಿದ್ದೇವೆ. ಇದು ಹೊಸ ಪೀಳಿಗೆಯ ಮೋಟಾರ್ ಸ್ಪೋರ್ಟ್ಸ್ ಅಭಿಮಾನಿಗಳು ಮತ್ತು ದೇಶಾದ್ಯಂತ ಇರುವ ಭಾಗವಹಿಸುವವರಿಗೆ ಸ್ಫೂರ್ತಿ ನೀಡಲಿದೆ” ಎಂದು ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್ ನ ಅಧ್ಯಕ್ಷ ಅಖಿಲೇಶ್ ರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರು ರೋಡ್‌ಶೋನ ಅದ್ಭುತ ಯಶಸ್ಸಿನ ನಂತರ, ಮೊಬಿಲ್1 ಮತ್ತು ಆರ್‌ಪಿಪಿಎಲ್ ಈ ರೋಡ್ ಶೋ ಸರಣಿಯನ್ನು ವಿಸ್ತರಿಸಲು ಸಿದ್ಧವಾಗಿದ್ದು, ಮುಂಬರುವ ತಿಂಗಳುಗಳಲ್ಲಿ ಮುಂಬೈ, ಚೆನ್ನೈ ಮತ್ತು ಭಾರತದ ಇತರ ಭಾಗಗಳಲ್ಲಿ ಮೋಟಾರ್ ಸ್ಪೋರ್ಟ್ ಪ್ರದರ್ಶನ ನಡೆಯಲಿದೆ. ಈ ಉಪಕ್ರಮವು ಮೊಬಿಲ್1 ಮತ್ತು ಆರ್‌ಪಿಪಿಎಲ್ ಸಂಸ್ಥೆಗಳ ಭಾರತದ ಮೋಟಾರ್ ಸ್ಪೋರ್ಟ್ಸ್ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವ ಮತ್ತು ಮುಂದಿನ ಪೀಳಿಗೆಯ ಮೋಟಾರ್ ಸ್ಪೋರ್ಟ್ಸ್ ಉತ್ಸಾಹಿಗಳಿಗೆ ಮನರಂಜನೆ ಮತ್ತು ಸ್ಫೂರ್ತಿ ನೀಡುವ ವೇದಿಕೆಗಳನ್ನು ರಚಿಸುವ ಬದ್ಧತೆಯನ್ನು ಸಾರುತ್ತದೆ.