ಕ್ರೀಡೆ

ಸಿಡ್ನಿ ಟೆಸ್ಟ್​ನಲ್ಲಿ ರೋ'ಹಿತ' ತ್ಯಾಗಕ್ಕೆ ಮಾಜಿ ಕ್ರಿಕೆಟಿಗರಿಂದ ಮಿಶ್ರ ಪ್ರತಿಕ್ರಿಯೆ

ಸಿಡ್ನಿ: ರೋಹಿತ್​ ಶರ್ಮ ಸಿಡ್ನಿ ಟೆಸ್ಟ್​ನಿಂದ ಹೊರಗುಳಿಯುವುದರೊಂದಿಗೆ ಭಾರತ ತಂಡದ ನಾಯಕನೊಬ್ಬ ಫಿಟ್​ ಇದ್ದರೂ, ಫಾರ್ಮ್​ ಕೊರತೆಯಿಂದಾಗಿ ಆಡುವ 11ರ ಬಳಗದಿಂದ ಹೊರಬಿದ್ದ ಮೊದಲ ದೃಷ್ಟಾಂತ ದಾಖಲಾಯಿತು. ಈ ಹಿಂದೆ ಅಜರುದ್ದೀನ್​, ಸೌರವ್​ ಗಂಗೂಲಿ ಅವರಂಥ ನಾಯಕರು ಎಷ್ಟೇ ರನ್​ಬರ ಎದುರಿಸಿದ್ದರೂ, ಸರಣಿಯ ನಡುವೆ ತಂಡದಿಂದ ಹೊರಬಿದ್ದಿರಲಿಲ್ಲ. ಹೀಗಾಗಿ ರೋಹಿತ್​ ತ್ಯಾಗಕ್ಕೆ ಮಾಜಿ ಕ್ರಿಕೆಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರೋಹಿತ್​ ಹೊರಗುಳಿದಿದ್ದನ್ನು ಸಂಜಯ್​ ಮಂಜ್ರೇಕರ್​ ಹೊಗಳಿದ್ದರೆ, ರೋಹಿತ್​ಗೆ ಸೂಕ್ತ ಗೌರವ ನೀಡಬೇಕಿತ್ತು. ಇದು ಕೆಟ್ಟ ಸಂದೇಶ ರವಾನಿಸುತ್ತಿದೆ ಎಂದು ನವಜೋತ್​ ಸಿಂಗ್​ ಸಿಧು ಟೀಕಿಸಿದ್ದಾರೆ.

ಇನ್ನು ಭಾರತ ಡಬ್ಲ್ಯುಟಿಸಿ ಫೈನಲ್​ಗೇರದಿದ್ದರೆ ಮೆಲ್ಬೋರ್ನ್​ ಪಂದ್ಯವೇ ರೋಹಿತ್​ರ ಕೊನೇ ಟೆಸ್ಟ್​ ಆಗುವುದರಲ್ಲಿ ಅನುಮಾನವಿಲ್ಲ ಎಂದು ಸುನೀಲ್​ ಗಾವಸ್ಕರ್​ ಮತ್ತು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.