ಚೆನ್ನೈ: ಕೋವಿಡ್-19ರಿಂದ ಚೇತರಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸೆ ಭಾನುವಾರ ದೋಹ ಮಾರ್ಗವಾಗಿ ತವರು ಆಸ್ಟ್ರೆಲಿಯಾದತ್ತ ಪ್ರಯಾಣ ಬೆಳೆಸಿದರು. ಆಸ್ಟ್ರೆಲಿಯಾದ ಮಾಜಿ ಬ್ಯಾಟ್ಸ್ಮನ್ಗೆ ಶುಕ್ರವಾರ ನಡೆಸಿದ ಟೆಸ್ಟ್ನಲ್ಲಿ ವರದಿ ನೆಗೆಟಿವ್ ಬಂದಿತ್ತು. ಆಸೀಸ್ನ ಆಟಗಾರರು, ಸಹಾಯಕ ಸಿಬ್ಬಂದಿ ಉಳಿದುಕೊಂಡಿರುವ ಮಾಲ್ಡೀವ್ಸ್ಗೆ ಪ್ರಯಾಣ ಬೆಳೆಸದೆ ದೋಹ ಮಾರ್ಗವಾಗಿ ಆಸೀಸ್ನತ್ತ ಪ್ರಯಾಣಿಸಿದರು. ಭಾನುವಾರ ಮುಂಜಾನೆಯ ವಿಮಾನದಲ್ಲಿ ಪ್ರಯಾಣ ಮಾಡಿದರು ಎಂದು ಸಿಎಸ್ಕೆ ಸಿಇಒ ಕೆಎಸ್ ವಿಶ್ವನಾಥನ್ ತಿಳಿಸಿದ್ದಾರೆ.
ಕೋವಿಡ್-19 ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ 14ನೇ ಐಪಿಎಲ್ ಟೂನಿರ್ಯೂ ಅನಿದಿರ್ಷ್ಟಾವಧಿವರೆಗೆ ಮುಂದೂಡಿಕೆಯಾದ ಬೆನ್ನಲ್ಲೇ ಹಸ್ಸೆಗೆ ಪಾಸಿಟಿವ್ ಅಂಶಕಾಣಿಸಿಕೊಂಡಿತ್ತು. ಹಸ್ಸೆ ಸೋಮವಾರ ಬೆಳಗಿನ ವೇಳೆಗೆ ತವರು ಆಸ್ಟ್ರೆಲಿಯಾ ತಲುಪುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹಸ್ಸೆ ಜತೆಗೆ ಸಿಎಸ್ಕೆ ತಂಡದ ಬೌಲಿಂಗ್ ಕೋಚ್ ಎಲ್.ಬಾಲಾಜಿಗೂ ಪಾಸಿಟಿವ್ ಕಾಣಿಸಿಕೊಂಡಿತ್ತು. ಬಳಿಕ ಇಬ್ಬರನ್ನು ದೆಹಲಿಯಿಂದ ಚೆನ್ನೈಗೆ ಏರ್ ಅಂಬುಲೆನ್ಸ್ ಮೂಲಕ ಕರೆದೊಯ್ಯಲಾಗಿತ್ತು.
14ನೇ ಐಪಿಎಲ್ ಟೂನಿರ್ಯೂ ಕೋವಿಡ್ನಿಂದ ಮುಂದೂಡಿಕೆಯಾದ ಬಳಿಕ ಮಾಲ್ಡೀವ್ಸ್ನಲ್ಲಿ ಕಳೆದ 12 ದಿನಗಳಿಂದ ಮಾಲ್ಡೀವ್ಸ್ನಲ್ಲಿ ಕ್ವಾರಂಟೈನ್ನಲ್ಲಿದ್ದ 38 ಸದಸ್ಯರ ಆಸ್ಟ್ರೆಲಿಯಾ ತಂಡ ಇಂದು ತವರಿಗೆ ತೆರಳುವ ಸಾಧ್ಯತೆಗಳಿವೆ. ಮಾಲ್ಡೀವ್ಸ್ನಲ್ಲಿ ಸರಣಿ ಕೋವಿಡ್-19 ಟೆಸ್ಟ್ ಎದುರಿಸಬೇಕಾದ ಹಿನ್ನೆಲೆಯಲ್ಲಿ ಹಸ್ಸೆ ನೇರವಾಗಿ ದೋಹಾ ಮಾರ್ಗವಾಗಿ ಆಸ್ಟ್ರೆಲಿಯಾಗೆ ಪ್ರಯಾಣ ಬೆಳೆಸುವಂತೆ ಸಿಎಸ್ಕೆ ಆಡಳಿತ ಮಂಡಳಿ ವ್ಯವಸ್ಥೆ ಮಾಡಿತ್ತು. ವೇಗಿ ಪ್ಯಾಟ್ ಕಮ್ಮಿನ್ಸ್, ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ವೀಕ್ಷಕ ವಿವರಣೆಗಾರ ಮೈಕೆಲ್ ಸ್ಲೇಟರ್ ಒಳಗೊಂಡ ಆಸ್ಟ್ರೆಲಿಯಾ ತಂಡ ಸಿಡ್ನಿಯತ್ತ ಪ್ರಯಾಣ ಬೆಳೆಸಲಿದೆ. ಬಿಸಿಸಿಐ ವ್ಯವಸ್ಥೆ ಮಾಡಿರುವ ವಿಶೇಷ ಚಾರ್ಟರ್ ವಿಮಾನದ ಮೂಲಕ ಪರ್ತ್ ಮಾರ್ಗವಾಗಿ ಸಿಡ್ನಿ ತಲುಪಲಿದ್ದಾರೆ. ತವರು ತಲುಪಿದ ಬಳಿಕ ಆಟಗಾರರು ಹೋಟೆಲ್ನಲ್ಲಿ ಕ್ವಾರಂಟೈನ್ಗೆ ಒಳಗಾಗಲಿದ್ದಾರೆ.