ಕ್ರೀಡೆ

ಆ ಕೌಶಲ್ಯವನ್ನು ಕರಗತ ಮಾಡಿಕೊಂಡಿದ್ದಾನೆ; ಸೂರ್ಯಕುಮಾರ್​ ಕುರಿತು ಮಾಜಿ ಕೋಚ್​ ಹೇಳಿಕೆ ವೈರಲ್

ನವದೆಹಲಿ: ಜುಲೈ 27ರಂದು ಶ್ರೀಲಂಕಾ ವಿರುದ್ಧ ಆರಂಭವಾದ ಟಿ20 ಸರಣಿಯ ಮೂಲಕ ಚುಟುಕು ಮಾದರಿಯ ನಾಯಕನಾಗಿ ಅಧಿಕಾರ ವಹಿಸಿಕೊಂಡ ಸೂರ್ಯಕುಮಾರ್​ ಯಾದವ್​ ಕ್ಯಾಪ್ಟನ್​ ಆಗಿ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಈ ಹಿಂದೆ ನಾಯಕನಾಗಿ ಸೂರ್ಯಕುಮಾರ್​ ನೇಮಕ ಮಾಡಿದ್ದನ್ನು ಪ್ರಶ್ನಿಸಿದ್ದ ಅನೇಕರು ಇದೀಗ ಬಿಸಿಸಿಐ ನಡೆಯನ್ನು ಹಾಡಿಹೊಗಳುತ್ತಿದ್ದು, ಈ ಕುರಿತು ಟೀಮ್​ ಇಂಡಿಯಾ ಮಾಜಿ ಕೋಚ್​ ಪರಾಸ್​ ಮಾಂಬ್ರೆ ಮಾತನಾಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಮಾಂಬ್ರೆ, ಮೊದಲಿಗೆ ನೀವು ನಾಯಕನನ್ನು ಆಯ್ಕೆ ಮಾಡುವಾಗ ಆತ ಎಲ್ಲಾ ಸ್ವರೂಪದಲ್ಲೂ ತಂಡದ ಪರವಾಗಿ ಆಡಬೇಕು ಎಂದು ಭಾವಿಸುತ್ತೀರಿ. ಆದರೆ, ನಾವು ಮತತ್ಉ ಆಯ್ಕೆಗಾರರು ಟಿ20 ಕ್ರಿಕೆಟ್​ನಲ್ಲಿ ದೀರ್ಘ ಭವಿಷ್ಯವನ್ನು ಹೊಂದಿರುವ ವ್ಯಕ್ತಿಯ ಬಗ್ಗೆ ಯೋಚಿಸುತ್ತೇವೆ. ಇತ್ತೀಚಿನ ವರ್ಷಗಳಲ್ಲಿ ಸೂರ್ಯ ಹಾಗೂ ಕ್ಲಾಸೆನ್​ನ ಫಾರ್ಮ್​ಅನ್ನು ನೋಡಿದರೆ ಇವರಿಬ್ಬರು ನಾಯಕತ್ವಕ್ಕೆ ಸೂಕ್ತ ಎನಿಸುತ್ತದೆ.

ನಾನು ತಂಡದ ಬೌಲಿಂಗ್​ ಆಗಿದ್ದಾಗ ಆತ ಸಹ ಆಟಗಾರರ ಜೊತೆ ಸಂವಹನ ನಡೆಸುವುದನ್ನು ನಾನು ಅನೇಕ ಬಾರಿ ನೋಡಿದ್ದೇನೆ. ಒಂದು ಕಡೆ ನಾವು ರೋಹಿತ್​ ಹಾಗೂ ವಿರಾಟ್​ಅನ್ನು ಹೊಂದಿದ್ದರೆ. ಮತ್ತೊಂದೆಡೆ ಸೂರ್ಯನನ್ನು ಹೊಂದಿದ್ದೇವೆ. ಆತ ನಾಯಕತ್ವದಲ್ಲಿ ಮತ್ತಷ್ಟು ಅನುಭವಿಯಾದರೆ ಯುವಕರಿಗೆ ಮತ್ತಷ್ಟು ಹತ್ತಿರವಾಗಲಿದ್ದಾರೆ.

ಆತನನ್ನು ಹುಡುಗನಿದಾಗಿನಿಂದಲೂ ನೋಡಿದ್ದೇನೆ. ಆತ ಬೇರೆಯವರೊಂದಿಗೆ ಸಂವಹನ ನಡೆಸುವ ರೀತಿ ಮತ್ತು ತಂಡದವರೊಂದಿಗೆ ಬೆರೆಯುವ ರೀತಿ ಎಲ್ಲರಿಗೂ ಇಷ್ಟವಾಗುತ್ತದೆ. ನನ್ನ ಪ್ರಕಾರ ಆತ ಬುದ್ಧಿವಂತ ಕ್ರಿಕೆಟಿಗ ಆ ಕೌಶಲ್ಯವನ್ನು ಕರಗತ ಮಾಡಿಕೊಂಡಿದ್ದಾನೆ ಎಂದು ಟೀಮ್​ ಇಂಡಿಯ ಆಮಾಜಿ ಬೌಲಿಂಗ್​ ಕೋಚ್​ ಪರಾಸ್​ ಮಾಂಬ್ರೆ ಹೇಳಿದ್ದಾರೆ.