Lionel Messi: 2026ರ ಫಿಫಾ ವಿಶ್ವಕಪ್ನ ದಕ್ಷಿಣ ಅಮೆರಿಕಾದ ಅರ್ಹತಾ ಪಂದ್ಯಗಳ ಅಂತಿಮ ಸುತ್ತಿನಲ್ಲಿ ವೆನೆಜುವೆಲಾ ವಿರುದ್ಧ ಅರ್ಜೆಂಟೀನಾ 3-0 ಅಂತರದ ಜಯ ಸಾಧಿಸಿದೆ. ನಂತರ ಮಾತನಾಡಿದ ಲಿಯೋನೆಲ್ ಮೆಸ್ಸಿ 2026 ರ ವಿಶ್ವಕಪ್‌ನಲ್ಲಿ ಭಾಗವಹಿಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಅರ್ಜೆಂಟೀನಾದ ಆರಂಭಿಕ ಅರ್ಹತೆಯ ಹೊರತಾಗಿಯೂ, ಮೆಸ್ಸಿಯು ಈ ವರ್ಷದ ಆರಂಭದಿಂದಲೂ ಗಾಯಗಳಿಂದ ಬಳಲುತ್ತಿದ್ದ ಮತ್ತು MLS ತಂಡ ಇಂಟರ್ ಮಿಯಾಮಿಯಲ್ಲಿ ಹಲವಾರು ಪಂದ್ಯಗಳನ್ನು ಕಳೆದುಕೊಂಡಿದ್ದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮೆಸ್ಸಿ, ಹಿಂದೆ, ನಾನು ಹೇಳಿದ್ದೆ, ತಾರ್ಕಿಕವಾಗಿ, ನಾನು 39 ನೇ ವಯಸ್ಸಿನಲ್ಲಿ ವಿಶ್ವಕಪ್‌ನಲ್ಲಿ ಆಡುವುದು ಅನುಮಾನ. ವಿಶ್ವಕಪ್ಗೆ ಇನ್ನು 9 ತಿಂಗಳು ಭಾಕಿ ಇದೆ ಎಂದು ಮಾನ್ಯುಮೆಂಟಲ್ ಕ್ರೀಡಾಂಗಣದಲ್ಲಿ ತಿಳಿಸಿದರು.
ಇದನ್ನೂ ಓದಿ: ಯುಕ್ರೇನ್ ವಿರುದ್ಧ ಯುದ್ಧ ಮುಂದುವರೆಸದಂತೆ ರಷ್ಯಾ ಮೇಲೆ ಹೊಸ ನಿರ್ಬಂಧ ಹೇರಲು ಅಮೆರಿಕ, ಇಯು ಒಕ್ಕೂಟ ಸಭೆ| Russia
ಅಲ್ಲದೆ, ನನಗೆ ಆಟವಾಡುವುದು ತುಂಬಾ ಇಷ್ಟ. ಆಟ ಎಂದಿಗೂ ಮುಗಿಯಬಾರದು ಅಂತ ನಾನು ಬಯಸುವುದಿಲ್ಲ. ಆದರೆ, ಆ ನಿವೃತ್ತಿ ಕ್ಷಣ ಹತ್ತಿರ ಬರುತ್ತಿದೆ. ಅದು ಯಾವಾಗ ಆಗಬೇಕೋ ಆಗೇ ಆಗುತ್ತದೆ ಅಂತ ನನಗೆ ಗೊತ್ತು ಎಂದು ಮೆಸ್ಸಿ ಹೇಳಿದ್ದಾರೆ.
ಮಂಗಳವಾರ ಗುವಾಕ್ವಿಲ್‌ನಲ್ಲಿ ಈಕ್ವೆಡಾರ್ ವಿರುದ್ಧದ ಅಂತಿಮ ಅರ್ಹತಾ ಪಂದ್ಯಕ್ಕೆ ಮೆಸ್ಸಿ ವಿಶ್ರಾಂತಿ ಪಡೆಯಬೇಕು ಮತ್ತು ರಾಷ್ಟ್ರೀಯ ತಂಡದೊಂದಿಗೆ ಪ್ರಯಾಣಿಸಬಾರದು ಎಂದು ಅರ್ಜೆಂಟೀನಾ ಮುಖ್ಯ ಕೋಚ್ ಲಿಯೋನೆಲ್ ಸ್ಕಾಲೋನಿ ನಿರ್ಧರಿಸಿದ್ದಾರೆ. (ಏಜೆನ್ಸೀಸ್)