ಕ್ರೀಡೆ

ನಾಲ್ಕನೇ ಟೆಸ್ಟ್​ಗೆ ಆಕಾಶ್​ ದೀಪ್​ ಬಿಟ್ಟು ಈತನನ್ನು ಆಡಿಸಿದರೆ ಖಂಡಿತವಾಗಿ ಪಂದ್ಯ ಗೆಲ್ಲಬಹುದಂತೆ! Akash Deep

Akash Deep : ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಭಾಗವಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಜುಲೈ 23 ರಿಂದ ಆರಂಭವಾಗಲಿದೆ. ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಎರಡೂ ತಂಡಗಳು ಗೆಲುವು ಸಾಧಿಸುವ ನಿರೀಕ್ಷೆಯನ್ನು ಇಟ್ಟುಕೊಂಡಿವೆ. ಭಾರತ ಈ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲಗೊಳಿಸುವ ಆಶಯವನ್ನು ಹೊಂದಿದ್ದರೆ, ಇಂಗ್ಲೆಂಡ್ ಲಾರ್ಡ್ಸ್ ಮೈದಾನದ ಫಲಿತಾಂಶವನ್ನು ಪುನರಾವರ್ತಿಸಲು ಉತ್ಸುಕವಾಗಿದೆ.

ನಾಲ್ಕನೇ ಟೆಸ್ಟ್​ ಪಂದ್ಯಕ್ಕೂ ಮುನ್ನ, ಇಂಗ್ಲೆಂಡ್‌ನ ಮಾಜಿ ನಾಯಕ ಮೈಕ್​​ ಅಥರ್ಟನ್​ ಭಾರತೀಯ ತಂಡದ ನಿರ್ವಹಣೆಗೆ ಪ್ರಮುಖ ಸಲಹೆವೊಂದನ್ನು ನೀಡಿದ್ದಾರೆ. ಓಲ್ಡ್ ಟ್ರಾಫರ್ಡ್ ಪಿಚ್ ಸಮತಟ್ಟಾಗಿರುತ್ತದೆ ಮತ್ತು ಭಾರತವು ಮೂವರು ಸ್ಪಿನ್ನರ್‌ಗಳೊಂದಿಗೆ ಆಡಿದರೆ ಉತ್ತಮವಾಗಿರುತ್ತದೆ ಎಂದು ಅಥರ್ಟನ್ ಹೇಳಿದ್ದಾರೆ.

ಲಾರ್ಡ್ಸ್ ಟೆಸ್ಟ್‌ನಲ್ಲಿ ಭಾರತವು ಮೂವರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳೊಂದಿಗೆ ಆಡಿತು. ನಿತೀಶ್ ಕುಮಾರ್ ಒಬ್ಬ ಪೇಸ್ ಬೌಲಿಂಗ್ ಆಲ್‌ರೌಂಡರ್. ಭಾರತವು ಮ್ಯಾಂಚೆಸ್ಟರ್‌ನಲ್ಲಿ ಮೂವರು ಸ್ಪಿನ್ನರ್‌ಗಳೊಂದಿಗೆ ಆಡಲು ನಿರ್ಧರಿಸಿದರೆ, ವೇಗಿ ಆಕಾಶ್‌ದೀಪ್ ಅವರನ್ನು ಕೈಬಿಡುವ ಸಾಧ್ಯತೆ ಇದೆ ಎಂದರು.

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಪಿಚ್ ಸಮತಟ್ಟಾಗಿರುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಗಳಲ್ಲಿ ಮಣಿಕಟ್ಟಿನ ಸ್ಪಿನ್ನರ್‌ಗಳು ಸ್ಪಿನ್ ಮಾಡುತ್ತಾರೆ ಎಂದು ಎಲ್ಲರಿಗೂ ತಿಳಿದಿದೆ. ಆದ್ದರಿಂದ, ಟೀಮ್​ ಇಂಡಿಯಾ ಮೂವರ್​ ಸ್ಪಿನ್ನರ್​ಗಳಾದ ವಾಷಿಂಗ್ಟನ್ ಸುಂದರ್, ಜಡೇಜಾ ಮತ್ತು ಕುಲದೀಪ್ ಯಾದವ್ ಜೊತೆಗೆ ವೇಗಿಗಳಾದ ಜಸ್​ಪ್ರೀತ್​ ಬುಮ್ರಾ ಮತ್ತು ಮೊಹಮ್ಮದ್​ ಸಿರಾಜ್ ಜತೆ ಕಣಕ್ಕಿಳಿದರೆ ಒಳ್ಳೆಯದು ಎಂದಿದ್ದಾರೆ.

ಇದು ನನ್ನ ಅಭಿಪ್ರಾಯವಷ್ಟೇ ಆದರೆ, ಮ್ಯಾಂಚೆಸ್ಟರ್‌ನ ಹವಾಮಾನ ಪರಿಸ್ಥಿತಿಗಳ ಬಗ್ಗೆ ನಮಗೆ ಯಾವುದೇ ಕಲ್ಪನೆ ಇಲ್ಲ. ಹವಾಮಾನ ತಂಪಾಗಿ ಮಳೆ ಬಂದರೆ, ಪಿಚ್ ವೇಗದ ಬೌಲರ್‌ಗಳಿಗೆ ಸೂಕ್ತವಾಗಿದೆ. ಆದರೆ, ಭಾರತೀಯ ಆಡಳಿತ ಮಂಡಳಿಯು ಖಂಡಿತವಾಗಿಯೂ ಮೂವರು ಸ್ಪಿನ್ನರ್‌ಗಳೊಂದಿಗೆ ಆಡುವ ಬಗ್ಗೆ ಯೋಚಿಸಬೇಕು ಎಂದು ಮೈಕ್​ ಅಥರ್ಟನ್ ಸ್ಕೈ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. (ಏಜೆನ್ಸೀಸ್​)​