ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ (team India) ಹಾಗೂ ಬಾಂಗ್ಲಾದೇಶ (Bangladesh) ವಿರುದ್ಧ ನಡೆದ ಟಿ20 ಸರಣಿಯ (T20 Series) ಅಂತಿಮ ಪಂದ್ಯದಲ್ಲಿ ಆತಿಥೇಯರು ಪ್ರವಾಸಿ ತಂಡದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದು, 3-0 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂ ಭಾರತದ (Team India) ಪರ ಶತಕ ಸಿಡಿಸುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂಜು ಸ್ಯಾಮ್ಸನ್ (Sanju Samson) ಟೀಕಾಕಾರರಿಗೆ ತಕ್ಕ ಪ್ರತ್ಯುತ್ತರ ನೀಡಿದ್ದು, ತಮ್ಮ ಜೀವನಶ್ರೇಷ್ಠ ಆಟದ ಕುರಿತು ಮಾತನಾಡಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ (Team India) ನಾಯಕ ಸೂರ್ಯಕುಮಾರ್ (Suryakumar Yadav) ತಂಡದಲ್ಲಿ ಒಂದು ಬದಲಾವಣೆ ಮಾಡಿರುವುದಾಗಿ ಹೇಳಿದರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡ ಆರಂಭಿಕ ಸಂಜು ಸ್ಯಾಮ್ಸನ್ (Sanju Samson) (111 ರನ್, 47 ಎಸೆತ, 11 ಬೌಂಡರಿ, 8 ಸಿಕ್ಸರ್) ಚೊಚ್ಚಲ ಶತಕ, ಸೂರ್ಯಕುಮಾರ್ ಯಾದವ್ (Suryakumar Yadav) (75 ರನ್, 35 ಎಸೆತ, 8ಬೌಂಡರಿ, 5 ಸಿಕ್ಸರ್) ಕ್ಯಾಪ್ಟನ್ ನಾಕ್, ಹಾರ್ದಿಕ್ ಪಾಂಡ್ಯ (Hardik Pandya) (47 ರನ್, 18 ಎಸೆತ, 4 ಬೌಂಡರಿ, 4 ಸಿಕ್ಸರ್) ಸ್ಫೋಟಕ ಆಟದ ಫಲವಾಗಿ ಭಾರತ ತಂಡವು 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 297 ರನ್ ಗಳಿಸಿತು.
ಕಠಿಣ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶವವನ್ನು 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 164 ರನ್ಗಳಿಸಲಷ್ಟೇ ಶಕ್ತವಾಯಿತು. 133 ರನ್ಗಳ ಅಂತರದಿಂದ ಪಂದ್ಯ ಗೆದ್ದು, ಮೂರು ಪಂದ್ಯಗಳ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧನೆ ಮಾಡಿತು. ಕೇವಲ 40 ಎಸೆತಗಳಲ್ಲಿ ಚೊಚ್ಚಲ ಶತಕ ಗಳಿಸಿದ ಸಂಜು (Sanju Samson), ಟಿ20 ಕ್ರಿಕೆಟ್‌ನಲ್ಲಿ ವೇಗದ ಶತಕ ಗಳಿಸಿದ ಭಾರತದ ಎರಡನೇ ಬ್ಯಾಟರ್ ಎನಿಸಿದರು. ತಮ್ಮ ಈ ಸ್ಫೋಟಕ ಆಟದ ಹಿಂದೆ ಯಾರಿದ್ಧಾರೆ ಎಂಬುದನ್ನು ಸಂಜು ಸ್ಯಾಮ್ಸನ್ (Sanju Samson) ರಿವೀಲ್ ಮಾಡಿದ್ದಾರೆ.
ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಎರಡು ಸಲ ಶೂನ್ಯಕ್ಕೆ ಔಟ್ ಆದ ಬಳಿಕ ಮುಂದಿನ ಸರಣಿಯಲ್ಲಿ ಅವಕಾಶ ಸಿಗುವ ಬಗ್ಗೆ ಸ್ವಲ್ಪ ಅನುಮಾನ ಮೂಡಿತ್ತು. ಆದರೆ ಕೋಚ್ (Coach) ಹಾಗೂ ನಾಯಕ (Captain) ನನಗೆ ಬೆಂಬಲ ನೀಡಿದರು. ಏನೇ ಆದರೂ ನಿನ್ನನ್ನು ಬೆಂಬಲಿಸುವುದಾಗಿ ಹೇಳಿದರು. ಕ್ರಿಕೆಟಿಗನಾಗಿ ಮಾನಸಿಕವಾಗಿ ಅನೇಕ ಏರಿಳಿತಗಳನ್ನು ಕಂಡಿದ್ದೇನೆ. ಒತ್ತಡ ಮತ್ತು ವೈಫಲ್ಯಗಳನ್ನು ನಿಭಾಯಿಸಲು ಕಲಿತಿದ್ದೇನೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಉತ್ತಮ ವಾತಾವರಣವಿದೆ. ಎಲ್ಲರೂ ನನ್ನನ್ನು ಬೆಂಬಲಿಸುತ್ತಾರೆ. ನನ್ನ ಪ್ರದರ್ಶನದಿಂದ ಅವರೆಲ್ಲರೂ ಸಂತಸಗೊಂಡಿದ್ದಾರೆ.
ಸರಣಿ (Series) ಆರಂಭಕ್ಕೂ ಮೊದಲೇ ತಾನು ಇನಿಂಗ್ಸ್ ಆರಂಭಿಸುವ ಬಗ್ಗೆ ಖಚಿತ ಮಾಹಿತಿ ನೀಡಿದ್ದರು. ಇದರಿಂದ ಸರಣಿಗೂ ಮುನ್ನ ಪೂರ್ವ ಸಿದ್ಧತೆ ನಡೆಸಲು ನೆರವಾಯಿತು. ನನ್ನ ವೃತ್ತಿ ಜೀವನದಲ್ಲಿ ಅನೇಕ ವೈಫಲ್ಯಗಳನ್ನು ಕಂಡಿದ್ದೇನೆ. ಓರ್ವ ಅನುಭವಿ ಕ್ರಿಕೆಟಿಗನಾಗಿ ನನ್ನ ಕ್ರಿಕೆಟ್ ಬಗ್ಗೆ ಹೆಚ್ಚು ಅರ್ಥ ಮಾಡಿಕೊಂಡಿದ್ದೇನೆ. ಆದ್ದರಿಂದ, ವೈಫಲ್ಯಗಳನ್ನು ನಿಭಾಯಿಸಿ ನನ್ನದೇ ರೀತಿಯಲ್ಲಿ ಯಶಸ್ಸು ಗಳಿಸಲು ಬಯಸುತ್ತೇನೆ. ನಾನು ನಾನಾಗಿರಲು ಬಯಸುತ್ತೇನೆ ಎಂದು ಸಂಜು ಸ್ಯಾಮ್ಸನ್ (Sanju Samson) ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಹೇಳಿದ್ದಾರೆ.