ಕ್ರೀಡೆ

ಪ್ಯಾರಿಸ್ ಒಲಿಂಪಿಕ್ಸ್ 2024: ಕಂಚಿಗೆ ಮುತ್ತಿಡುವ ಅವಕಾಶ ಕಳೆದುಕೊಂಡ ಲಕ್ಷ್ಯ ಸೇನ್!

ಪ್ಯಾರಿಸ್​: ಪ್ರಸಕ್ತ ಪ್ಯಾರಿಸ್​​ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಪದಕದಾಟದಲ್ಲಿ ಇಂದು ನಡೆದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಲಕ್ಷ್ಯ ಸೇನ್ ಕಂಚಿನ ಪದಕ ಗೆಲ್ಲುವಲ್ಲಿ ವಿಫಲರಾದರು.

ಕಂಚಿನ ಪದಕಕ್ಕಾಗಿ ಮಾಜಿ ಇಂಗ್ಲೆಂಡ್ ಚಾಂಪಿಯನ್ ಆದ ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ ಸೆಣಸಾಡಿದ ಲಕ್ಷ್ಯ ಸೇನ್, ಅಂತಿಮ ಹಣಾಹಣಿಯಲ್ಲಿ ಭರ್ಜರಿ ಪೈಪೋಟಿ ಕೊಡುವ ಮೂಲಕ ಸೋಲಿಗೆ ಶರಣಾದರು. ಈ ಮೂಲಕ ಪದಕದಾಟದಿಂದ ಹೊರಗುಳಿದ ಸೇನ್, ಇದೀಗ ಸ್ಪರ್ಧೆಯಿಂದ ನಿರ್ಗಮಿಸಿದ್ದಾರೆ. 2008ರ ನಂತರ ಇದೇ ಮೊದಲ ಬಾರಿಗೆ ಭಾರತ ಒಲಿಂಪಿಕ್ ಬ್ಯಾಡ್ಮಿಂಟನ್‌ನಲ್ಲಿ ಪದಕ ಗೆಲ್ಲಲು ವಿಫಲವಾಗಿದೆ,(ಏಜೆನ್ಸೀಸ್).