ಕ್ರೀಡೆ

ಸಚಿನ್ ದಾಖಲೆಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡ ಕೊಹ್ಲಿ!

ತಿರುವನಂತಪುರಂ: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್​​ಮನ್ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಶತಕ ಸಿಡಿಸುವ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 46ನೇ ಶತಕ ದಾಖಲಿಸಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ ತವರಿನ ಸರಣಿಯಲ್ಲಿ ಇದು ಕೊಹ್ಲಿ ಸಿಡಿಸಿದ ಎರಡನೇ ಶತಕ ಇದಾಗಿದೆ. ಇದೀಗ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ಅಜೇಯ 166 ರನ್ ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದ್ದ ದಾಖಲೆಯೊಂದನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.

ಶ್ರೀಲಂಕಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಕೊಹ್ಲಿ 85 ಎಸೆತಗಳಲ್ಲಿ ಶತಕ ಸಿಡಿಸಿದರು. ಇದರೊಂದಿಗೆ ಒಂದೇ ದೇಶದ ವಿರುದ್ಧ ಅತೀ ಹೆಚ್ಚು ಶತಕ ಬಾರಿಸಿದ ಕ್ರಿಕೆಟಿಗ ದಾಖಲೆ ಇದೀಗ ಕೊಹ್ಲಿ ಪಾಲಾಗಿದೆ. ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಶ್ರೀಲಂಕಾ ವಿರುದ್ಧ 9 ಶತಕ ದಾಖಲಿಸಿಕೊಂಡಿದ್ದರು. ಸಚಿನ್ ತೆಂಡೂಲ್ಕರ್ 164 ಪಂದ್ಯಗಳ 102 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರೆ ಕೊಹ್ಲಿ 104 ಪಂದ್ಯಗಳ 101 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ.

85 ಎಸೆತಗಳಲ್ಲಿ ಶತಕ ಪೂರೈಸುತ್ತಿದ್ದಂತೆ ಕೊಹ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಶ್ರೀಲಂಕಾ ಬೌಲರ್​ಗಳನ್ನು ದಂಡಿಸಿದ ವಿರಾಟ್ ಕೊಹ್ಲಿ, 110 ಎಸೆತಗಳಲ್ಲಿ ಅಜೇಯ 166ರನ್ ಸಿಡಿಸಿದರು. ಈ ಇನ್ನಿಂಗ್ಸ್​​ನಲ್ಲಿ 13 ಬೌಂಡರಿ ಹಾಗೂ 8 ಸಿಕ್ಸ್ ಒಳಗೊಂಡಿತ್ತು.

ವಿರಾಟ್ ಕೊಹ್ಲಿ ಶತಕದ ಇನ್ನಿಂಗ್ಸ್​​ನಲ್ಲಿ ಕೆಲವು ಆಕರ್ಷಕ ಹೊಡೆತಗಳ ಮೂಲಕ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದರು. ಕೊಹ್ಲಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಸಿಗ್ನೇಚರ್ ಹೊಡೆತ, ಹೆಲಿಕಾಪ್ಟರ್​ ಶಾಟ್ ಬಾರಿಸುವಲ್ಲಿ ಯಶಸ್ವಿಯಾದರು. ವಿಕೆಟ್​ನಿಂದ ಮುಂದೆ ಬಂದು ವಿರಾಟ್ ಹೆಲಿಕಾಪ್ಟರ್​ ಶಾಟ್ ಸಿಡಿಸಿದರು. 97 ಮೀ. ದೂರು ಸಿಡಿದ ಸಿಕ್ಸರ್​ ನೋಡಿದ ವಿರಾಟ್​ ಫ್ಯಾನ್ಸ್​ ಮೈದಾನದಲ್ಲಿ ಕುಣಿದು ಕುಪ್ಪಳಿಸಿದರು.