ಕ್ರೀಡೆ

ಚೆಪಾಕ್​ನಲ್ಲಿ ಮಿಂಚಿದ ಕೆ.ಎಲ್​. ರಾಹುಲ್ ; CSK ವಿರುದ್ಧ 25 ರನ್​ಗಳಿಂದ ಗೆದ್ದ ಡೆಲ್ಲಿ ಬಾಯ್ಸ್​​

CSK : ಚೈನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಶನಿವಾರ (ಏ.05) ಚೈನ್ನೈ ಸೂಪರ್​ ಕಿಂಗ್​(ಸಿಎಸ್​ಕೆ) ತಂಡ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 25 ರನ್​ಗಳಿಂದ ಗೆದ್ದಿದೆ.

ಡೆಲ್ಲಿ ಪರ ಕನ್ನಡಿಗ ಕೆ.ಎಲ್​.ರಾಹುಲ್ ಭರ್ಜರಿ ಅರ್ಧ ಶತಕದ ಸಹಾಯದಿಂದ (51 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿ) 77 ರನ್ ಗಳಿಸುವ ಮೂಲಕ ಡೆಲ್ಲಿ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 183 ರನ್ ಗಳಿಸಿತು.

184 ರನ್​ಗಳ ಗುರಿ ಬೆನ್ನಟ್ಟಿದ ಸಿಎಸ್​​ಕೆ 20 ಒವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 158 ರನ್​ ಗಳಿಸಲಷ್ಟೇ ಶಕ್ತವಾಗಿತು. ಈ ಮೂಲಕ ನಾಲ್ಕು ಮ್ಯಾಚ್​ಗಳನ್ನು ಆಡಿರುವ ಸಿಎಸ್​ಕೆ ಸತತ ಮೂರು ಪಂದ್ಯಗಳಲ್ಲಿ ಸೋತಿದೆ.

ಮಾ.22ರಿಂದ ಶುರುವಾದ ಐಪಿಎಲ್ 18ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಉತ್ತಮ ಆಲ್‌ರೌಂಡ್ ಪ್ರದರ್ಶನದ ಮೂಲಕ ಪ್ರಸ್ತುತ ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಮಿಂಚುತ್ತಿದೆ. ಈ ಮಧ್ಯೆ ಐದು ಬಾರಿ ಚಾಂಪಿಯನ್ಸ್ ತಂಡ ಎಂದೇ ಗುರುತಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್, ಆಡಿದ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದೇ ಒಂದು ಮ್ಯಾಚ್‌ನಲ್ಲಿ ಗೆಲುವು ಸಾಧಿಸಿದೆ.(ಏಜೆನ್ಸೀಸ್​)