ಕ್ರೀಡೆ

ಸಾಮಾಜಿಕ ಮತ್ತು ಶೈಕ್ಷಣಿಕ ಚೆಸ್‌ನ ಅಂತಾರಾಷ್ಟ್ರೀಯ ಸಮ್ಮೇಳನ: ಕೆಐಐಟಿನಿಂದ ಒಪ್ಪಂದ | Chess

ಭುವನೇಶ್ವರ: ಇಲ್ಲಿನ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ಮತ್ತು ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಕೆಐಎಸ್‌ಎಸ್‌) ಸಾಮಾಜಿಕ ಮತ್ತು ಶೈಕ್ಷಣಿಕ ಚೆಸ್‌ ( Chess ) ನ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲು ಫೆಡರೇಷನ್ ಆಫ್‌ ಇಂಟರ್‌ ನ್ಯಾಷನಲ್ ಡೆಸ್ ಎಚೆಕ್ಸ್ (FIDE) ಮತ್ತು ಆಲ್ ಇಂಡಿಯಾ ಚೆಸ್ ಫೆಡರೇಶನ್ (AICF) ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಭುವನೇಶ್ವರದಲ್ಲಿ 2026ರ ಜನವರಿಯಲ್ಲಿ ಈ ಸಮ್ಮೇಳನ ನಡೆಯಲಿದ್ದು, ಕೆಐಐಟಿ ವಿಶ್ವವಿದ್ಯಾಲಯವು ಆತಿಥ್ಯ ವಹಿಸಲಿದೆ. ಕೆಐಐಟಿ ಹಾಗೂ ಕೆಐಎಸ್‌ಎಸ್​ನ ಸಂಸ್ಥಾಪಕರಾದ ಶ್ರೀ ಅಚ್ಯುತ ಸಮಂತ ಹಾಗೂ ಫಿಡೆ ಅಧ್ಯಕ್ಷರಾದ ಅರ್ಕಾರ್ಡಿ ಡ್ವೊರ್ಕೊವಿಚ್ ಮತ್ತು ಎಐಸಿಎಫ್‌ ಅಧ್ಯಕ್ಷರಾದ ಶ್ರೀ ನಿತಿನ್ ನಾರಂಗ್ ಅವರು ಒಪ್ಪಂದಕ್ಕೆ ಗೋವಾದಲ್ಲಿ ಸಹಿ ಹಾಕುವ ವೇಳೆ ಉಪಸ್ಥಿತರಿದ್ದರು.

ಈ ಪಾಲುದಾರಿಕೆಯು ಕೆಐಐಟಿ, ಕೆಐಎಸ್‌ಎಸ್‌ ಮತ್ತು ಒಡಿಶಾಕ್ಕೆ ಹೆಮ್ಮೆಯ ವಿಷಯವಾಗಿದೆ. ಇದು ಜಾಗತಿಕ ಕ್ರೀಡಾ ಸಂಸ್ಥೆಗಳ ಬೆಳೆಯುತ್ತಿರುವ ನಂಬಿಕೆಯನ್ನು ಮತ್ತು ಕ್ರೀಡೆಗಳ ಮೂಲಕ ಶಿಕ್ಷಣದ ಶಕ್ತಿಯ ಮೇಲಿನ ಅವರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಕೆಐಐಟಿ ಹಾಗೂ ಕೆಐಎಸ್‌ಎಸ್‌ ಸದಾ ಶಿಕ್ಷಣ ಚಟುವಟಿಕೆಗೆ ಜೊತೆಗೆ ಕ್ರೀಡಾ ಮನೋಭಾವ, ಶಿಸ್ತು ಮತ್ತು ಶ್ರೇಷ್ಠತೆಯನ್ನು ಉತ್ತೇಜಿಸುತ್ತಾ ಬರುತ್ತಿದೆ. ಅಚ್ಯುತ ಸಮಂತ ಅವರು ಇಂತಹ ಚಟುವಟಿಕೆಗಳಿಗೆ ಎಲ್ಲ ರೀತಿಯ ಪ್ರೋತ್ಸಾಹವನ್ನು ನೀಡುತ್ತಾ ಬರುತ್ತಿದ್ದಾರೆ. ಕ್ರೀಡೆಗಳ ಮೂಲಕ ಶಿಕ್ಷಣದ ಶಕ್ತಿಯ ಮೇಲಿನ ಸಮಂತ ಅವರ ನಂಬಿಕೆಗೆ ಇದು ನಿದರ್ಶನವಾಗಿದೆ.

ಫಿಡೆ ಅಧ್ಯಕ್ಷರಾದ ಅರ್ಕಾರ್ಡಿ ಡ್ವೊರ್ಕೊವಿಚ್ ಮತ್ತು ಎಐಸಿಎಫ್‌ ಅಧ್ಯಕ್ಷರಾದ ಶ್ರೀ ನಿತಿನ್ ನಾರಂಗ್ ಅವರು ನಮ್ಮ ಮೇಲೆ ಹಾಗೂ ನಮ್ಮ ಸಂಸ್ಥೆಯ ಮೇಲೆ ಇಟ್ಟಿರುವ ಅಪಾರ ನಂಬಿಕೆಗೆ ಆಭಾರಿಯಾಗಿದ್ದೇನೆ. ಶಿಕ್ಷಣ, ಸೇರ್ಪಡೆ ಮತ್ತು ಸಬಲೀಕರಣಕ್ಕಾಗಿ ಚೆಸ್ ಅನ್ನು ಒಂದು ಉತ್ತಮ ಸಾಧನವಾಗಿ ಉತ್ತೇಜಿಸಲು ಹಾಗೂ ಜಾಗತಿಕ ಚೆಸ್ ಆಂದೋಲನದಲ್ಲಿ ನಮ್ಮ ದೇಶವನ್ನು ನಿಜವಾದ ನಾಯಕನನ್ನಾಗಿ ಮಾಡಲು ನಾವೆಲ್ಲ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಡಾ. ಅಚ್ಯುತ ಸಮಂತ ಹೇಳಿದರು.