ಕ್ರೀಡೆ

ಏಷ್ಯಾಡ್​ನಲ್ಲಿ ಕಣಕ್ಕಿಳಿಯಲಿದ್ದಾರೆ 38 ಕನ್ನಡಿಗರು; ಯಾವ ಕ್ರೀಡೆಯಲ್ಲಿ ಯಾರ್ಯಾರು? ಇಲ್ಲಿದೆ ವಿವರ…

ಹಾಂಗ್​ಝೌ: ಈ ಬಾರಿ ಏಷ್ಯಾಡ್​ನಲ್ಲಿ ಸ್ಪರ್ಧಿಸುವ ಭಾರತದ 655 ಕ್ರೀಡಾಪಟುಗಳ ಪೈಕಿ ಹರಿಯಾಣದಿಂದ ಗರಿಷ್ಠ 89 ಕ್ರೀಡಾಪಟುಗಳಿದ್ದಾರೆ. ಮಹಾರಾಷ್ಟ್ರದ 73, ಪಂಜಾಬ್​ನ 50, ತಮಿಳುನಾಡಿನ 46, ಕೇರಳದ 42, ಮಣಿಪುರದ 38 ಕ್ರೀಡಾಪಟುಗಳಿದ್ದಾರೆ. ಕರ್ನಾಟಕದಿಂದ 38 ಸ್ಪರ್ಧಿಗಳಿದ್ದಾರೆ. ಸಿಕ್ಕಿಂ, ತ್ರಿಪುರ ಹೊರತಾಗಿ ಉಳಿದೆಲ್ಲ ರಾಜ್ಯಗಳಿಂದ ಕನಿಷ್ಠ ಒಬ್ಬರಾದರೂ ಸ್ಪರ್ಧಿಗಳಿದ್ದಾರೆ.

ಏಷ್ಯಾಡ್​ನಲ್ಲಿ ಸ್ಪರ್ಧಿಸಲಿರುವ ರಾಜ್ಯದ ಕ್ರೀಡಾಪಟುಗಳ ವಿವರ ಇಲ್ಲಿದೆ:

*ಟೆನಿಸ್​: ರೋಹನ್​ ಬೋಪಣ್ಣ

*ಬ್ಯಾಡ್ಮಿಂಟನ್​: ಅಶ್ವಿನಿ ಪೊನ್ನಪ್ಪ, ಮಿಥುನ್​ ಮಂಜುನಾಥ್​, ಸಾಯಿ ಪ್ರತಿಕ್​

*ಕ್ರಿಕೆಟ್​: ರಾಜೇಶ್ವರಿ ಗಾಯಕ್ವಾಡ್​

*ವಾಲಿಬಾಲ್​: ಅಶ್ವಲ್​ ರೈ, ಮನೋಜ್​ ಮಂಜುನಾಥ್​, ಹರಿಪ್ರಸಾದ್​

*ಶೂಟಿಂಗ್​: ದಿವ್ಯಾ ಟಿಎಸ್​

*ಅಥ್ಲೆಟಿಕ್ಸ್​: ಬೆಳ್ಳಿಯಪ್ಪ ಎಬಿ (ಮ್ಯಾರಥಾನ್​), ಮಿಜೋ ಚಾಕೋ ಕುರಿಯನ್​ (4/400 ಮೀ. ರಿಲೇ), ಸಿಂಚಲ್​ ಕಾವೇರಮ್ಮ (400 ಮೀ. ಹರ್ಡಲ್ಸ್​), ಜೆಸ್​ ಸಂದೇಶ್​ (ಹೈಜಂಪ್​), ಯಶಸ್​ ಪಾಲಾಕ್ಷ (400 ಮೀ. ಹರ್ಡಲ್ಸ್​), ನಿಹಾಲ್​ ಜೋಯೆಲ್​ (ಮಿಶ್ರ ರಿಲೇ)

*ಈಜು: ಶ್ರೀಹರಿ ನಟರಾಜ್​, ಲಿಖಿತ್​ ಎಸ್​ಪಿ, ಅನೀಶ್​ ಗೌಡ, ತನಿಶ್​ ಜಾರ್ಜ್​ ಮ್ಯಾಥ್ಯೂ, ಉತ್ಕರ್ಷ್​ ಪಾಟೀಲ್​, ನೀನಾ ವೆಂಕಟೇಶ್​, ಲಿನೇಷಾ ಎಕೆ, ಧಿನಿಧಿ ದೇಸಿಂಘು, ಹಷಿಕಾ ರಾಮಚಂದ್ರ

*ಗಾಲ್ಫ್​: ಖಾಲಿನ್​ ಜೋಶಿ, ಅದಿತಿ ಅಶೋಕ್​, ಪ್ರಣವಿ ಅರಸ್​, ಅವನಿ ಪ್ರಶಾಂತ್​

*ಸೈಕ್ಲಿಂಗ್​: ವೆಂಕಪ್ಪ ಕೆಂಗಲಗುತ್ತಿ

*ಬಾಸ್ಕೆಟ್​ಬಾಲ್​: ಬಾಂಧವ್ಯ ಎಚ್​ಎಂ, ಸಹನಾ ಎಸ್​ಎಂ, ಸಂಜನಾ ರಮೇಶ್​

*ಇ ಸ್ಪೋರ್ಟ್ಸ್​: ಅಕ್ಷಜ್​ ಶೆಣೈ, ಆದಿತ್ಯ ಸೆಲ್ವರಾಜ್​

*ಬಾಕ್ಸಿಂಗ್​: ನಿಶಾಂತ್​ ದೇವ್​

*ಜಿಯು-ಜಿತ್ಸು: ಉಮಾಮಹೇಶ್ವರ್​ ರೆಡ್ಡಿ

*ಸ್ಪೋರ್ಟ್ಸ್​ ಕ್ಲೆಂಬಿಂಗ್​: ಭರತ್​ ಕಾಮತ್​, ಪ್ರತಿಕ್ಷಾ ಕೆ.