ಕ್ರೀಡೆ

ಉಗಾಂಡ ಪ್ಯಾರಾ ಬ್ಯಾಡ್ಮಿಂಟನ್​ ಟೂರ್ನ್​ಮೆಂಟ್​ನಲ್ಲಿ ಕರ್ನಾಟಕ ತಂಡಕ್ಕೆ 3 ಚಿನ್ನ, 5 ಕಂಚು..

ಬೆಂಗಳೂರು: ಉಗಾಂಡದ ಕಂಪಾಲದಲ್ಲಿ ನಡೆದ ಉಗಾಂಡ ಪ್ಯಾರಾ ಬ್ಯಾಡ್ಮಿಂಟನ್​ ಟೂರ್ನ್​ಮೆಂಟ್​ನಲ್ಲಿ ಕರ್ನಾಟಕ ಪ್ಯಾರಾ ಬ್ಯಾಡ್ಮಿಂಟನ್​ ತಂಡ 8 ಪದಕಗಳನ್ನು ಗಳಿಸಿದೆ.

ಸೆ. 13ರಿಂದ 18ರ ವರೆಗೆ ನಡೆದ ಈ ಬ್ಯಾಡ್ಮಿಂಟನ್​ ಟೂರ್ನ್​ಮೆಂಟ್​ನಲ್ಲಿ ಕರ್ನಾಟಕ ಬ್ಯಾಡ್ಮಿಂಟನ್​ ತಂಡ 3 ಚಿನ್ನ ಹಾಗೂ 5 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.

ಕರ್ನಾಟಕ ತಂಡದ ಸದಸ್ಯರಾದ ಅಮ್ಮು ಮೋಹನ್, ಮಂಜುನಾಥ್ ಚಿಕ್ಕಯ್ಯ, ಗೌತಮ್​, ಶರಣಪ್ಪ ಮತ್ತು ಜಮ್​​ಷದ್​ ಈ ಪದಕಗಳನ್ನು ಗಳಿಸಿದ್ದಾರೆ ಎಂಬುದಾಗಿ ಕರ್ನಾಟಕ ಪ್ಯಾರಾ ಬ್ಯಾಡ್ಮಿಂಟನ್ ಅಸೋಸಿಯೇಷನ್​ ಕಾರ್ಯದರ್ಶಿ ಕೆ.ವೈ. ವೆಂಕಟೇಶ್​ ತಿಳಿಸಿದ್ದಾರೆ.