ಕ್ರೀಡೆ

ಭಾರತ ಎ ತಂಡದಲ್ಲಿ ಕನ್ನಡತಿ ಶುಭಾ ಸತೀಶ್​ಗೆ ಸ್ಥಾನ

ಮುಂಬೈ: ಕೇರಳದ ಯುವ ಆ್​ ಸ್ಪಿನ್ನರ್​ ಮಿನ್ನು ಮಣಿ ಆಗಸ್ಟ್​ 7ರಿಂದ ನಡೆಯಲಿರುವ ಆಸ್ಟ್ರೆಲಿಯಾ ಪ್ರವಾಸಕ್ಕೆ ಭಾರತ ಎ ಮಹಿಲಾ ತಂಡದ ನಾಯಕಿನಾಗಿ ನೇಮಕಗೊಂಡಿದ್ದಾರೆ. ಶ್ವೇತಾ ಸೆಹ್ರಾವತ್​ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಶುಭಾ ಸತೀಶ್​ ತಂಡದಲ್ಲಿರುವ ಏಕೈಕ ಕನ್ನಡತಿಯಾಗಿದ್ದಾರೆ.

ಭಾರತ ತಂಡ ಪ್ರವಾಸದಲ್ಲಿ 3 ಟಿ20, 3 ಏಕದಿನ ಮತ್ತು ಒಂದು ಚತುರ್ದಿನ ಪಂದ್ಯವನ್ನು ಆತಿಥೇ ಆಸ್ಟ್ರೆಲಿಯಾ ಎ ತಂಡದ ವಿರುದ್ಧ ಆಡಲಿದೆ. ಈಗಾಗಲೆ ಭಾರತ ರಾಷ್ಟ್ರೀಯ ತಂಡದ ಪರ ಆಡಿರುವ ಸಜನಾ ಸಜೀವನ್​, ಉಮಾ ಛೇಟ್ರಿ ಮತ್ತು ಸೈಕಾ ಇಶಾಕ್​ ಕೂಡ ಎ ತಂಡದಲ್ಲಿದ್ದಾರೆ.

ಭಾರತ ಎ ತಂಡ ಆಗಸ್ಟ್​ 7, 9, 11ರಂದು ಬ್ರಿಸ್ಬೇನ್​ನ ಅಲನ್​ ಬಾರ್ಡರ್​ ಫೀಲ್ಡ್​ನಲ್ಲಿ 3 ಟಿ20 ಪಂದ್ಯಗಳನ್ನು ಆಡಲಿದೆ. ನಂತರ ಆಗಸ್ಟ್​ 14, 16, 18ರಂದು 3 ಏಕದಿನ ಪಂದ್ಯಗಳನ್ನು ಮೆಕಾಯ್​ನಲ್ಲಿ ಆಡಲಿದೆ. ಆಗಸ್ಟ್​ 22ರಿಂದ 25ರವರೆಗೆ ಗೋಲ್ಡ್​ಕೋಸ್ಟ್​ನಲ್ಲಿ ಚತುರ್ದಿನ ಟೆಸ್ಟ್​ ಪಂದ್ಯ ನಡೆಯಲಿದೆ.

ಭಾರತ ಎ ತಂಡ: ಮಿನ್ನು ಮಣಿ (ನಾಯಕ), ಶ್ವೇತಾ ಸೆಹ್ರಾವತ್​ (ಉಪನಾಯಕಿ), ಪ್ರಿಯಾ ಪೂನಿಯಾ, ಶುಭಾ ಸತೀಶ್​, ತೇಜಲ್​ ಹಸಬ್ನಿಸ್​, ಕಿರಣ್​ ನವಗಿರೆ, ಸಜನಾ ಸಜೀವನ್​, ಉಮಾ ಛೇಟ್ರಿ (ವಿ.ಕೀ), ಶಿಪ್ರ ಗಿರಿ (ವಿ.ಕೀ), ರಾವಿ ಬಿಷ್ಟ್​, ಸೈಕಾ ಇಶಾಕ್​, ಮನ್ನತ್​ ಕಶ್ಯಪ್​, ತನುಜಾ ತನ್ವರ್​, ಪ್ರಿಯಾ ಮಿಶ್ರಾ, ಮೇನಾ ಸಿಂಗ್​, ಸಯಾಲಿ ಸತ್ಘರೆ, ಶಭ್ನಾಮ್​ ಶಕೀಲ್​, ಎಸ್​. ಯಶಶ್ರೀ.