ಕ್ರೀಡೆ

ಪ್ಯಾರಿಸ್​ ಒಲಿಂಪಿಕ್ಸ್​ಗೆ ಭಾರತ ಟೇಬಲ್​ ಟೆನಿಸ್​ ತಂಡದಲ್ಲಿ ಕನ್ನಡತಿ ಅರ್ಚನಾ ಕಾಮತ್​ಗೆ ಸ್ಥಾನ

ನವದೆಹಲಿ: ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ಗೆ ಭಾರತದ ಪುರುಷರ ಮತ್ತು ಮಹಿಳಾ ಟೇಬಲ್​ ಟೆನಿಸ್​ ತಂಡವನ್ನು ಪ್ರಕಟಿಸಲಾಗಿದ್ದು, ಅನುಭವಿಗಳಾದ ಶರತ್​ ಕಮಲ್​ ಮತ್ತು ಮನಿಕಾ ಬಾತ್ರ ಸಾರಥ್ಯ ವಹಿಸಿಕೊಳ್ಳಲಿದ್ದಾರೆ. ಕರ್ನಾಟಕದ ಯುವ ಆಟಗಾರ್ತಿ ಅರ್ಚನಾ ಕಾಮತ್​ ಮಹಿಳಾ ತಂಡದಲ್ಲಿ ಸ್ಥಾನ ಸಂಪಾದಿಸಿದ್ದು, ಇದೇ ಮೊದಲ ಬಾರಿಗೆ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿದ್ದಾರೆ.

ಹಾಲಿ ವಿಶ್ವ ರ್ಯಾಂಕಿಂಗ್​ ಆಧಾರದಲ್ಲಿ ತಂಡವನ್ನು ಆರಿಸಲಾಗಿದ್ದು, ವಿಶ್ವ ನಂ. 103 ಆಟಗಾರ್ತಿ ಅರ್ಚನಾ, ಮನಿಕಾ ಮತ್ತು ಶ್ರೀಜಾ ಅಕುಲಾ ಜತೆ ಸ್ಥಾನ ಪಡೆದಿದ್ದಾರೆ. ಐಹಿಕಾ ಮುಖರ್ಜಿ (133) ಸ್ಥಾನ ವಂಚಿತರಾಗಿದ್ದಾರೆ. ಪುರುಷರ ವಿಭಾಗದಲ್ಲಿ ಶರತ್​ ಜತೆಗೆ ಹಮೀರ್ತ್​ ದೇಸಾಯಿ ಮತ್ತು ಮಾನವ್​ ಠಕ್ಕರ್​ ಸ್ಥಾನ ಪಡೆದಿದ್ದಾರೆ.