ಹಾಂಗ್ಝೌ: ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಏಷ್ಯಾಡ್ ಅಂಗಳದಲ್ಲಿ ಬುಧವಾರ ಸ್ಪರ್ಧೆಗೆ ಇಳಿಯಲಿದ್ದಾರೆ. ಸಂಜೆ 4.35ರಿಂದ ನಡೆಯಲಿರುವ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್, 2018ರ ಆವೃತ್ತಿಯಲ್ಲಿ ಗೆದ್ದಿರುವ ಸ್ವರ್ಣ ಪದಕವನ್ನು ಉಳಿಸಿಕೊಳ್ಳುವ ನಿರೀಕ್ಷೆ ಇದೆ.
ನೀರಜ್ಗೆ ಪ್ರಮುಖ ಪ್ರತಿಸ್ಪರ್ಧಿ ಎನಿಸಿದ್ದ ಪಾಕಿಸ್ತಾನದ ಅರ್ಷದ್ ನದೀಂ ಮೊಣಕಾಲು ಗಾಯದಿಂದಾಗಿ ಕೊನೇಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಇದರಿಂದ ನೀರಜ್ ಸ್ವರ್ಣ ಗೆಲುವಿನ ಹಾದಿ ಸುಗಮಗೊಂಡಿದೆ. ಭಾರತದ ಮತ್ತೋರ್ವ ಸ್ಪರ್ಧಿ ಕಿಶೋರ್ ಜೆನಾ ಬೆಳ್ಳಿ ಮೇಲೆ ಕಣ್ಣಿಟ್ಟಿದ್ದಾರೆ. ಅರ್ಷದ್ ನದೀಂ 2018ರ ಏಷ್ಯಾಡ್ನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದರು.
ಸ್ಪರ್ಧೆ ಆರಂಭ: ಸಂಜೆ 4.35
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್