ಕ್ರೀಡೆ

ನಿಗೂಢ ಚಿತ್ರವೊಂದನ್ನೂ ಪೋಸ್ಟ್ ಮಾಡಿದ ಜಡೇಜಾ; ಟೆಸ್ಟ್​ಗೆ ನಿವೃತ್ತಿಯೇ ಎಂದ್ರು ನೆಟ್ಟಿಗರು! | Mysterious Picture

Mysterious Picture: ಟೀಮ್​ ಇಂಡಿಯಾದ ಆಲ್​ರೌಂಡರ್​ ರವಿಂದ್ರ ಜಡೇಜಾ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ, ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರ ಸಖತ್ ​ವೈರಲ್ ಆಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

ಹೌದು, ಜಡೇಜಾ ತಮ್ಮ ಹಳೆಯ ಜರ್ಸಿಯು ಪೋಸ್ಟ್​ವೊಂದನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಪೊಸ್ಟ್​ ಏನನ್ನು ಸೂಚಿಸುತ್ತದೆ ಎಂದು ಅಭಿಮಾನಿಗಳು ಪ್ರಶ್ನೆಯನ್ನು ಹಾಕಿಕೊಳ್ಳುವ ಮೂಲಕ ಉತ್ತರನ್ನು ಹುಡುಕುತ್ತಿದ್ದಾರೆ. ಕೆಲವರು ಜಡೇಜಾ ತಮ್ಮ ಅಂತರಾಷ್ಟ್ರಿಯ ಟೆಸ್ಟ್​ ಕ್ರಿಕೆಟ್​ಗೆ ವಿದಾಯವನ್ನು ಹೇಳುತ್ತಿದ್ದಾರೆ ಎಂದು ಭಾವಿಸಿದ್ದಾರೆ. ಅಲ್ಲದೆ, ಏನು ಎಂಬುವ ಪ್ರಶ್ನೆ ಎಲ್ಲರಲ್ಲೂ ಮೂಡಿದ್ದು, ಕೂತುಹಲ ಹೆಚ್ಚಿಸಿದೆ. ಈ ಪೋಸ್ಟ್​ಗೆ ತರೇಹವಾರಿ ಕಾಮೆಂಟ್​ಗಳು ಹರಿದುಬಂದಿದ್ದು, ಹ್ಯಾಪಿ ರಿಟರ್ನೆಮೆಂಟ್​ ಜಡ್ಡು ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಇತ್ತೀಚೆಗೆ ನಡೆಸಿದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಮ್ಮ ಕಳಪೆ ಪ್ರದರ್ಶನದಿಂದಾಗಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ, ಜಡೇಜಾ ಕೂಡ ಟೀಕಾಕಾರರ ತಪ್ಪಿಸಿಕೊಳ್ಳಲುಸಾಧ್ಯವಾಗಲಿಲ್ಲ. ಭಾರತ 1-3 ಅಂತರದಲ್ಲಿ ಸೋತ ಟೆಸ್ಟ್ ಸರಣಿಯಲ್ಲಿ ಆಲ್‌ರೌಂಡರ್ ಆಗಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುವಲ್ಲಿ ಅವರು ವಿಫಲರಾದರು.

ಗಮನಾರ್ಹವಾಗಿ, ಕಳೆದ ವರ್ಷ ಜೂನ್‌ನಲ್ಲಿ ಭಾರತ ವಿಶ್ವಕಪ್ ಪ್ರಶಸ್ತಿ ಗೆದ್ದ ನಂತರ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ T20I ಕ್ರಿಕೆಟ್‌ನಿಂದ ನಿವೃತ್ತರಾದರು. ಆದಾಗ್ಯೂ, ಅವರು ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ಪಂದ್ಯಗಳಲ್ಲಿ ಜಡೇಜಾ ಸಕ್ರಿಯರಾಗಿದ್ದಾರೆ.(ಏಜೆನ್ಸೀಸ್)