CSK:ಇಂಡಿಯನ್ ಪ್ರೀಮಿಯರ್ ಲೀಗ್ 2025(IPL)ರ 18ನೇ ಆವೃತ್ತಿಯಲ್ಲಿ 4 ಪಂದ್ಯಗಳನ್ನು ಆಡಿರುವ ಚೈನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ) ತಂಡ 1 ಪಂದ್ಯವನ್ನು ಗೆದ್ದಿದೆ. ಅಲ್ಲದೆ, ಉಳಿದ ಮೂರು ಪಂದ್ಯಗಳಲ್ಲಿ ಸೋತಿದ್ದು, 2 ಪಂದ್ಯಗಳಲ್ಲಿ ತನ್ನ ತವರು ಕ್ರೀಡಾಂಗಣ ಚೆಕಾಪ್ನಲ್ಲಿ ಮುಖಭಂಗ ಅನುಭವಿಸಿದೆ.
ಈ ಸೋಲುಗಳ ಸಾಮಾನ್ಯ ಲಕ್ಷಣವೆಂದರೆ ಸಿಎಸ್‌ಕೆ ತಂಡದ ಗುರಿಗಳನ್ನು ಬೆನ್ನಟ್ಟುವಲ್ಲಿ ವಿಫಲವಾಗಿದೆ. ಮುಂಬೈ ವಿರುದ್ಧ ನಾಲ್ಕು ವಿಕೆಟ್‌ಗಳಿಂದ ಗೆದ್ದರೂ, ಆರ್‌ಸಿಬಿ ವಿರುದ್ಧ 50 ರನ್‌ಗಳಿಂದ, ಆರ್‌ಆರ್ ವಿರುದ್ಧ 6 ರನ್‌ಗಳಿಂದ ಮತ್ತು ನಂತರ ಡಿಸಿ ವಿರುದ್ಧ 25 ರನ್‌ಗಳಿಂದ ಸೋತಿದೆ. ಅಗ್ರ ಕ್ರಮಾಂಕವೂ ಕಳಪೆ ಪ್ರದರ್ಶನ ನೀಡಿದೆ.
ಇದೀಗ ಈ ಕಳಪೆ ಪ್ರದರ್ಶನದಿಂದ IPL 2025ರ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದೆ. ಅಲ್ಲದೆ, ಸಿಎಸ್‌ಕೆ ಸ್ಟಾರ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಕಳಪೆ ಬ್ಯಾಟಿಂಗ್ನಿಂದ ಹಲವು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೆ, ಭಾರತೀಯ ಆಟಗಾರರ ಕೂಡ ನೇರವಾಗಿ ಮತ್ತು ಪರೋಕ್ಷವಾಗಿ ಕ್ಯಾಪ್ಟನ್ ಕೂಲ್ ಬಗ್ಗೆ ಟೀಕಿಸುತ್ತಿದ್ದಾರೆ. ಇದೀಗ ಭಾರತೀಯ ಮಾಜಿ ಆಟಗಾರೊಬ್ಬರು ಯುವ ಆಟಗಾರರಿಗೆ ದಾರಿ ಮಾಡಿ ಕೊಡುವ ಮೂಲಕ ನಿರ್ಗಮಿಸುವುದು ಒಳ್ಳೆಯದು ಎಂದು ಹೇಳಿದ್ದಾರೆ.
ಸಿಎಸ್‌ಕೆ ತಂಡದ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಮಾತನಾಡಿರುವ ಭಾರತೀಯ ಮಾಜಿ ಆಟಗಾರ ವಾಸಿಮ್ ಜಾಫರ್ ,'' ಧೋನಿ ಫ್ರಾಂಚೈಸಿಯನ್ನು ಮುನ್ನಡೆಸದಿದ್ದರೆ ಮತ್ತು ಇದೇ ರೀತಿ ಬ್ಯಾಟಿಂಗ್ ಮುಂದುವರಿಸಿದರೆ, ಈಗ ಯುವ ಆಟಗಾರನಿಗೆ ದಾರಿ ಮಾಡಿಕೊಡಬೇಕು ಎಂದು ಭಾವಿಸಿತ್ತೇನೆ'' ಎಂದು ಹೇಳಿದ್ದಾರೆ.
''ಹೌದು, ಅವರು ಈ ರೀತಿ ಬ್ಯಾಟಿಂಗ್ ಮುಂದುವರೆಸಿದರೆ ಅವರ ಬ್ಯಾಟಿಂಗ್ ನೋಡುವುದು ಸಲ್ಪ ಕಷ್ಟ ಮತ್ತು ನೋವುಂಟು ಮಾಡುತ್ತದೆ'' ಎಂದು ಹೇಳಿದ್ದಾರೆ.(ಏಜೆನ್ಸೀಸ್)